ನ್ಯಾಯ ಸಮಾವೇಶ | ಧರ್ಮಸ್ಥಳದ ದೌರ್ಜನ್ಯಗಳ ವಿರುದ್ಧ ಮೊಳಗಿತು ಒಕ್ಕೊರಲಿನ ಕೂಗು

Date:

Advertisements

ಧರ್ಮಸ್ಥಳ ಠಾಣೆ ಮತ್ತು ಸುತ್ತಮತ್ತಲಿನ ಠಾಣೆಗಳಲ್ಲಿ ದಾಖಲಾದ ನೂರಾರು ಅಸಹಜ ಸಾವು, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನಡೆಯುವ ದೌರ್ಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ, ಸೌಜನ್ಯ ಕೊಲೆ, ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಎಸ್‌ಐಟಿಯಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ನಡೆದ ‘ನ್ಯಾಯ ಸಮಾವೇಶ’ದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಇಂದು (ಸೆ.25) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ನ್ಯಾಯ ಸಮಾವೇಶದಲ್ಲಿ ಜನಪರ ಸಂಘಟನೆಗಳು, ಎಡ, ದಲಿತ, ಹಿಂದುಳಿದ ಸಂಘಟನೆಗಳು, ವಿದ್ಯಾರ್ಥಿ, ಯುವಜನ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಿ, ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅನ್ಯಾಯ, ಅಕ್ರಮಗಳ ವಿರುದ್ಧ ನ್ಯಾಯದ ಕೂಗನ್ನು ಸಾವಿರಾಜು ಜನರ ಸಮ್ಮುಖದಲ್ಲಿ ಕೂಗಿದರು.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್‌ ಅವರ ಪುತ್ರಿ ಸುಭಾಷಿಣಿ ಅಲಿ ಅವರು ನ್ಯಾಯ ಸಮಾವೇಶವನ್ನು ತಮ್ಮ ಭಾಷಣ ಮೂಲಕ ಉದ್ಘಾಟಿಸಿದರು.

ಸುಭಾಷಿಣಿ ಕರ್ನಾಟಕಕ್ಕೆ ಹೊಸಬರಲ್ಲ. ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಬಂಧನ, ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ನಡೆದ ‘ಹಾಸನ ಚಲೋ’ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಗುಜರಾತಿನ ಬಿಲ್ಕಿಸ್ ಬಾನೊ ಅತ್ಯಾಚಾರದ ಅಪರಾಧಿಗಳನ್ನು ಜೈಲುವಾಸದಿಂದ ಬಿಡುಗಡೆ ಮಾಡಿದ್ದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ ಮೂವರು ಪ್ರಸಿದ್ಧ ಮಹಿಳಾ ನಾಯಕರಲ್ಲಿ ಒಬ್ಬರು ಎಂಬುದುನ್ನು ಗಮನಿಸಬುದು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಇದೊಂದು ಅಧರ್ಮದ ವಿರುದ್ಧ ನಡೆಯುತ್ತಿರುವ ಧರ್ಮಯುದ್ಧ. ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ‘ನ್ಯಾಯ ಸಮಾವೇಶ’ ಹಮ್ಮಿಕೊಂಡಿದ್ದೇವೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತುಹಾಕಲಾಗಿದೆ ಎನ್ನುವ ಪ್ರಕರಣ ತಾರ್ಕಿಕ ಅಂತ್ಯ ಕಾಣಬಬೇಕು. ಈ ಬಗ್ಗೆ ಎಸ್‌ಐಟಿ ರಚನೆಯಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಬರೀ ಜಾಗಗಳನ್ನು ಅಗೆದು ತೆಗೆಯುವುದಲ್ಲ. 2005ರಿಂದ ಈವರೆಗೂ ನಡೆದ ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.

Dharmastala 1 3

“ಧರ್ಮಸ್ಥಳ ಕೇಂದ್ರಿತವಾಗಿ ದಾಖಲಾದ ಪ್ರತಿಯೊಂದು ದೂರಿನ ಬಗ್ಗೆ ಎಸ್‌ಐಟಿ ಬೆಳಕು ಚೆಲ್ಲಿ ನ್ಯಾಯಕೊಡಿಸಬೇಕು. ಇಲ್ಲಿ ಬಂದಿರುವ ವೇದವಲ್ಲಿ, ಪದ್ಮಲತಾ, ಸೌಜನ್ಯ ಹಾಗೂ ಆನೆಮಾಹುತ ಕುಟುಂಬದವರು ಯಾರನ್ನು ಆರೋಪಿಗಳು ಎಂದು ಹೇಳಿದ್ದಾರೋ ಅವರ ಬಗ್ಗೆ ತನಿಖೆಯಾಗಬೇಕು. ಈ ಹೋರಾಟದಲ್ಲಿ ಇರುವವರನ್ನು ಶಿಕ್ಷೆಗೆ ಒಳಪಡಿಸುವುದು, ಅವರಿಗೆ ತೊಂದರೆ ಕೊಡುವುದು ನ್ಯಾಯದ ಧರ್ಮವಲ್ಲ” ಎಂದು ಹೇಳಿದರು.

“ಧರ್ಮಸ್ಥಳದಲ್ಲಿ ದಲಿತರ ಜಮೀನು ಕಬಳಿಸಿ ಕುಳಿತವರು ಯಾರು? ಅದನ್ನು ಸ್ವಾಧೀನಪಡಿಸಿಕೊಂಡು ದಲಿತರಿಗೆ ಹಸ್ತಾಂತರ ಮಾಡಬೇಕು. ದಲಿತರ ಘನತೆಯ ಬದಕನ್ನು ಕಿತ್ತುಕೊಳ್ಳಲಿಕ್ಕೆ ಯಾರಿಗೂ ಹಕ್ಕಿಲ್ಲ. ನಾವು ನ್ಯಾಯವನ್ನು ಕೇಳುವುದರಿಂದ ಹಿಂದೆ ಸರಿಯುವುದಿಲ್ಲ. ಇದು ಕೇವಲ ಪ್ರಾರಂಭ. ಇನ್ಮುಂದೆ ಜಿಲ್ಲೆಗಳಲ್ಲಿ ನ್ಯಾಯ ಸಮಾವೇಶ ನಡೆಯಲಿದೆ” ಎಂದು ತಿಳಿಸಿದರು.

ಪ್ರೊ. ಎಸ್‌ ಜಿ ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಮೂಡ್ನಾಕೂಡ ಚಿನ್ನಸ್ವಾಮಿ, ಡಾ. ಕೆ ಪ್ರಕಾಶ್‌, ಎಸ್‌ ಬಾಲನ್‌, ಸಿದ್ದನಗೌಡ ಪಾಟೀಲ್‌, ವೇದವಲ್ಲಿ ಮತ್ತು ಪದ್ಮಲತಾ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಹೋರಾಟಗಾರರು ಭಾಗಿಯಾಗಿದ್ದರು. ಸಾವಿರಾರು ಜನರು ಬೆಂಬಲ ಸೂಚಿಸಿ ಸಮಾವೇಶಕ್ಕೆ ಆಗಮಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X