ಮತಗಳ್ಳತನ | ಮಾಹಿತಿ ನೀಡಲು ಚುನಾವಣಾ ಆಯೋಗ ಏಕೆ ಹೆದರುತ್ತಿದೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Date:

Advertisements

ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ನಂತರ ಚುನಾವಣಾ ಆಯೋಗವು ಮತಗಳ್ಳತನವನ್ನು ನಾವೇ ಕಂಡುಹಿಡಿದು ತಡೆದಿದ್ದೇವೆ ಎನ್ನುವಂತೆ ಮಾತನಾಡುತ್ತಿದ್ದಾರೆ. ಮತದಾರರನ್ನು ಮತಪಟ್ಟಿಯಿಂದ ಕೈ ಬಿಡುವ ಪ್ರಕ್ರಿಯೆಯನ್ನು ನಾವೇ ನಿಲ್ಲಿಸಿದ್ದು ಎಂದು ಹೇಳುತ್ತಿದ್ದಾರೆ. ಇದು ಶುದ್ದ ಸುಳ್ಳು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಂಟಿಸುದ್ದಿಗೋಷ್ಠಿ ಮಾತನಾಡಿದ ಅವರು, “11.02.2023 ರಂದು ಕಲಬುರ್ಗಿಯಲ್ಲಿ ಬಿ.ಆರ್.ಪಾಟೀಲರು ಹಾಗೂ ನಾವು ಸೇರಿ ಮಾಧ್ಯಮಗೋಷ್ಠಿ ನಡೆಸಿ 6670 ನಕಲಿ ಅರ್ಜಿಗಳು ಆನ್ ಲೈನ್ ಮೂಲಕ ಮತಪಟ್ಟಿಯಿಂದ ಹೆಸರು ಕೈ ಬಿಡುವಂತೆ ಬಂದಿವೆ ಎಂದು ಹೇಳಿದ್ದನ್ನು ಬಹಿರಂಗಗೊಳಿಸಿದ್ದೆವು” ಎಂದರು.

“ಮತಪಟ್ಟಿಯಿಂದ ಹೇಗೆ ಹೆಸರನ್ನು ಕೈ ಬಿಡುವ ಬಗ್ಗೆ 20.02.2023 ರಲ್ಲಿ ದೆಹಲಿಯ ಮುಖ್ಯಚುನಾವಣಾಧಿಕಾರಿಯವರಿಗೆ ನನ್ನ ಲೆಟರ್ ಹೆಡ್ ಮೂಲಕ ಪತ್ರ ಬರೆದು ದೂರು ಸಲ್ಲಿಸಲಾಯಿತು. ಅಂದಿನ ಕಲಬುರ್ಗಿ ಎ.ಸಿ ಮಮತಾ ಅವರು ನಾವೆಲ್ಲರೂ ಹೋರಾಟ ಮಾಡುತ್ತೇವೆ ಎಂದು ಹೇಳಿದ ಮೇಲೆ 21.02.2023 ರಂದು ಎಫ್ ಐಆರ್ ದಾಖಲಿಸುತ್ತಾರೆ. ಈ ಪ್ರತಿಯಲ್ಲಿ ಆಳಂದ ಕ್ಷೇತ್ರದ 6670 ಮತದಾರರನ್ನು ಅನಧಿಕೃತವಾಗಿ ಕೈ ಬಿಟ್ಟಿರುವ ಬಗ್ಗೆ ಬಿ.ಆರ್.ಪಾಟೀಲ್ ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು” ಎಂದು ಹೇಳಿದರು.

