‘ಜನ ನಾಯಗನ್’ ಕಲೆಕ್ಷನ್‌ ಶೇ. 50ರಷ್ಟು ಡೌನ್! ಸಿಎಂ ವಿಜಯ್ ಸಿನಿಮಾಗೆ ಎದುರಾಯಿತಾ ಹಿನ್ನಡೆ?

Date:

ತಮಿಳುನಾಡು ಮುಖ್ಯಮಂತ್ರಿ, ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಭರ್ಜರಿ ಶುರುವಾತು ಪಡೆದುಕೊಂಡಿತ್ತಾದರೂ, ಎರಡನೇ ದಿನ ಗಳಿಕೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ. ಶುಕ್ರವಾರ ಒಟ್ಟು ₹21.15 ಕೋಟಿ ನಿವ್ವಳ (Net) ಗಳಿಕೆ ಪಡೆದ ಈ ಸಿನಿಮಾದ ಎರಡು ದಿನಗಳ ದೇಶಿಯ ಒಟ್ಟು ಗಳಿಕೆ ₹63.85 ಕೋಟಿಗೆ ತಲುಪಿದೆ ಎಂದು ಚಿತ್ರರಂಗದ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ (Sacnilk) ವರದಿ ಮಾಡಿದೆ. ಈ ನಡುವೆ ವಿಜಯ್ ಸಿನಿಮಾಗೆ ಹಿನ್ನಡೆ ಎದುರಾಗಿದಾ ಎಂಬ ಚರ್ಚೆ ಹರಿದಾಡುತ್ತಿದೆ.

- Advertisement -

ಎಚ್. ವಿನೋತ್ ನಿರ್ದೇಶನದ ಜನ ನಾಯಗನ್ ಸಿನಿಮಾವು ಗುರುವಾರ ತೆರೆಕಂಡಿದೆ. ಮೊದಲ ದಿನವೇ ₹42.70 ಕೋಟಿ ನಿವ್ವಳ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನದ ಗಳಿಕೆಯಲ್ಲಿ ಬರೋಬ್ಬರಿ 50.5% ರಷ್ಟು ಇಳಿಕೆ ಕಂಡುಬಂದಿದೆ. ಸದ್ಯ ದೇಶದಲ್ಲಿ ಚಿತ್ರದ ಒಟ್ಟು ಗಳಿಕೆ ₹75 ಕೋಟಿ ತಲುಪಿದ್ದು, ವಿಶ್ವಾದ್ಯಂತ ಒಟ್ಟು ₹112.50 ಕೋಟಿ ಗಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಇದನ್ನೂ ಓದಿ: ಆನ್ ಲೈನ್‌ನಲ್ಲಿ ‘ಜನನಾಯಗನ್ʼ ಸಿನೆಮಾದ ತುಣುಕುಗಳ ಸೋರಿಕೆ : ಆರು ಮಂದಿ ಬಂಧನ

ಶುಕ್ರವಾರ ಜನ ನಾಯಗನ್ ಚಿತ್ರಕ್ಕೆ ಒಟ್ಟಾರೆಯಾಗಿ ಶೇ. 44.33ರಷ್ಟು ಆಸನ ಭರ್ತಿ ದಾಖಲಾಗಿದೆ. ಬೆಳಗಿನ ಪ್ರದರ್ಶನಗಳಲ್ಲಿ ಶೇ. 32.77 ಹಾಗೂ ಮಧ್ಯಾಹ್ನ ಶೇ. 37.23 ರಷ್ಟಿದ್ದ ಪ್ರೇಕ್ಷಕರ ಸಂಖ್ಯೆಯು ಸಂಜೆ ಮತ್ತು ರಾತ್ರಿಯ ವೇಳೆಗೆ ಅನುಕ್ರಮವಾಗಿ ಶೇ. 47 ಹಾಗೂ ಶೇ. 60.31ಕ್ಕೆ ಏರಿಕೆಯಾಗಿದೆ. ಭಾಷಾವಾರು ಗಳಿಕೆಯನ್ನು ನೋಡಿದಾಗ ತಮಿಳು ಆವೃತ್ತಿಯು ಸಿಂಹಪಾಲು ಪಡೆದುಕೊಂಡಿದೆ. 2ನೇ ದಿನ ₹17.95 ಕೋಟಿ ಗಳಿಸಿದೆ. ಹಿಂದಿ ಆವೃತ್ತಿ ₹1.85 ಕೋಟಿ ಹಾಗೂ ತೆಲುಗು ಆವೃತ್ತಿ ₹1.35 ಕೋಟಿ ಸಂಗ್ರಹಿಸಿವೆ.

ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ಎಚ್. ವಿನೋತ್, “ಸಾಮಾನ್ಯವಾಗಿ ವಿಜಯ್ ಸರ್ ಸಿನಿಮಾ ಬಿಡುಗಡೆಯಾದಾಗ ಮೊದಲ ಒಂದು ವಾರ ಪ್ರೇಕ್ಷಕರು ‘ಇದು ಚೆನ್ನಾಗಿದೆ, ಅದು ಸರಿಯಿಲ್ಲ, ಇದು ವರ್ಕ್ ಆಗಲ್ಲ’ ಎಂದೆಲ್ಲಾ ಚರ್ಚಿಸುತ್ತಾರೆ. ನಂತರದ ದಿನಗಳಲ್ಲಿ ‘ಅಷ್ಟೇನು ಚೆನ್ನಾಗಿಲ್ಲ’ ಎನ್ನಲು ಶುರುಮಾಡುತ್ತಾರೆ. ಆದರೆ, ಆರು ತಿಂಗಳ ನಂತರ ಅದೇ ಸಿನಿಮಾ ಸಮಾಜದಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮುತ್ತದೆ!” ಎಂದು ಹೇಳಿದ್ದಾರೆ.

ಮುಂದುವರಿದು, “ತಮಿಳುನಾಡು ಚಿತ್ರರಂಗದಲ್ಲಿ ಇದೊಂದು ಅತ್ಯಂತ ಪ್ರಮುಖ ಸಿನಿಮಾ. ನನಗೆ ಇದು ಎರಡು ಬೇರೆ ಬೇರೆ ಪ್ರಪಂಚಗಳ ಮಧ್ಯೆ ಇರುವಂತ ನಿಜವಾದ ಕನಸಿನ ಅನುಭವ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೂರ್ಣಪ್ರಮಾಣದಲ್ಲಿ ರಾಜಕೀಯ ಜೀವನಕ್ಕೆ ಕಾಲಿಡುವ ಮುನ್ನ ನಟಿಸಿದ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವ ಕಾರಣ ತಮಿಳುನಾಡಿನಾದ್ಯಂತ ಅಭಿಮಾನಿಗಳು ಹಬ್ಬದ ವಾತಾವರಣ ನಿರ್ಮಿಸಿದ್ದರು. ಚೆನ್ನೈನ ವುಡ್‌ಲ್ಯಾಂಡ್ಸ್ ಮತ್ತು ಕ್ಯಾಸಿನೊ ಚಿತ್ರಮಂದಿರಗಳ ಬಳಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಲೇಸರ್ ಶೋಗಳನ್ನು ಆಯೋಜಿಸಲಾಗಿತ್ತು. ಮೊದಲ ದಿನದ ಮೊದಲ ಪ್ರದರ್ಶನದ ವೇಳೆ ಚಿತ್ರಮಂದಿರಗಳ ಒಳಗಡೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ನಟ ರವಿ ಮೋಹನ್ ಕೂಡ ಅಭಿಮಾನಿಗಳೊಂದಿಗೆ ಸೇರಿ ಸಂಭ್ರಮ ಆಚರಿಸಿದರು.

ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ‘ವೆಟ್ರಿ’ ಎಂಬ ಖೈದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲು ಅಧಿಕಾರಿಯ ಮಗಳು ವಿಜಿಯೊಂದಿಗೆ ಆತ್ಮೀತ ಬೆಳೆಸಿಕೊಳ್ಳುವ ವೆಟ್ರಿ, ಆಕೆಗೆ ಭಾರತೀಯ ಸೇನೆಗೆ ಸೇರುವ ಕನಸನ್ನು ನನಸು ಮಾಡಲು ನೆರವಾಗುತ್ತಾನೆ. ಈ ಹಂತದಲ್ಲಿ ಆತನ ಹಳೆಯ ಶತ್ರು ‘ಜಾನ್ ಹಿಮ್ಲರ್’ (ಬಾಬಿ ಡಿಯೋಲ್) ಎಂಟ್ರಿ ನೀಡಿದಾಗ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ.

ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜುಲೈ 23 ರಂದು ಬಿಡುಗಡೆಯಾದ ಈ ಚಿತ್ರವು ವಿಜಯ್ ಅವರ ಮೂರು ದಶಕಗಳ, 60ಕ್ಕೂ ಹೆಚ್ಚು ಸಿನಿಮಾಗಳ ನಟನಾ ಪಯಣಕ್ಕೆ ತೆರೆ ಎಳೆದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...