ಕಲೆಕ್ಷನ್ ಮಾಸ್ಟರ್ (CM) ಸಿದ್ದರಾಮಯ್ಯ ಎಂದು ಟೀಕಿಸಿದ ಬಿಜೆಪಿ

Date:

  • ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್‌ ಕೊಟ್ಟಿದೆ
  • ನಗರಾಭಿವೃದ್ಧಿ ₹250 ಕೋಟಿ, ಅಬಕಾರಿ ಇಲಾಖೆ ₹150 ಕೋಟಿ ರೂ. ಸಂಗ್ರಹಕ್ಕೆ ಗುರಿ

ಕಾಂಗ್ರೆಸ್‌ ಬಂದಿದೆ ಲೂಟಿಗೆ ಇಳಿದಿದೆ. ಮೊದಲ ಹಂತದಲ್ಲಿ ಹೈಕಮಾಂಡ್‌ ನೀಡಿರುವ ₹1000 ಕೋಟಿ ಟಾರ್ಗೆಟ್‌ಗೆ, ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್‌ ಕೊಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.

- Advertisement -

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, “ಡಿಕೆ ಶಿವಕುಮಾರ್‌- ಬೆಂಗಳೂರು ನಗರಾಭಿವೃದ್ಧಿ ₹250 ಕೋಟಿ, ಆರ್‌.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ ₹150 ಕೋಟಿ, ಸತೀಶ್‌ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ ₹115 ಕೋಟಿ, ಪ್ರಿಯಾಂಕ್‌ ಖರ್ಗೆ- ಗ್ರಾಮೀಣ ಅಭಿವೃದ್ಧಿ ಇಲಾಖೆ ₹100 ಕೋಟಿ, ದಿನೇಶ್‌ ಗುಂಡೂರಾವ್- ಆರೋಗ್ಯ ಇಲಾಖೆ ₹75 ಕೋಟಿ, ಚಲುವರಾಯಸ್ವಾಮಿ- ಕೃಷಿ ಇಲಾಖೆ ₹125 ಕೋಟಿ, ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ ₹95 ಕೋಟಿ ಹಾಗೂ ಕೃಷ್ಣಬೈರೇಗೌಡ- ಕಂದಾಯ ಇಲಾಖೆ ₹90 ಕೋಟಿ” ಗುರಿ ನೀಡಲಾಗಿದೆ” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಎರಡನೇ ಹಂತದ ಪಟ್ಟಿಯನ್ನು ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲಾ ಅವರಿಂದಲೇ ಸ್ವತಃ ಬಿಡುಗಡೆ ಆಗಲಿದೆ. ಐಟಿ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ದರಾಮಯ್ಯ ಬಗ್ಗೆ ಪೋಸ್ಟರ್ ರಿಲೀಸ್ ಮಾಡಿ, ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿದೆ. ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಬಜೆಟ್ ಸೂಟ್‌ ಕೇಸ್ ಹಿಡಿದುಕೊಂಡ ಸಿದ್ದರಾಮಯ್ಯ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ.

25 ಲಕ್ಷ ಕೊಡ್ಲೇಬೇಕು ಅಬಕಾರಿ ನೀತಿ

ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಕೋಟಿ ಕೋಟಿ ರೂ.ಗೆ ಅಬಕಾರಿ ಹುದ್ದೆಗಳನ್ನು ಸೇಲ್‌ಗೆ ಇಟ್ಟಿದ್ದ ಲೂಟಿಕೋರ ಕಾಂಗ್ರೆಸ್‌ ಸರ್ಕಾರ, ಅಬಕಾರಿ ಇಲಾಖೆಯನ್ನು ಭ್ರಷ್ಟಾಚಾರದ ಹೆಬ್ಬಾಗಿಲು ಮಾಡಿಕೊಂಡಿದೆ. ಲೈಸೆನ್ಸ್‌ ಟ್ರಾನ್ಸ್‌ಫರ್‌, ಲೈಸೆನ್ಸ್‌ ಶಿಫ್ಟಿಂಗ್‌ಗೆ ಲಕ್ಷ ಲಕ್ಷ ಹಣಕ್ಕೆ ಅಧಿಕಾರಿಗಳು ರಾಜಾರೋಷವಾಗಿ ಕೈ ಚಾಚುತ್ತಿರುವುದು ಎಟಿಎಂ ಸರ್ಕಾರಕ್ಕಾಗಿಯೇ” ಎಂದು ಟೀಕಿಸಿದೆ.

“ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರವನ್ನು ನೋಡಿದರೆ, ನೀವು ತಿನ್ನಿ ನಮಗೂ ಕೊಡಿ ಎನ್ನುವ ಅನಧಿಕೃತ ಆದೇಶವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೊರಡಿಸಿದಂತಿದೆ. ರಾಜ್ಯದ ಕಾಂಗ್ರೆಸ್‌ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?

✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್‌ಗಢ‌ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ‌ ಕಾಂಗ್ರೆಸ್‌ಗೆ ₹200 ಕೋಟಿ
✔ ಮಧ್ಯಪ್ರದೇಶ‌ ಕಾಂಗ್ರೆಸ್‌ಗೆ ₹200 ಕೋಟಿ

ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ” ಎಂದು ಆರೋಪಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ ಸಂವಿಧಾನಾತ್ಮಕ ಪರಿಹಾರವೇನು?

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು...

ವೈಎಸ್‌ಆರ್‌ಸಿಪಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ವಿಶೇಷ ಪೀಠ ರಚನೆ!

ಆಂಧ್ರಪ್ರದೇಶದಲ್ಲಿ ನಡೆದ ಹಿಂಸಾಚಾರದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಅಭ್ಯರ್ಥಿಗಳು ನಾಮಪತ್ರ...

ಯೂಸುಫ್ ಪಠಾಣ್‌ಗೆ ಭರ್ಜರಿ ಕೊಡುಗೆ: ‘ಬಿಜೆಪಿ ವಾಷಿಂಗ್ ಮಷೀನ್’ ಕುತಂತ್ರಕ್ಕೆ ಇನ್ನೊಂದು ಕನ್ನಡಿ!

ಬಿಜೆಪಿಯನ್ನು ‘ವಾಷಿಂಗ್ ಮಷೀನ್’ ಎಂದು ಟೀಕಿಸುವುದಕ್ಕೆ ಯೂಸುಫ್ ಪಠಾಣ್ ಅವರ ಭೂಮಿ...

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...