‘ಗಣತಿ ಎಂದರೆ ತಲೆ ಎಣಿಕೆ, ಹಿಂದುಳಿದಿರುವಿಕೆ ಪತ್ತೆಗೆ ಸಮೀಕ್ಷೆ’: ಹೈಕೋರ್ಟ್‌ಗೆ ಆಯೋಗ ಪ್ರತಿಕ್ರಿಯೆ

Date:

Advertisements
“ನಾವು ಯಾವುದೇ ಜಾತಿಯನ್ನು ಸೃಷ್ಟಿಸಿಲ್ಲ. ಹಿಂದಿನ ಸಮೀಕ್ಷೆಯಲ್ಲಿ ಪತ್ತೆಯಾಗಿರುವುದನ್ನು ನಾವು ಬಳಕೆ ಮಾಡಿದ್ದೇವೆ" ಎಂದು ಹಿಂದುಳಿದ ವರ್ಗಗಳ ಆಯೋಗದ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

“ರಾಜ್ಯದಲ್ಲಿ ನಡೆಸುತ್ತಿರುವ ಸಾಮಾಜಿಕ & ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯ ದತ್ತಾಂಶಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತವೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇದಾಗಿದೆ. ಗಣತಿಯು ತಲೆ ಎಣಿಕೆ ಮಾಡಿದರೆ, ಸಮೀಕ್ಷೆಯು ಹಿಂದುಳಿದಿರುವಿಕೆಯನ್ನು ಗುರುತಿಸುತ್ತದೆ” ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪರ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ಹೈಕೋರ್ಟ್‌ನಲ್ಲಿ ತಿಳಿಸಿದ್ದಾರೆ.

ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗದ ವಾದವನ್ನು ಆಲಿಸಿ, ನಾಳೆಗೆ ವಿಚಾರಣೆಯನ್ನು ಮುಂದೂಡಿತು.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿತು. “ಸಾರ್ವಜನಿಕ ಪ್ರಕಟಣೆ ನೀಡಿ ಎಷ್ಟು ದಿನದಲ್ಲಿ ನಿರ್ಧರಿಸಲಾಗಿದೆ?” ಎಂದು ಪ್ರಶ್ನಿಸಿದಾಗ ಪ್ರೊ. ಕುಮಾರ್, “22.08.2025ರಂದು ಪ್ರಕಟಣೆ ನೀಡಿ, ಏಳು ದಿನಗಳಲ್ಲಿ ನಿರ್ಧರಿಸಲಾಗಿದೆ. ಕೆಲವರನ್ನು ವೈಯಕ್ತಿಕವಾಗಿ ಆಲಿಸಲಾಗಿದೆ” ಎಂದರು. ಮುಂದುವರಿದು, “ಗಣತಿಗಿಂತ ಸಮೀಕ್ಷೆಗೆ ಹೇಗೆ ಭಿನ್ನ ಎಂಬ ಪ್ರಶ್ನೆ ಬಂದಿತ್ತು. ಜನಗಣತಿ ತಲೆ ಎಣಿಸುತ್ತಿದೆ. ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಿಂದುಳಿದುವರಿಕೆಯನ್ನು ಪತ್ತೆ ಹಚ್ಚಲು ಸಮೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ ಗಣತಿಯಲ್ಲಿ ಅವಕಾಶವಿಲ್ಲ. ಸಮೀಕ್ಷೆಯು ಸ್ವಯಂಪ್ರೇರಿತವಾಗಿದ್ದು, ಗಣತಿಯು ಕಡ್ಡಾಯವಾಗಿದೆ. ಸಮೀಕ್ಷೆಯ ದತ್ತಾಂಶ ಸಂಗ್ರಹಣೆಯು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ. ವೆಂಟಕಸ್ವಾಮಿ ಸಮಿತಿಯ ವರದಿಯನ್ನು 1986ರಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿತ್ತು” ಎಂದು ತಿಳಿಸಿದರು.

ಇದನ್ನೂ ಓದಿರಿ: Breaking News | ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪ ನಿಧನ

ರಾಜ್ಯ ಸರ್ಕಾರದ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, “ಸಮೀಕ್ಷೆ ನಡೆಸುತ್ತಿರುವ ವಿಧಾನದ ಬಗ್ಗೆ ಯಾವ ಆಕ್ಷೇಪ ಇದೆ ಎಂದು ಅವರು ಹೇಳಿಲ್ಲ” ಎಂದರು.

