ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ

Date:

Advertisements

50ರ ದಶಕದಲ್ಲಿ, ಹಳೆಯ ರಂಗಭೂಮಿ ನಟಿಯರು ನೇಪಥ್ಯಕ್ಕೆ ಸರಿದು, ‘ಹರಿಣಿ’ ಪ್ರಯೋಗದಿಂದಾಗಿ ಎಳೆಯ ನವ ನಟಿಯರಿಗಾಗಿ ಹುಡುಕಾಟ ಆರಂಭವಾಯಿತು. ಅನ್ಯಭಾಷೆಯಲ್ಲಿ ಯಶಸ್ಸು ಪಡೆದ ನಟಿಯರನ್ನು ಕರೆತರುವ ಪರಿಪಾಟ ಮೊದಲಾಯಿತು. ಇಂಥ ಪ್ರಯೋಗಗಳ ಫಲವಾಗಿ ಅನ್ಯಭಾಷೆಯ ಪಿ. ಭಾನುಮತಿ (ಏಕೈಕ ಚಿತ್ರ, ನಳದಮಯಂತಿ-1957) ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಜಮುನಾರಂಥವರನ್ನು ಕನ್ನಡಕ್ಕೆ ಕರೆತಂದರೆ, ನಮ್ಮವರೇ ಆದ ಬಿ. ಸರೋಜಾದೇವಿಯವರೂ ಅದೇ ಕಾಲಕ್ಕೆ ಈ ಹುಡುಕಾಟದಲ್ಲಿ ಬೆಳಕಿಗೆ ಬಂದರು.

ಹೊನ್ನಪ್ಪ ಭಾಗವತ‌ರ್ ಜೊತೆಯಲ್ಲಿ ಬಿ. ಸರೋಜಾದೇವಿಯವರು ನಟಿಸಿದ ಮೊದಲ ಚಿತ್ರ ‘ಮಹಾಕವಿ ಕಾಳಿದಾಸ’ (1955) ಆದರೂ ಅದಕ್ಕೂ ಮುನ್ನ ಅದೇ ವರ್ಷ ‘ಆಷಾಢಭೂತಿ’ ಬಿಡುಗಡೆಯಾಗಿತ್ತು. ಅವರು ನಿರ್ಮಾಪಕರಿಗೆ ಎಷ್ಟು ಪ್ರಿಯರಾದರೆಂದರೆ 1956ರಲ್ಲಿ ಬಿಡುಗಡೆಯಾದ ‘ಕಚದೇವಯಾನಿ’, ‘ಕೋಕಿಲವಾಣಿ’, ‘ಪಂಚರತ್ನ’ ಚಿತ್ರಗಳಲ್ಲಿ ಬಿ. ಸರೋಜಾದೇವಿ ನಾಯಕಿಯರಾಗಿದ್ದರು. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸತೊಡಗಿದರು. ಆ ಬಳಿಕ ಎನ್‌ಟಿಆರ್‌ರವರ ಜೊತೆಯಲ್ಲಿ ‘ಪಾಂಡುರಂಗ ಮಹಾತ್ಮಂ’ (1957) ಚಿತ್ರದಲ್ಲಿ ನಾಯಕಿಯಾಗಿ ಅನ್ಯಭಾಷಾ ಚಿತ್ರಗಳಿಗೆ ಹೆಜ್ಜೆಯಿಟ್ಟರು.

