ಗೀತೆ ಅಭಿಯಾನ | ಮುಂದೆಯೂ ಇಂತಹ ಅವಕಾಶ ಸಿಕ್ಕರೆ ಸ್ವೀಕರಿಸುತ್ತೇವೆ- ಶರತ್‌ ಅನಂತಮೂರ್ತಿ

Date:

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ, “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ಎಂಬ ವಿಚಾರ ಸಂಕಿರಣ, ತೀವ್ರ ಆಕ್ಷೇಪ, ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆಯ ನಡುವೆಯೂ ನಡೆದಿದೆ. ವಿವಿಯ ಮುಂಭಾಗದಲ್ಲಿ ದಸಂಸ ಸದಸ್ಯರು ಜಮಾಯಿಸಿ ಘೋಷಣೆ ಕೂಗಿದರು. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕಾರ್ಯಕ್ರಮ ನಡೆದಿದೆ.

- Advertisement -

ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ ಶರತ್‌ ಅನಂತಮೂರ್ತಿ, ಮುಂದೆಯೂ ಇಂತಹ ಅವಕಾಶ ಸಿಕ್ಕರೆ ಸ್ವೀಕರಿಸುವುದಾಗಿ ಹೇಳಿ, ಬಲಪಂಥೀಯರ ಜೊತೆಗಿನ ತಮ್ಮ ಸಖ್ಯವನ್ನು ಮುಂದುವರಿಸುವ ಸೂಚನೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

“ಇವತ್ತು ಕಾರ್ಯಕ್ರಮ ಮಾಡಬೇಡಿ. ಅದು ಹಾಗಿದೆ, ಹೀಗಿದೆ ಎಂದು ಹೇಳಲು ಹೊರಟವರು ದಿಟ್ಟತನ ತೋರುತ್ತಿಲ್ಲ. ಅವರಿಗೆ ತಮ್ಮ ನಂಬಿಕೆಯಲ್ಲಿ ಶ್ರದ್ಧೆ ಇದ್ದು ದಿಟ್ಟತನ ಇದ್ದರೆ, ‘ನೀವೂ ಹೇಳಿ ನಿಮ್ಮ ವಾದವನ್ನು, ನಾವು ಪ್ರತಿವಾದ ಮಂಡಿಸ್ತೀವೆ. ಗೌರವದಿಂದ ನಿಮ್ಮ ಬಗ್ಗೆ ಒಳ್ಳೆಯ ಆಲೋಚನೆ ಇಟ್ಟುಕೊಂಡು ನೀವು ಹೇಳುವುದು ನಮಗೆ ಒಪ್ಪಿಗೆ ಇಲ್ಲ’ ಎಂದು ಹೇಳುವಂತ ವಾತಾವರಣ ಸೃಷ್ಟಿಸುತ್ತೇವೆ. ಇಲ್ಲದಿದ್ದರೆ ಇದು ತುಂಬ ಅಪಾಯಕಾರಿ” ಎಂದು ಟೀಕಿಸಿದರು.

ಎಲ್ಲಾ ವಿವಿಗಳಿಗೆ ಅರ್ಥ ಬರೋದು ನಮಗೆ ಅಪ್ರಿಯವಾಗಬಹುದಾದುದು ಎಂದು ದೂರವಿಡದೇ ಅದನ್ನು ನಮ್ಮಲ್ಲೇ ಸ್ವೀಕರಿಸಿ ಅದಕ್ಕೆ ವಾಗ್ವಾದವನ್ನು ಸೃಷ್ಟಿಮಾಡುವ ವಾತಾವರಣವನ್ನು ಬೆಳೆಸಿಕೊಂಡಾಗ. ಇವತ್ತು ನಮಗೆ ಇಷ್ಟವಾದುದನ್ನು ಮಾತ್ರ ಕೇಳಬೇಕು, ಇಷ್ಟವಾಗದ್ದಕ್ಕೆ ಜಾಗ ಇಲ್ಲ ಎಂಬ ಸಂದರ್ಭ ಸೃಷ್ಟಿಯಾದರೆ, ಈಗಿನ ಕಾಲದ ಮಕ್ಕಳು ನಾವು ಏನನ್ನು ಹೇಳಲ್ಲವೋ ಅದನ್ನೇ ಹುಡುಕಿ ಹೋಗುತ್ತಾರೆ. ಇವತ್ತು ಧಾರ್ಮಿಕ ಪ್ರಜ್ಞೆಯ ಬಗ್ಗೆ ಹೇಳದೇ, ಒಂದೇ ಒಂದು ವೀವ್‌ಪಾಯಿಂಟ್‌ ಎದುರು ಇಟ್ಟಾಗ, ಬೇಸತ್ತು ಬೇರೆ ಕಡೆ ಹೋಗುತ್ತಾರೆ. ಎಲ್ಲಿಗೆ ಹೋಗ್ತಾರೆ ಅಂದ್ರೆ ಇಂಟರ್‌ನೆಟ್‌ಗೆ, ವಾಟ್ಸಪ್‌ಗೆ ಹೋಗ್ತಾರೆ. ವಿವಿಯಲ್ಲಿ ಗಾಂಭೀರ್ಯತೆ ಇರಬೇಕು. ಚರ್ಚೆಗಳಿಗೆ ಅವಕಾಶ ಇರಬೇಕು. ಚರ್ಚೆಗಳಿಗೆ ಯಾವಾಗ ಅವಕಾಶ ಬರುತ್ತದೆ ಅಂದರೆ, ಇಲ್ಲವಾದ ಅಭಿಪ್ರಾಯಗಳನ್ನು ಜೊತೆಗೂಡಿಸಿದಾಗ. ಇದೇ ಆಧುನಿಕವಾದ ವಿವಿಯ ಸ್ವರೂಪ.