“ಜಾತಿಯ ಜೊತೆ ಧರ್ಮವನ್ನು ಸೇರಿಸಲಾಗಿದೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ಜಾತಿಗಳ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ” ಎಂದು ಪೀಠ ಹೇಳಿತು.

ಸಿಂಘ್ವಿ ಪ್ರತಿಕ್ರಿಯಿಸಿ, “ನಿಬಂಧನೆಯ ಸಮರ್ಥನೆ ಮತ್ತು ಸ್ವೇಚ್ಛೆಯ ಬಗ್ಗೆ ಎತ್ತಿರುವ ಪ್ರಶ್ನೆಗೆ ಸಂಬಂಧಿಸಿದಂತೆ ನಾನು ವಾದಿಸಿದ್ದೇನೆ. ಸಮೀಕ್ಷೆ ಆರಂಭವಾಗದೆಯೇ ಅದನ್ನು ಅವೈಜ್ಞಾನಿಕ ಎಂದು ಹೇಗೆ ಹೇಳಲಾಗುತ್ತದೆ. ಅರ್ಜಿಯಲ್ಲಿ ಅರ್ಜಿದಾರರು ಒಂದೇ ಒಂದು ಅಂಶ ಹೇಳಿಲ್ಲ. ಸಮೀಕ್ಷೆಯು ಅವೈಜ್ಞಾನಿಕ ಎಂಬುದಕ್ಕೆ ಒಂದೇ ಒಂದು ಕಾರಣವನ್ನು ನೀಡಲಾಗಿಲ್ಲ” ಎಂದು ವಾದಿಸಿದರು.

“ಜಾತಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ಪತ್ತೆ ಹಚ್ಚುತ್ತೇವೆ. ಆಮೇಲೆ ಅದನ್ನು ಪ್ರಶ್ನಿಸಬಹುದು. ಅದನ್ನು ಮಾಡಲು ಅವಕಾಶ ನೀಡಬೇಕಲ್ಲವೇ? ಸಮೀಕ್ಷೆಗೆ ಉತ್ತರಿಸುವುದು ಜನರ ಇಚ್ಛೆಯಾಗಿದೆ. ಇದಕ್ಕಾಗಿ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುವುದಿಲ್ಲ. ದಂಡ, ಶಿಕ್ಷೆ.. ಏನೂ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಪರವಾಗಿ ವಾದ ಆರಂಭಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಕೆ ಅರವಿಂದ್‌ ಕಾಮತ್‌, “ಸಮೀಕ್ಷೆ ನಡೆಸಲು ಅಧಿಕಾರವಿಲ್ಲ. ಪ್ರತಿಯೊಂದು ರಾಜ್ಯವು ಸಮೀಕ್ಷೆ ನಡೆಸಿದರೆ ಭಿನ್ನ ಸಮಸ್ಯೆಗಳು ಉಂಟಾಗಬಹುದು” ಎಂದು ಆಕ್ಷೇಪಿಸಿ, ಜನಗಣತಿ ಕಾಯಿದೆಯನ್ನು ಪ್ರಸ್ತಾಪಿಸಿದರು. ಅದಕ್ಕೆ ಪೀಠವು, “ಇಂದಿರಾ ಸಾಹ್ನಿ ತೀರ್ಪುನ ಪ್ರಕಾರ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಬಹುದಾಗಿದೆ” ಎಂದು ತಿಳಿಸಿತು.

ಎಎಸ್‌ಜಿ ಕಾಮತ್ ಪ್ರತಿಕ್ರಿಯಿಸಿ, “ಸಮೀಕ್ಷೆಯ ಹೆಸರಿನಲ್ಲಿ ಗಣತಿ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಪ್ರವೇಶಿಸಿದಂತೆ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದರೆ ಉದ್ದೇಶ ಏನು ಈಡೇರಿದಂತಾಗುತ್ತದೆ. ಇಂದು ಪತ್ರಿಕೆಗಳಲ್ಲಿ ಅದೇ ತಲೆಬರಹ ಇದೆ” ಎಂದರು.

