ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ಕನ್ನಡ ಸಿನಿಮಾ ನಟಿ ರನ್ಯಾ ರಾವ್ ಅವರಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 102 ಕೋಟಿ ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ.
ರನ್ಯಾ ರಾವ್ ಮಾತ್ರವಲ್ಲದೆ, ಇತರ ಮೂವರು ಆರೋಪಿಗಳಿಗೆ 50 ಕೋಟಿ ರೂ. ದಂಡ ವಿಧಿಸಿಲಾಗಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.
ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ)ದಲ್ಲಿ ರನ್ಯಾ ರಾವ್ ಮತ್ತು ಇತರ ಆರೋಪಿಗಳನ್ನು ಇರಿಸಲಾಗಿದೆ. ಅವರ ವಿರುದ್ಧ 2,500 ಪುಟಗಳ ದಂಡದ ನೋಟಿಸ್‌ಅನ್ನು ಮಂಗಳವಾರ ಡಿಆರ್‌ಐ ಜಾರಿ ಮಾಡಿದೆ.
ಇದೇ ವಷ್ದ ಮಾರ್ಚ್ 3ರಂದು ರನ್ಯಾ ಅವರು ದುಬೈನಿಂದ ಬೆಂಗಳೂರಿಗೆ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ‘ರೆಡ್ ಹ್ಯಾಂಡ್’ಆಗಿ ಸಿಕ್ಕಿಬಿದ್ದಿದ್ದರು. ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.