ನಮ್ಮ ವಿವಿಗಳು ಮತ್ತೆ ಹಳೆಯ ವಿವಿಗಳಲ್ಲಿ ಆದ ಚಿಂತನೆ, ಅದರಿಂದ ಬಂದ ಜ್ಞಾನ, ಬುದ್ದಿಜೀವಿಗಳ ಬೆಳವಣಿಗೆ ಇದೆಲ್ಲದಕ್ಕೂ ಭಾರತದಲ್ಲಿ ಅಲ್ಲದೇ ಬೇರೆಲ್ಲಿ ಮಾಡಲು ಸಾಧ್ಯ. ಯಾಕೆಂದರೆ ನಾವು ಇಂತಹ ಚರ್ಚೆ, ಚಿಂತನೆಗಳಲ್ಲೇ ತೊಡಗಿಸಿಕೊಂಡಿದ್ದ ದೇಶ. ಎಲ್ಲರೂ ನಾವು ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಇವತ್ತು ಲೇಬಲ್‌ ಕಟ್ಟಿ ಒಬ್ಬರನ್ನು ಹಾಳು ಮಾಡೋದಲ್ಲ. ಲೇಬಲ್‌ಗಳಲ್ಲ ಅವರು ಮಂಡಿಸಿದ ವಿಷಯ ಕುರಿತು ನಾವು ಮಾತಾಡಬೇಕು. ಮಾತಾಡಲು ಗಟ್ಟಿತನ ಇರಬೇಕು, ಓದ್ಕೊಬೇಕು. ಬಹುಷಃ ನಾನೇ ಹೆಚ್ಚು ಅಂಬೇಡ್ಕರ್‌ ಬಗ್ಗೆ ಓದಿದವನು, ಎಲ್ಲದನ್ನೂ ಲೇಬಲ್‌ ಮಾಡ್ಕೋಬಾರದು. ಅಂಬೇಡ್ಕರ್‌ ಮಹಾನ್‌ ಚಿಂತಕ, ಜಾತ್ಯತೀತ ಭಾರತಕ್ಕೆ ಕಾಲಿಡಬೇಕಾದರೆ ಅಂಬೇಡ್ಕರ್‌ ಅನಿವಾರ್ಯ. ಆದರೆ ಅವರಲ್ಲೂ ಕೆಲವು ಗೊಂದಲಗಳಿದ್ದವು. ಅದನ್ನೂ ಗೌರವದಿಂದ ಇಡೋಣ. ಸೆನ್ಸಾರ್‌ಶಿಪ್‌ ಬೇಡ” ಎಂದರು.

ಅಂಬೇಡ್ಕರ್‌ ಏನಂದಿದ್ದರು?
ಡಾ. ಬಿ. ಆರ್. ಅಂಬೇಡ್ಕರ್ ಅವರು ಭಗವದ್ಗೀತೆಯನ್ನು ಹಿಂದೂ ಧರ್ಮದೊಳಗಿನ ಒಂದು ಪ್ರತಿ-ಕ್ರಾಂತಿಯ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ತತ್ವಶಾಸ್ತ್ರ ಎಂದು ವಿಶ್ಲೇಷಿಸಿದ್ದಾರೆ. ಅವರು ಭಗವದ್ಗೀತೆಯನ್ನು ಬೌದ್ಧಧರ್ಮದ ವಿರುದ್ಧ ಒಂದು ಬೌದ್ಧ ವಿರೋಧಿ ಪ್ರತಿಕ್ರಿಯೆ ಎಂದು ಪರಿಗಣಿಸಿದ್ದರು ಮತ್ತು ಅದನ್ನು ಸಾಮಾಜಿಕ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸಲು ಬಳಸಲಾಗಿದೆ ಎಂದು ಟೀಕಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...