ಇದನ್ನು ಓದಿದ್ದೀರಾ?: ಖ್ಯಾತ ನಟಿ ಬಿ ಸರೋಜಾ ದೇವಿ ನಿಧನ

ತರುವಾಯ ಜೆಮಿನಿ ಗಣೇಶನ್ ನಾಯಕರಾಗಿದ್ದ ‘ತೇಡಿವಂದ ಸೆಲ್ವಂ’ (1958) ಮೂಲಕ ತಮಿಳು ಚಿತ್ರರಂಗಕ್ಕೆ ಬಂದರು. ಅನಂತರ ಎಂಜಿಆರ್‌ರವರ ‘ನಾಡೋಡಿ ಮನ್ನನ್’ (ನಿರ್ಮಾಣ, ನಿರ್ದೇಶನ- ಸ್ವತಃ ಎಂಜಿಆರ್) ಚಿತ್ರದಲ್ಲಿ ನಾಯಕಿಯರಲ್ಲಿ (ಮತ್ತೊಬ್ಬರು ಪಿ.ಭಾನುಮತಿ) ಒಬ್ಬರಾಗಿ ನಟಿಸಿದ ಅವರು ಹಿಂದೆ ತಿರುಗಿ ನೋಡಲಿಲ್ಲ. ಅವರ ವೃತ್ತಿ ಬದುಕಿನ ರೇಖೆ ಲಂಬವಾಗಿ ಮೇಲೇರಿತೇ ಹೊರತು ಕೆಳಗಿಳಿಯಲಿಲ್ಲ. ಎಂಜಿಆರ್, ಶಿವಾಜಿಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಎ.ನಾಗೇಶ್ವರರಾವ್ ಮುಂತಾದ ಹಿರಿಯ ನಟರಿಂದ ಹಿಡಿದು ಹಿಂದೀ ಚಿತ್ರಗಳಲ್ಲಿಯೂ ನಟಿಸಿದ ಬಿ.ಸರೋಜಾದೇವಿ ಕನ್ನಡದಿಂದ ವಲಸೆಹೋದ ನಾಯಕಿಯರಲ್ಲಿ ದಕ್ಷಿಣಭಾರತದ ಸಾಮ್ರಾಜ್ಞೆಯಾಗಿ ಆಳಿದವರು. ಚತುರ್ಭಾಷಾ ತಾರೆಯಾಗಿ ಮೆರೆದರು. ತಮಿಳು ಚಿತ್ರರಸಿಕರಿಗೆ ಅವರು ‘ಕನ್ನಡತ್ತು ಪೈಂಕಿಳಿ’ (ಕನ್ನಡದ ಅರಗಿಣಿ) ಎಂದೇ ಪರಿಚಿತರಾಗಿರುವವರು.

bs

ಬಿ. ಸರೋಜಾದೇವಿಯವರು 1959ರಲ್ಲಿ ಎಂಜಿಆರ್ ಜೊತೆ ನಟಿಸಿದ ‘ನಾಡೋಡಿ ಮನ್ನನ್’ ಬಿಡುಗಡೆಯಾದ ನಂತರ ಅವರ ವೃತ್ತಿ ರೇಖೆ ಉಜ್ವಲವಾಗಿ ಮೇಲೇರಿತು. ಕನ್ನಡಕ್ಕೆ ದುರ್ಲಭರಾದರೂ ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳೆನಿಸಿದ ‘ಅಣ್ಣತಂಗಿ’, ‘ಕಿತ್ತೂರು ಚೆನ್ನಮ್ಮ’ ಮತ್ತು ‘ಅಮರಶಿಲ್ಪಿ ಜಕಣಾಚಾರಿ’ (1964) ಚಿತ್ರಗಳಲ್ಲಿ ನಟಿಸಿದರು. ಎಪ್ಪತ್ತರ ಮಧ್ಯದಲ್ಲಿ ಮತ್ತೆ ಕನ್ನಡಕ್ಕೆ ಹಿಂದಿರುಗಿದ ಅವರು ‘ಚಿರಂಜೀವಿ’, ‘ನ್ಯಾಯವೇ ದೇವರು’, ‘ಬಬ್ರುವಾಹನ’, ‘ಭಾಗ್ಯವಂತರು’ ಮೊದಲಾದ ಚಿತ್ರಗಳಲ್ಲಿ ಪ್ರಬುದ್ಧ ಅಭಿನಯ ನೀಡಿದರು.

(ಕೃಪೆ: ಸಿನಿಮಾಯಾನ, ಲೇ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ, ಸಂ: 94488 04905)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X