ಡಾ.ಬಿಳಿಮಲೆ ಹೇಳಿಕೆ ಅಪರಾಧ ಹೇಗಾಗುತ್ತದೆ? ಕೇಸು ಯಾಕಾಗಿ!

Date:

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ವಿರುದ್ದ ಯಕ್ಷಗಾನ ಕಲಾವಿದರೊಬ್ಬರು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅವರು, “ಸಲಿಂಗ ಕಾಮ ಭಾರತದಲ್ಲಿ ಅಪರಾಧವಲ್ಲದ ಕಾರಣ, ಬಿಳಿಮಲೆಯವರ ಹೇಳಿಕೆ ಅಪರಾಧ ಆಗಲ್ಲ” ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ವಿವರಣೆ ಕೆಳಗಿನಂತಿದೆ.

- Advertisement -

ಒಬ್ಬ ವ್ಯಕ್ತಿಯನ್ನು ಕಳ್ಳ, ಸುಳ್ಳ, ವಂಚಕ, ಭ್ರಷ್ಟ, ರೇಪಿಸ್ಟ್ ಎಂದೆಲ್ಲ ಕರೆಯುವುದು ಅಪರಾಧ. ಯಾಕೆಂದರೆ ಈ ಕೃತ್ಯಗಳೆಲ್ಲ ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳು. ಆದರೆ ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲ. 2018ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋ‍ರ್ಟ್ ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನವತೇಜ್ ಸಿಂಗ್ ಜೋಹಾರ್ vs ಯೂನಿಯನ್ ಆಫ್ ಇಂಡಿಯಾ ಪ್ರಕರರಣದಲ್ಲಿ ಸಲಿಂಗ ಕಾಮ ಅಪರಾಧ ಎಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಅದೇ ತೀರ್ಪಿನಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರಲ್ಲಿ ಸಲಿಂಗ ಲೈಂಗಿಕ ಕ್ರಿಯೆಗಳನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಭಾಗ ಅಸಾಂವಿಧಾನಿಕ ಎಂದು ಘೋಷಿಸಿದೆ. ಪ್ರಸ್ತುತ ಭಾರತದಲ್ಲಿ ಪರಸ್ಪರ ಒಪ್ಪಿತ) ಸಲಿಂಗ ಲೈಂಗಿಕ ಸಂಬಂಧಗಳು ಸಂಪೂರ್ಣ ಕಾನೂನುಬದ್ಧ, ಮತ್ತು ಅಪರಾಧ ಅಲ್ಲ.

ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲದ ಕಾರಣ ಇಲ್ಲಿನ ಸಲಿಂಗ ಜೋಡಿಗಳಿಗೆ ಮದುವೆಯಾಗುವ ಹಕ್ಕು ಕೂಡಾ ಇದೆ ಎಂದು 2023ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ಸಲಿಂಗ ಮದುವೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಈ ಬಗ್ಗೆ ಕಾನೂನನ್ನು ರೂಪಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಸಂಸತ್‌ಗೆ ನೀಡಿದೆ.

ಹೀಗಿರುವಾಗ ಅಪರಾಧ ಅಲ್ಲದ ಕೃತ್ಯವಾದ ಸಲಿಂಗ ಕಾಮ ಎಲ್ಲೋ ನಡೆಯುತ್ತಿದೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಒಂದೊಮ್ಮೆ ಯಾವನಾದರೂ ವ್ಯಕ್ತಿ ಬಲತ್ಕಾರದಿಂದ ಇಲ್ಲವೇ ಪ್ರಾಣಿಗಳೊಡನೆ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಐಪಿಸಿ 377ರ ಅಡಿಯಲ್ಲಿ ಅಪರಾಧ ಆಗುತ್ತದೆ.

ಪುರುಷೋತ್ತಮ ಬಿಳಿಮಲೆಯವರು ಯಾವುದಾದರೂ ಒಬ್ಬ ಯಕ್ಷಗಾನ ಕಲಾವಿದನ ಹೆಸರೆತ್ತಿ ಆ ವ್ಯಕ್ತಿ ಬಲಾತ್ಕಾರವಾಗಿ ಸಲಿಂಗ ಕಾಮ ನಡೆಸಿದ್ದಾನೆ ಇಲ್ಲವೇ ಯಾವುದಾದರೂ ಪ್ರಾಣಿಗಳೊಡನೆ ಸಲಿಂಗ ಕಾಮಕ್ರೀಡೆಯಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿದ್ದರೆ ಅದು ಅಪರಾಧವಾಗುತ್ತಿತ್ತು. ಯಕ್ಷಗಾನ ಕಲಾವಿದರಲ್ಲಿ ಸಲಿಂಗ ಕಾಮಿಗಳು ಇದ್ದಾರೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಯಾರಾದರೂ ಕಾನೂನು ತಜ್ಞರು ಹೇಳಬೇಕು.

ವಾಸ್ತವ ಸಂಗತಿ ಏನೆಂದರೆ ಕಲೆ, ಸಾಹಿತ್ಯ, ಮಾಧ್ಯಮ, ಕ್ರೀಡೆ ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರಗಳು ಸೇರಿದಂತೆ ಯಕ್ಷಗಾನ ರಂಗದಲ್ಲಿಯೂ ಸಲಿಂಗ ಕಾಮಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಯಕ್ಷಗಾನ ಕ‍್ಷೇತ್ರದಲ್ಲಿ ಉಳಿದೆಲ್ಲ ಕ್ಷೇತ್ರಗಳಂತಯೇ ಜಾತೀಯತೆ, ಲಿಂಗತಾರತಮ್ಯ ಎಲ್ಲವೂ ಇದೆ. ಯಾರು ಒಪ್ಪಿದರೂ ಒಪ್ಪದೆ ಇದ್ದರೂ ಸತ್ಯವನ್ನು ಅಳಿಸಿಹಾಕಲಾಗುವುದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಪೊಲೀಸರು ಆರ್‌ಎಸ್‌ಎಸ್ ಗುಲಾಮರ ಮಕ್ಕಳಲ್ಲ’: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಬಿಜೆಪಿ-ಕಾಂಗ್ರೆಸ್‌ ತೀವ್ರ ಪೈಪೋಟಿ, ಗೆಲುವು ಯಾರಿಗೆ?

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ತಡೆ...

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...