ಇದನ್ನೂ ಓದಿರಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ನಗದುರಹಿತ ಚಿಕಿತ್ಸೆ ಯೋಜನೆ ಜಾರಿ, ವಿವರ ಇಲ್ಲಿದೆ…

“ಹ್ಯಾಂಡ್‌ಬುಕ್‌ ಅನ್ನು ಯಾವ ಆಧಾರದಲ್ಲಿ ರೂಪಿಸಲಾಗಿದೆ? ಇದಕ್ಕೆ ಆಧಾರವಿರಬೇಕು? ದಾಖಲೆ ಏನಿದೆ?” ಎಂದು ನ್ಯಾಯಾಲಯ ಕೇಳಿತು.

ಪ್ರೊ. ಕುಮಾರ್ ಪ್ರತಿಕ್ರಿಯಿಸಿ, “ನಾವು ಯಾವುದೇ ಜಾತಿಯನ್ನು ಸೃಷ್ಟಿಸಿಲ್ಲ. ಹಿಂದಿನ ಸಮೀಕ್ಷೆಯಲ್ಲಿ ಪತ್ತೆಯಾಗಿರುವುದನ್ನು ನಾವು ಬಳಕೆ ಮಾಡಿದ್ದೇವೆ. ಅದು ಜಾತಿಯ ಪಟ್ಟಿಯಲ್ಲ. ಇದು ಸಾರ್ವಜನಿಕ ಬಳಕೆಗಾಗಿ ಅಲ್ಲ. ಯಾವ ಜಾತಿ ಎಂದು ಹೇಳಬೇಕು ಎಂದು ನಾವು ಸಲಹೆ ನೀಡಿಲ್ಲ. ಹಿಂದಿನ ಸಮೀಕ್ಷೆಯನ್ನು ಆಧರಿಸಿ ಆ ಪಟ್ಟಿ ಮಾಡಲಾಗಿದೆ” ಎಂದು ವಿವರಿಸಿದರು.

ಅದಕ್ಕೆ ಪೀಠವು, “ಹಿಂದಿನ ಸಮೀಕ್ಷೆಯನ್ನು ಒಪ್ಪಲಾಗಿಲ್ಲವಲ್ಲ. 2015ರ ಜಾತಿ ಸಮೀಕ್ಷೆಯನ್ನು ನೀವು ಆಧರಿಸಿದ್ದೀರಾ?” ಎಂದಿತು.

ಪ್ರೊ. ಕುಮಾರ್, “ಹೌದು. ಕೆಲವು ಸಮುದಾಯಗಳು ತಮ್ಮ ಗುಂಪನ್ನು ಸೇರಿಸುವಂತೆ ಕೋರಿದ್ದಾರೆ. ಇದನ್ನು ನಮ್ಮ ನೆರವಿಗಾಗಿ ಸೇರಿಸಲಾಗಿದೆ. ಇದು ಸಾರ್ವಜನಿಕ ಬಳಕೆಗಾಗಿ ಅಲ್ಲ. ಜನರು ನೀಡುವ ಜಾತಿಯ ಅಂಶವನ್ನು ದಾಖಲಿಸಿಕೊಳ್ಳುತ್ತೇವೆ. ಅದನ್ನು ಬಹಿರಂಗಪಡಿಸಿಲ್ಲ” ಎಂದು ಪ್ರತಿಕ್ರಿಯಿಸಿದರು.

ಮುಂದುವರಿದು, “ಸೀಮಿತ ಕಾರಣಕ್ಕಾಗಿ ಮೀಟರ್‌ ರೀಡರ್‌ಗಳ ಸೇವೆಯನ್ನು ಬಳಕೆ ಮಾಡಲಾಗುತ್ತಿದೆ. ಸಮೀಕ್ಷೆಗೆ ಸಂಬಂಧಿಸಿದ ಸ್ಟಿಕರ್‌ ಅಂಟಿಸಲು ಅವರನ್ನು ಬಳಕೆ ಮಾಡಲಾಗುತ್ತಿದೆ. ಗುರುತು ಪತ್ತೆಹಚ್ಚಲು ಆಧಾರ್‌ ಕಾರ್ಡ್‌ ಬಳಕೆ ಮಾಡಲಾಗುತ್ತಿದೆ. ಅತ್ಯಂತ ವೈಜ್ಞಾನಿಕವಾಗಿ ಮಾಡಲಾಗುತ್ತಿದೆ” ಎಂದಿತು.

