ಧರ್ಮಸ್ಥಳ | ‘ಕೊಂದವರು ಯಾರು?’ ಜನಾಂದೋಲನ ಆರಂಭ, ಮಹಿಳಾ ಆಯೋಗ ಭೇಟಿಯಾದ ನಿಯೋಗ

Date:

Advertisements

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಮಹಿಳೆಯರ ನಾಪತ್ತೆ-ಕೊಲೆ ಪ್ರಕರಣಗಳನ್ನು ಎಸ್‌ಐಟಿ ತನಿಖೆಯ ಕೇಂದ್ರವಾಗಿಸಿಕೊಳ್ಳಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ’ ವಿವಿಧ ಸಂಘಟನೆಗಳ ಮಹಿಳಾ ನಿಯೋಗ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರನ್ನು ಶುಕ್ರವಾರ ಭೇಟಿಯಾದ ಮಹಿಳಾ ಆಯೋಗ, ‘ಸಮಗ್ರ ತನಿಖೆ ನಡೆಯಬೇಕು ಮತ್ತು ಅದು ತಾರ್ಕಿಕ ಅಂತ್ಯ ಮುಟ್ಟುವ ತನಕ ಅದನ್ನು ಅಡ್ಡಿಪಡಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಅಥವಾ ಇನ್ನಾವುದೇ ಪ್ರಭಾವಿ ಶಕ್ತಿಗಳಿಂದಾಗಲಿ ನಡೆಯಬಾರದು. ಇಂತಹ ಮಹತ್ವದ ತನಿಖೆಗೆ ಅಡ್ಡಿಪಡಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕೆಲವು ಮಾಧ್ಯಮಗಳಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಬೇಕು” ಎಂದು ಬೇಡಿಕೆ ಪತ್ರ ಸಲ್ಲಿಸಿ ಆಗ್ರಹಿಸಿದೆ.

ಮಹಿಳಾ ನಿಯೋಗದಲ್ಲಿ ‘ನಾವೆದ್ದು ನಿಲ್ಲದಿದ್ದರೆ’ ವತಿಯಿಂದ ಮಮತಾ ಯಜಮಾನ್, ಮಧುಭೂಷಣ್, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮಿ ಕೆ.ಎಸ್, ಮಾನಸ ಬಳಗದ ಚಂಪಾವತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರಿ, ದಲಿತ ಮಹಿಳಾ ಸಂಘಟನೆ ವತಿಯಿಂದ ನಾಗಮಣಿ, ಮಹಿಳಾ ಮುನ್ನಡೆ ಹಾಗೂ ಕರ್ನಾಟಕ ಜನಶಕ್ತಿಯಿಂದ ಮಲ್ಲಿಗೆ ಸಿರಿಮನೆ, ಸಾಧನಾ ಮಹಿಳಾ ಗುಂಪಿನ ವಿನುತಾ, ಚಂದ್ರಶೀ, ಗೀತಾ, ಆಯೆಷಾ, ಹಸಿರುದಳದ ವತಿಯಿಂದ ಮೀನಾಕ್ಷಿ ಮತ್ತು ಶಶಿಕಲಾ ಸೇರಿದಂತೆ ಇತರರು ಇದ್ದರು.

ಬೇಡಿಕೆ ಪತ್ರದಲ್ಲಿ ಏನಿದೆ?

