ಪಾಟೀಲರೇ, ಸ್ವಲ್ಪವಾದರೂ ಜನಪರವಾಗಿ ಇರಿ, ಜವಾಬ್ದಾರಿಯಿಂದ ನಡೆದುಕೊಳ್ಳಿ: ನಟ ಪ್ರಕಾಶ್‌ ರಾಜ್‌ ತಿರುಗೇಟು

Date:

ನಮಸ್ಕಾರ ಎಂ ಬಿ ಪಾಟೀಲರೇ, ಇದು ಕರ್ನಾಟಕ ರೈತರ ಸಮಸ್ಯೆ. ಕರ್ನಾಟಕದಲ್ಲಿಯೇ ಪ್ರತಿಭಟನೆ ಮಾಡಬೇಕು. ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಬೇರೆ ಕಡೆ ಪ್ರತಿಭಟಿಸಲು ಆಗುತ್ತದಾ? ಇಲ್ಲಿಯೇ ಹೋರಾಟ ಮಾಡಬೇಕು ಅಲ್ವಾ? ಎಂದು ನಟ ಪ್ರಕಾಶ್‌ ರಾಜ್‌ ಅವರು ಸಚಿವರಿಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

- Advertisement -

ಬೆಂಗಳೂರಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಎಂ ಬಿ ಪಾಟೀಲ ಅವರು, ರೈತರ ಭೂಸ್ವಾಧೀನಕ್ಕೆ ಪ್ರಕಾಶ್ ರೈ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, “ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ಹೋರಾಟ ಯಾಕೆ? ಅವರು ಕರ್ನಾಟಕದಲ್ಲಿ ಮಾತ್ರವಲ್ಲ.‌ ಯುಪಿಯಲ್ಲೂ ಹೋರಾಟ ಮಾಡಲಿ, ಅ‌ಸ್ಸಾಂನಲ್ಲೂ, ಅಷ್ಟೇ ಯಾಕೆ ಗುಜರಾತ್​ನಲ್ಲೂ ಹೋರಾಟ ಮಾಡಲಿ” ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಎಂ ಬಿ ಪಾಟೀಲರ ಈ ಹೇಳಿಕೆಗೆ ವಿಡಿಯೋ ಮಾಡಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್‌ ರಾಜ್‌, “ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ. ಪಂಜಾಬ್​​​ ಮತ್ತು ಹರಿಯಾಣದಲ್ಲಿ ರೈತರು ಹೋರಾಟ ಮಾಡಿದಾಗಲೂ ಭಾಗವಹಿಸಿದ್ದೆ. ಮಣಿಪುರದಲ್ಲೂ ಅನ್ಯಾಯವಾದಾಗಲೂ ಧ್ವನಿ ಎತ್ತಿದ್ದೆ” ಎಂದು ತಿರುಗೇಟು ನೀಡಿದ್ದಾರೆ.

“ಗುಜರಾತ್‌ ಬಗ್ಗೆ ಹೇಳಿದ್ದೀರಿ, ಗುಜರಾತಿನ ಮಹಾಪ್ರಭು ಪ್ರಧಾನಿ ಮೋದಿ ಅವರನ್ನು ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ. ಆಯಾ ಹೋರಾಟಗಳಲ್ಲಿ ಮಾತನಾಡುತ್ತಿರುತ್ತೇನೆ. ಏಕೆಂದರೆ ನಾವು ಯಾವ ಪಕ್ಷದವರು ಅಲ್ಲ. ಜನರೇ ನಮಗೆ ಪಕ್ಷ. ನೀವು ಒಂದು ಪಕ್ಷದವರು. ಹೀಗಾಗಿ ಜನರಿಗೆ ಎಲ್ಲೇ ಸಮಸ್ಯೆ ಆದ್ರೂ ಮಾತನಾಡುವುದು ನನ್ನ ಜವಾಬ್ದಾರಿ” ಎಂದು ಹೇಳಿದ್ದಾರೆ.