ಅದಕ್ಕೆ ಪೀಠ, “ಆಧಾರ್‌ ಸಂಖ್ಯೆಯನ್ನು ನೀವು ಸಂಗ್ರಹಿಸುವಂತಿಲ್ಲ” ಎಂದು ಆಕ್ಷೇಪಿಸಿತು. “ನಕಲಿ ತಪ್ಪಿಸಲು, ಬೇರೆ ರಾಜ್ಯಗಳಿಂದ ಬಂದಿರುವ ಸಾಧ್ಯತೆಯನ್ನು ಪತ್ತೆ ಹಚ್ಚಲು ಆಧಾರ್‌ ಸಂಖ್ಯೆ ಬಳಕೆ ಮಾಡಲಾಗುತ್ತಿದೆ” ಎಂದು ಸಮರ್ಥಿಸಿತು.

“ಮನೆಯ ಬಾಗಿಲಿನಲ್ಲಿ ಸ್ಟಿಕರ್‌ ಹಾಕುತ್ತೀರಿ. ಅದನ್ನು ತೆಗೆಯಬಾರದು ಎಂದು ಯಾವ ಕಾಯಿದೆ ಹೇಳುತ್ತದೆ? ಸ್ಟಿಕರ್‌ ತೆಗೆಯಬಾರದು ಎಂದು ಹೇಳಲಾಗಿದೆ. ಉತ್ತರ ನೀಡಲು ಇಷ್ಟವಾಗದಿದ್ದರೆ ಅವರು ಉತ್ತರಿಸಬೇಕಿಲ್ಲವೇ?” ಎಂದು ಕೋರ್ಟ್ ಪ್ರಶ್ನಿಸಿತು.

ಇದನ್ನೂ ಓದಿರಿ: 4.8 ಕೋಟಿ ರೂ. ಪತ್ತೆ ಪ್ರಕರಣ: ಬಿಜೆಪಿ ಸಂಸದ ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌

ಪ್ರೊ. ಕುಮಾರ್, “ಅದನ್ನು ಅವರು ತೆಗೆಯಬಹುದು. ಹೌದು, ಇಚ್ಛೆ ಇಲ್ಲದಿದ್ದರೆ ಜನರು ಮಾಹಿತಿ ನೀಡದೇ ಇರಬಹುದು” ಎಂದು ಸ್ಪಷ್ಟಪಡಿಸಿದರು.

“ಜನರ ಮನೆಗಳಿಗೆ ದತ್ತಾಂಶ ಪಡೆಯಲು ತೆರಳುವವರಿಗೆ ಸೂಚನೆ ನೀಡಿರುವ ಅಂಶ ಎಲ್ಲಿದೆ? ಸಮೀಕ್ಷೆಯು ಕಡ್ಡಾಯವಲ್ಲ, ಆಧಾರ್‌ ನೀಡಬೇಕಿಲ್ಲ ಎಂದು ಸಮೀಕ್ಷೆಯ ಅಂಶ ಸಂಗ್ರಹಿಸುವವರಿಗೆ ಸೂಚನೆ ನೀಡಲಾಗಿದೆಯೇ? ಅದನ್ನು ತೋರಿಸಿ. ಸಮೀಕ್ಷೆ ಬಳಕೆ ಮಾಡಿರುವ 1.61 ಲಕ್ಷ ಸಮೀಕ್ಷೆ ನೀಡುವವರಿಗೆ ಮಾಹಿತಿ ನೀಡಲಾಗಿದೆಯೇ? ಸಮೀಕ್ಷೆಯ ಸಂದರ್ಭದಲ್ಲಿ ಯಾರನ್ನು ಕೈಬಿಡುವಂತೆ ಎಂದು ಹೇಳಲಾಗಿದೆ. ಅದು ಹೇಗೆ?” ಎಂದು ಸರಣಿ ಪ್ರಶ್ನೆಗಳನ್ನು ಪೀಠವು ಕೇಳಿತು.

“ಜನರು ಮಾಹಿತಿ ನೀಡಬೇಕು ಎಂಬುದು ಕಡ್ಡಾಯವಲ್ಲ” ಎಂದು ಪ್ರೊ.ಕುಮಾರ್ ಪುನರ್ ಉಚ್ಚರಿಸಿದರು.