ಪುಣ್ಯಕ್ಷೇತ್ರವೆಂದು ಪೂಜಿಸಲ್ಪಡುವ ಧರ್ಮಸ್ಥಳದ ಸುತ್ತ ದುರದೃಷ್ಟವಶಾತ್, ವ್ಯಾಪಕ ಅತ್ಯಾಚಾರಗಳು, ಕೊಲೆಗಳು, ಅಪಹರಣಗಳು ಮತ್ತು ಅಮಾಯಕ ಜನರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕೊಲೆಗಳು ಸೇರಿದಂತೆ ಹೇಯ ಅಪರಾಧಗಳಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ. ಮಹಿಳಾ ಸಂಘಟನೆಗಳು, ಲಿಂಗನ್ಯಾಯಕ್ಕಾಗಿ ಶ್ರಮಿಸುತ್ತಿರುವ ಮತ್ತು ಮಾನವ ಹಕ್ಕು ಸಂಘಟನೆಗಳು ಹಾಗೆಯೇ, ನಾಡಿನ ಪ್ರಜ್ಞಾವಂತ ನಾಗರೀಕರು ಸೇರಿ ‘ಕೊಂದವರು ಯಾರುʼ-‘Who Killed Women in Dharmasthala’ ಎಂಬ ಜನಾಂದೋಲನವನ್ನು ಆರಂಭಿಸಿದ್ದೇವೆ. ಈ ಇಡೀ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಬಯಸುತ್ತೇವೆ” ಎಂದು ಆಂದೋಲನ ಅಭಿಪ್ರಾಯಪಟ್ಟಿದೆ.

“ಕಳೆದ ವರ್ಷಗಳಲ್ಲಿ, 2012 ರಲ್ಲಿ ಸೌಜನ್ಯ ಅವರಅಪಹರಣ ಮತ್ತು ಕೊಲೆ, ಅದಕ್ಕೂ ಕೇವಲ 20 ದಿನಗಳ ಮೊದಲು ಆನೆಮಾವುತ ನಾರಾಯಣರೊಂದಿಗೆ ಅವರ ತಂಗಿ ಯಮುನಾ ಅವರ ಕೊಲೆ, ಅದಕ್ಕೆ ಸಾಕಷ್ಟು ಮುಂಚೆ 1986 ರಲ್ಲಿ ಪದ್ಮಲತಾ ಅವರ ಅಪಹರಣ, ಹಲವು ದಿನಗಳ ಕಾಲ ಬಂಧನದಲ್ಲಿರಿಸಿ ಅತ್ಯಾಚಾರ ಮತ್ತು ಕ್ರೂರ ಹತ್ಯೆ ಮತ್ತು 1979 ರಲ್ಲಿ ಟೀಚರ್ವೇದವಲ್ಲಿ ಅವರ ಮೇಲಿನ ದಾಳಿ, ಅತ್ಯಾಚಾರ ಮತ್ತು ಸುಟ್ಟು ಕೊಲೆ ಮಾಡಿದ ಘಟನೆಗಳೂ ಸೇರಿದಂತೆ ಇದುವರೆಗೂ ಬಗೆಹರಿಯದ,ಹಲವಾರು ಮಹಿಳೆಯರು ನಾಪತ್ತೆಯಾದ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ.ಮಹಿಳೆಯರು ನಾಪತ್ತೆಯಾಗುವ, ಅತ್ಯಾಚಾರ ಮತ್ತು ಕೊಲೆಗೀಡಾಗುವ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗದಿದ್ದರೂ, ಸರ್ಕಾರ ಮತ್ತು ಸಮಾಜ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ನಮಗೆ ಆಘಾತ ತಂದಿದೆ. ಹಾಲಿ ನಡೆಯುತ್ತಿರುವ ಎಸ್ಐಟಿ ತನಿಖೆಯ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಕೆಲವು ಮಾಧ್ಯಮಗಳಲ್ಲಿ ʼಮೀಡಿಯಾ ಟ್ರಯಲ್ʼ ನಡೆಯುತ್ತಿದೆ ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತನಿಖೆ ಮಹಿಳೆಯರ ಘನತೆ-ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ-ಧಾರ್ಮಿಕ ವಿಚಾರಗಳನ್ನಲ್ಲ” ಎಂದು ಕೊಂದವರು ಯಾರು ಆಂದೋಲನವು ಆಗ್ರಹಿಸಿದೆ.