“ದೇವನಹಳ್ಳಿ ವಿಷಯಕ್ಕೆ ಬರೋಣ. ನೋಡಿ, ಮುಖ್ಯಮಂತ್ರಿಗಳು ಕರೆದು ಸಭೆ ಮಾಡಿದರು. ಆ ಸಭೆಯಲ್ಲಿ ನಾವು ಜನಪರವಾಗಿ ನಿರ್ಧಾರ ತಗೋಬೇಕು ಅಂತ ನಿರ್ಧಾರ ಮಾಡಿದ್ದೇವೆ, ಆದರೆ ಒಂದಿಷ್ಟು ಕಾನೂನು ತೊಡಕುಗಳು ಇವೆ. ಅದನ್ನು ನಾವು ಬಗೆಹರಿಸಿಕೊಂಡು ಜು.15ಕ್ಕೆ ಸರ್ಕಾರದ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ. ಅದರ ಬಗ್ಗೆ ಯೋಚನೆ ಮಾಡಿ ಎಂ ಬಿ ಪಾಟೀಲರೇ” ಎಂದು ಕುಟುಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಕಾಶ್ ರಾಜ್ ಬಹುಭಾಷಾ ನಟರಲ್ವಾ? ಬೇರೆ ರಾಜ್ಯಗಳಲ್ಲೂ ಹೋರಾಟ ಮಾಡಲಿ: ಎಂ ಬಿ ಪಾಟೀಲ್

“ದೇವನಹಳ್ಳಿಯಲ್ಲಿ ನಿಮ್ಮದೇ ಒಂದಿಷ್ಟು ಪುಡಾರಿಗಳು ಹೋಗಿ ನಿಮಗೆ 3 ಕೋಟಿ ರೂ. ಕೊಡುತ್ತೇವೆ ಅಂತ ಆಮಿಷವೊಡ್ಡುತ್ತಿದ್ದಾರೆ. ನಿಮಗೆ ಅವರು ಪರಿಚಯ ಇದ್ದರೆ ಆ ತಪ್ಪು ಮಾಡಬೇಡಿ ಅಂತ ಹೇಳಿ. ಕಾನೂನು ರೀತಿ ಒಂದು ಪರಿಹಾರ ಇದೆ. ನೀವು ಕುಳಿತು ಮಾತನಾಡಿ. ನಿಮಗೆ ಸಮಸ್ಯೆ ಬಗೆಹರಿಯದಿದ್ದರೆ ನಮ್ಮ ಹತ್ರ ಬನ್ನಿ. ನಮ್ಮಲ್ಲೂ ತಜ್ಞರು ಇದ್ದಾರೆ” ಎಂದು ಎದುರೇಟು ನೀಡಿದ್ದಾರೆ.

“ನಿವೃತ್ತ ನ್ಯಾಯಾಧೀಶ ಗೋಪಾಲಗೌಡರು ನಮ್ಮ ಜೊತೆ ಇದ್ದಾರೆ. ಅವರು ಬೆಂಗಳೂರಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಎಕರೆ ಭೂಮಿ ರೈತರಿಗೆ ಸೇರಬೇಕು ಅಂತ ಐತಿಹಾಸಿಕ ತೀರ್ಪು ನೀಡಿದವರು. ನಿಮಗೆ 15ನೇ ತಾರೀಖಿನಲ್ಲಿ ಇತ್ಯರ್ಥವಾಗದಿದ್ದರೆ ನಮ್ಮನ್ನು ಭೇಟಿಯಾಗಿ. ನಾವು ಸಲಹೆ ಕೊಡುತ್ತೇವೆ. ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂ ಬಿ ಪಾಟೀಲರೇ, ಮತ್ತೆ ಸಿಗೋಣ ಮಾತನಾಡೋಣ” ಎಂದು ನಗುತ್ತಲೇ ಉತ್ತರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬಳ್ಳಾರಿ | ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ

ಬಳ್ಳಾರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...