“ಎಲ್ಲಾ ಮಾಹಿತಿಯನ್ನು ನೀಡಲೇಬೇಕು ಎಂಬ ಹೊಣೆಗಾರಿಕೆ ಇಲ್ಲ ಎಂಬುದು ಎಲ್ಲಿದೆ? ಹ್ಯಾಂಡ್‌ಬುಕ್‌ನಲ್ಲಿ ಎಲ್ಲಿದೆ?” ಎಂದು ಪೀಠ ಕೇಳಿತು. ಪ್ರೊ. ಕುಮಾರ್, “ಧರ್ಮಕ್ಕೆ ಸಂಬಂಧಿಸಿದ ಕಲಂ ನೋಡಿ. ನಾಸ್ತಿಕರು, ನಮಗೆ ಧರ್ಮ ಗೊತ್ತಿಲ್ಲ, ಧರ್ಮ ತಿಳಿಸಲು ನಿರಾಕರಿಸುವ ವಿಚಾರ ನೀಡಲಾಗಿದೆ. ಜನರು ಯಾವ ಮಾಹಿತಿ ನೀಡುತ್ತಾರೋ ಅದನ್ನು ಸಂಗ್ರಹಿಸಬೇಕು ಎಂದು ಸಮೀಕ್ಷೆ ಮಾಡುವವರಿಗೆ ತಿಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು. “ಇಷ್ಟೊಂದು ಖರ್ಚು ಮಾಡಿ ಈ ಸಮೀಕ್ಷೆಯ ಲಾಭವೇನು ಎಂಬುದು ಅರ್ಜಿದಾರರ ವಾದವಾಗಿದೆ. ಈಗಾಗಲೇ ನಡೆಸಿರುವ ಸಮೀಕ್ಷೆಯು ಬಹಿರಂಗವಾಗದಿರುವಾಗ ಮತ್ತೊಂದು ಸಮೀಕ್ಷೆ ಅಗತ್ಯವಿದೆಯೇ ಎಂದು ಕೇಳಲಾಗಿದೆ” ಎಂದು ಪೀಠವು ಹೇಳಿತು.

“2015ರಲ್ಲಿ ಆ ಸಮೀಕ್ಷೆ ನಡೆಸಲಾಗಿದೆ. ಇಂದು ನಾವು 2025ರಲ್ಲಿದ್ದೇವೆ. ಈಗ ಆ ಸಮೀಕ್ಷೆಯ ದತ್ತಾಂಶ ಬಳಕೆ ಮಾಡಲಾಗುತ್ತಿದೆಯೇ?” ಎಂದು ಪ್ರೊ.ಕುಮಾರ್ ಮರುತ್ತರ ನೀಡಿದರು.

“ನಿಮ್ಮ ಸಮೀಕ್ಷೆಯು ಸಮಕಾಲೀನವಾಗಿರಬಾರದು ಎಂದು ಯಾರೂ ಹೇಳುತ್ತಿಲ್ಲ. ನಿಮ್ಮ ಮುಂದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಮೀಕ್ಷೆ ನಡೆಸುವುದಕ್ಕೂ ಮುನ್ನ ಸಾಕಷ್ಟು ಸಮಾಲೋಚನೆ ನಡೆಸಬೇಕು ಎಂಬುದು ಅವರ ವಾದ. ಹೀಗಾದಲ್ಲಿ ನಿಮ್ಮ ಸಮೀಕ್ಷೆಯು ಫಲಪ್ರದವಾಗುವುದಿಲ್ಲ ಎಂಬುದು ಅರ್ಜಿದಾರರ ವಾದ” ಎಂದು ಪೀಠ ಹೇಳಿತು.

ಅದಕ್ಕೆ ಪ್ರೊ. ಕುಮಾರ್, “ಎಲ್ಲರ ಮನವಿಗಳನ್ನು ಪರಿಗಣಿಸಲಾಗಿದೆ. ಸಮೀಕ್ಷೆ ಮುಗಿದ ಮೇಲೆ ಕೆಲವರ ಮನವಿಗಳನ್ನು ಪರಿಗಣಿಸಲಾಗುವುದು” ಎಂದರು.

“ಸಮೀಕ್ಷೆಗೆ ಇದುವರೆಗೆ ಎಷ್ಟು ವೆಚ್ಚ ಮಾಡಿದ್ದೀರಿ” ಎಂದು ಪೀಠ ಕೇಳಿತು. ಪ್ರೊ. ಕುಮಾರ್, “20.31 ಕೋಟಿಯನ್ನು ಇಲ್ಲಿಯವರಿಗೆ ಸಮೀಕ್ಷೆಗೆ ವೆಚ್ಚ ಮಾಡಲಾಗಿದೆ” ಎಂದು ತಿಳಿಸಿದರು.