“ಈ ವಿಚಾರದಲ್ಲಿ ಮಹಿಳಾ ಆಯೋಗದ ಸಕಾರಾತ್ಮಕ ಮಧ್ಯಪ್ರವೇಶವನ್ನು ಗುರುತಿಸಿದ್ದೇವೆ ಮತ್ತು ಅದನ್ನು ಶ್ಲಾಘಿಸುತ್ತೇವೆ. ಮಹಿಳಾ ಆಯೋಗ ಸರ್ಕಾರಕ್ಕೆ ಬರೆದ ಪತ್ರವನ್ನು ಆಧರಿಸಿ ರಾಜ್ಯದಲ್ಲಿ ಇಂದು ಇಂತಹ ಗಂಭೀರ ಪ್ರಕರಣಗಳ ವಿಚಾರಣೆಗೆಂದೇ ಎಸ್.ಐ.ಟಿ ರಚನೆಯಾಗಿದೆ. ಆದರೆ ಎಸ್.ಐ.ಟಿ ರಚನೆ ನಂತರದ ಬೆಳವಣಿಗೆಗಳ ಬಗ್ಗೆ ನಮಗೆ ಆತಂಕವಿದೆ” ಎಂದಿರುವ ಆಂದೋಲನವು, ಆಯೋಗದ ಪತ್ರ ಆಧರಿಸಿ ಸರ್ಕಾರ ಎಸ್ಐ ಟಿ ರಚನೆ ಘೋಷಿಸಿ ನೀಡಿದ ನಡಾವಳಿಯಲ್ಲಿ “….ಕಳೆದ 20 ವರ್ಷಗಳಲ್ಲಿ ನಡೆದ ಪ್ರಕರಣಗಳ ಸಮಗ್ರ ತನಿಖೆಗಾಗಿ ಎಸ್ಐ ಟಿ ರಚಿಸಲಾಗಿದೆ” ಎಂದಿರುವುದನ್ನು ಉಲ್ಲೇಖಿಸಿದೆ.
ಎಸ್.ಐ.ಟಿ ತನಿಖೆ ಅಬಾಧಿತವಾಗಿ ಮುಂದುವರೆಯಬೇಕು, ಪೂರ್ವನಿರ್ಧಾರಿತ ಹೇಳಿಕೆಗಳನ್ನು ಸರ್ಕಾರದ ಮಂತ್ರಿಗಳು ಮತ್ತಿತರ ರಾಜಕೀಯ ನಾಯಕರು ನೀಡುವುದನ್ನು ನಿಗ್ರಹಿಸಬೇಕು, ಸಾಕ್ಷಿಗಳ ರಕ್ಷಣೆಗೆ ವಿಶೇಷ ಕ್ರಮ ವಹಿಸಬೇಕು.

“ಎಸ್ಐಟಿ ರಚನೆಯಾಗುವುದರಲ್ಲಿ ಸಕಾರಾತ್ಮಕ ಪಾತ್ರವಹಿಸಿದ ಮಹಿಳಾ ಆಯೋಗದ ಪ್ರತಿಕ್ರಿಯೆಗೆ ಈ ಸಂದರ್ಭದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸಕ್ರಿಯರಾಗಿ ಪ್ರಜ್ವಲ್ರೇವಣ್ಣ ಪ್ರಕರಣದಂತಹ ಹಲವು ವಿಚಾರಗಳಲ್ಲಿ ಮಹಿಳೆಯರ ಪರವಾಗಿ ಪ್ರತಿಸ್ಪಂದಿಸುತ್ತಿರುವ ಡಾ. ನಾಗಲಕ್ಷ್ಮಿ ಚೌಧರಿಯವರು ಈ ಸಂದರ್ಭದಲ್ಲೂ ಮತ್ತೊಮ್ಮೆ ನ್ಯಾಯದ ಪರವಾಗಿ ದನಿಯೆತ್ತುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಇದು ಕೇವಲ ಆಯೋಗದ ಜವಾಬ್ದಾರಿಯ ವಿಚಾರ ಮಾತ್ರವಲ್ಲದೆ, ಅಸಹಾಯಕರಾಗಿ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರ ಪರವಾಗಿ ನ್ಯಾಯವನ್ನು ಆಗ್ರಹಿಸುವ ಮಹಿಳಾ ಸಮುದಾಯದ ಚಾರಿತ್ರಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸವೂ ಹೌದು” ಎಂದು ಆಂದೋಲನದ ಪ್ರತಿನಿಧಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

Download Eedina App Android / iOS

X