“ಈಗ ತಡೆ ನೀಡಿದರೆ ಅದು ಸರ್ಕಾರಕ್ಕೆ ಉಳಿಯಲಿದೆಯೇ? ಎಷ್ಟು ನೀಡಲಾಗುತ್ತದೆ?” ಎಂದು ಪ್ರಶ್ನಿಸಿತು. “ದತ್ತಾಂಶ ಸಂಗ್ರಹಿಸುವವರಿಗೆ 20 ಸಾವಿರ ರೂಪಾಯಿ ನೀಡಲಾಗುತ್ತದೆ. ಒಂದು ಮನೆಯ ದತ್ತಾಂಶ ಸಂಗ್ರಹಿಸಿದರೆ 100 ರೂಪಾಯಿ ಕೊಡಲಾಗುತ್ತದೆ” ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿರಿ: BREAKING | ಒಳಮೀಸಲಾತಿ; ಅನ್ಯಾಯ ಪ್ರಶ್ನಿಸಿ ಹೈಕೋರ್ಟ್ ಮೊರೆಹೋದ ಅಲೆಮಾರಿಗಳು

ಸಮೀಕ್ಷೆಗೆ ಬೆಂಬಲಿಸಿರುವ ಹಿಂದುಳಿದ ವರ್ಗಗಳ ಒಕ್ಕೂಟದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ವಾದ ಮಂಡಿಸಿ, “ಸಮೀಕ್ಷೆ ಸ್ವಯಂಪ್ರೇರಿತ ಎಂದು ಆಯೋಗ ಸಾರ್ವಜನಿಕ ನೋಟಿಸ್‌ ನೀಡಬಹುದು. ರಾಜಕೀಯ ಮೀಸಲಾತಿಗೂ ಹಿಂದುಳಿದ ವರ್ಗಗಳ ಜಾತಿ ಗಣತಿ ಮಾಡಬೇಕಿದೆ. ಇದನ್ನು ಸುಪ್ರೀಂ ಕೋರ್ಟ್‌ ಹೇಳಿದೆ. ಯಾವುದೇ ಜಾತಿ, ಧರ್ಮವನ್ನು ಅಂತಿಮಗೊಳಿಸಲಾಗಿಲ್ಲ” ಎಂದಿದ್ದಾರೆ.

“ಸಾರ್ವಜನಿಕ ಪ್ರಕಟಣೆ ನೀಡಿ ಎಷ್ಟು ದಿನದಲ್ಲಿ ನಿರ್ಧರಿಸಲಾಗಿದೆ?” ಎಂದು ಕೋರ್ಟ್ ಕೇಳಿದಾಗ, ಪ್ರೊ. ಕುಮಾರ್, “22.08.2025ರಂದು ಪ್ರಕಟಣೆ ನೀಡಿ, ಏಳು ದಿನಗಳಲ್ಲಿ ನಿರ್ಧರಿಸಲಾಗಿದೆ. ಕೆಲವರನ್ನು ವೈಯಕ್ತಿಕವಾಗಿ ಆಲಿಸಲಾಗಿದೆ. ಗಣತಿಗಿಂತ ಸಮೀಕ್ಷೆಗೆ ಹೇಗೆ ಭಿನ್ನ ಎಂಬ ಪ್ರಶ್ನೆ ಬಂದಿತ್ತು. ಜನಗಣತಿ ತಲೆ ಎಣಿಸುತ್ತಿದೆ. ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಿಂದುಳಿದುವರಿಕೆಯನ್ನು ಪತ್ತೆ ಹಚ್ಚಲು ಸಮೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ ಗಣತಿಯಲ್ಲಿ ಅವಕಾಶವಿಲ್ಲ. ಸ್ವಯಂಪ್ರೇರಿತವಾಗಿದ್ದು, ಗಣತಿಯು ಕಡ್ಡಾಯವಾಗಿದೆ. ಸಮೀಕ್ಷೆಯ ದತ್ತಾಂಶ ಸಂಗ್ರಹಣೆಯು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ” ಎಂದಿದ್ದಾರೆ. ಮುಂದುವರಿದು, “ವೆಂಟಕಸ್ವಾಮಿ ಸಮಿತಿಯ ವರದಿಯನ್ನು 1986ರಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿತ್ತು” ಎಂದು ಪ್ರಸ್ತಾಪಿಸಿದ್ದಾರೆ.

ಆಯೋಗದ ಪರ ವಾದ ಪೂರ್ಣಗೊಳಿಸಿದ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X