“ಪ್ರಾಥಮಿಕ ತನಿಖೆಯ ನಂತರ ಬಿ.ಆರ್.ಪಾಟೀಲ್ ಅವರ ಹೇಳಿಕೆ ನಿಜ ಎಂದು ರಿಟರ್ನಿಂಗ್ ಅಧಿಕಾರಿಯೊಬ್ಬರು ಹೇಳುತ್ತಾರೆ. 6,180 ವ್ಯಕ್ತಿಗಳಲ್ಲಿ ಕೇವಲ 24 ಮಾತ್ರ ಪ್ರಾಮಾಣಿಕವಾಗಿದ್ದು 5994 ಮತಗಳಲ್ಲಿ ಯಾರೂ ಸಹ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಹೇಳಲಾಗಿದೆ. ಇದು ಹೇಗಾಯಿತು ತಿಳಿಯಲಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಮತದಾರರನ್ನು, ಬಿಎಲ್ ಓ ಗಳನ್ನು ಇದರ ಬಗ್ಗೆ ವಿಚಾರಿಸಿದಾಗ ಇದು ಹೇಗಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ. ತಂತ್ರಜ್ಞಾನದ ಮೂಲಕ ಈ ಗೋಲ್ ಮಾಲ್ ಅನ್ನು ಪರಿಶೀಲನೆ ಮಾಡಿದಾಗ ಅರ್ಜಿ ಅಲ್ಲಿಸಿದ ಮೊಬೈಲ್ ನಂಬರ್ ಗಳು ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಮೂಲದವು. ಇದರ ಬಗ್ಗೆ ಹೆಚ್ಚು ತನಿಖೆ ನಡೆಸ ಬೇಕಾಗಿದೆ ಎಂದು ಅವರು ಹೇಳುತ್ತಾರೆ. ಓಟಿಪಿ ಐಪಿ ಅಡ್ರೆಸ್ ಸೇರಿದಂತೆ ಇತರೇ ತಾಂತ್ರಿಕ ಅಂಶಗಳನ್ನು ನೀಡಿದರೆ ತನಿಖೆ ಮುಂದುವರೆಸಬಹುದು ಎಂದು ಅಧಿಕಾರಿ ಹೇಳುತ್ತಾರೆ” ಎಂದರು.

“01.02.2025 ರಂದು ಸೈಬರ್ ಕ್ರೈಂ ಡಿವಿಜನ್ ಅವರು ಸಿಇಓ ಅವರಿಗೆ ಕಳೆದ 18 ತಿಂಗಳಲ್ಲಿ 18 ಪತ್ರಗಳನ್ನು ಬರೆದರೂ ಒಂದಕ್ಕೂ ಸಹ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಜೊತೆಗೆ ಓಟಿಪಿ, ಮೊಬೈಲ್ ನಂಬರ್, ಲಾಗಿನ್ ಮಾಹಿತಿ, ಐಪಿ ವಿಳಾಸ, ಡಿವೈಜ್ ಐಡಿ ಸೇರಿದಂತೆ ತಾಂತ್ರಿಕ ವಿವರಗಳನ್ನು ನೀಡಿ ಎಂದರೆ ಅದಕ್ಕೂ ಉತ್ತರ ನೀಡಿಲ್ಲ. 04.02.2025 ರಂದು ಚೀಫ್ ಎಲೆಕ್ಟೋರಲ್ ಆಫೀಸರ್ ಅವರು ಚುನಾವಣಾ ಆಯೋಗದ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಪತ್ರ ಬರೆದು 29.03.2023 ರಿಂದ 19.01.2025 ರವರೆಗೆ ಬರೆದಿರುವ ಪತ್ರಗಳ ಉಲ್ಲೇಖ ಮಾಡುತ್ತಾರೆ. ಚುನಾವಣಾ ಆಯೋಗ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ ಮೇಲೆಯೂ ಕರ್ನಾಟಕದ ಚುನಾವಣಾ ಆಯೋಗ ಏಕೆ ಪತ್ರಗಳನ್ನು ಬರೆದಿದೆ. ಆಯೋಗ ಹಸಿ ಸುಳ್ಳು ಹೇಳುತ್ತಿದೆ” ಎಂದು ಕಿಡಿಕಾರಿದರು.

“ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿರುವುದು ಚುನಾವಣಾ ಆಯೋಗಕ್ಕೆ ಆದರೆ ಉತ್ತರ ನೀಡಲು ಮುಂದಾಗುತ್ತಿರುವುದು ಬಿಜೆಪಿ. ಸಂಬಿತ್ ಪಾತ್ರ, ಗಜೇಂದ್ರ ಸಿಂಗ್, ಪಿ.ಸಿ.ಮೋಹನ್, ದಿನೇಶ್, ಕೇಶವ್ ಪ್ರಸಾದ್ ಮೌರ್ಯ, ಕಿಶನ್ ಸಿಂಗ್, ವಿಷ್ಣು ದೇವ ಸಿಂಗ್, ಅಶೋಕ ಅವರು ಹೀಗೆ ಬಿಜೆಪಿಯವರು ಮುಗಿಬೀಳುತ್ತಿದ್ದಾರೆ. ಬಿ.ಆರ್.ಪಾಟೀಲ್ ಅವರು 2023 ರಲ್ಲಿ ಈ ವಿಚಾರವನ್ನು ಹೊರಗೆಡವಿದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಬಿಜೆಪಿ ನೇಮಕಮಾಡಿದ್ದ ಅಧಿಕಾರಿಗಳೇ ಈ ಎಲ್ಲಾ ಪತ್ರ ಬರೆದಿದ್ದಾರೆ. ಮಾಹಿತಿ ನೀಡಲು ಏಕೆ ಚುನಾವಣಾ ಆಯೋಗ ಹೆದರುತ್ತಿದೆ. ಈ ಮೊದಲು ಚುನಾವಣಾ ಆಯೋಗ ಚೆನ್ನಾಗಿ ಕೆಲಸ ಮಾಡುತ್ತಿತು. ಆದರೆ ಈಗ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಮಾಹಿತಿ ನೀಡಲು ಏಕೆ ಹೆದರುತ್ತಿದೆ” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?

6018 ಮತದಾರರ ಹೆಸರನ್ನು ಕೈಬಿಡಲು ಷಡ್ಯಂತ್ರ: ಬಿ.ಆರ್ ಪಾಟೀಲ್

ಆಳಂದದಲ್ಲಿ ನಡೆದಿರುವ ಮತಗಳ್ಳತನದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ರಾಹುಲ್ ಗಾಂಧಿ ಅವರಿಗೆ ಹಾಗೂ ಈ ವಿಚಾರದಲ್ಲಿ ನನಗೆ ಬೆಂಬಲವಾಗಿ ನಿಂತಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

2023ರ ವಿಧಾನಸಭೆ ಚುನಾವಣೆಗೂ ಮುನ್ನ ನಮ್ಮ ಕ್ಷೇತ್ರದ ಕಾಮನಳ್ಳಿ ಗ್ರಾಮದ ವಿಜಯ್ ಕುಮಾರ್ ಎಂಬುವವರು ನನಗೆ ಕರೆ ಮಾಡಿ, ನಮ್ಮ ಹೆಸರನ್ನು ಮತಪಟ್ಟಿಯಿಂದ ಕೈಬಿಡಲು ಮನವಿ ಸಲ್ಲಿಸಲಾಗಿದೆ. ಈ ವಿಚಾರವಾಗಿ ಬಿಎಲ್ಎ ಬಂದು ನಮಗೆ ವಿಚಾರಿಸಿದರು. ನಾವು ಮನವಿ ಸಲ್ಲಿಸಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು. ನಂತರ ಇಂತಹುದೇ ಅನೇಕ ಪ್ರಕರಣಗಳು ನಮ್ಮ ಗಮನಕ್ಕೆ ಬರಲಾರಂಭಿಸಿದವು. ಕಾಂಗ್ರೆಸ್ ಪಕ್ಷದ ಪರವಾಗಿರುವ 6018 ಮತದಾರರ ಹೆಸರನ್ನು ಕೈಬಿಡಲು ಬೇರೆಯವರಿಂದ ಮನವಿ ಸಲ್ಲಿಸುವಂತೆ ಮಾಡಿದ್ದರು. ಈ ವಿಚಾರ ತಿಳಿದು ನಮಗೆ ಗಾಬರಿಯಾಯಿತು” ಶಾಸಕರಾದ ಬಿ.ಆರ್ ಪಾಟೀಲ್ ಹೇಳಿದರು.

ಆಳಂದ ಚುನಾವಣಾಧಿಕಾರಿಯೇ ಪೊಲೀಸ್ ಠಾಣೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ನಕಲಿ ಮನವಿ ಸಲ್ಲಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡುತ್ತಾರೆ. ಆ ದೂರಿನ ಆಧಾರದ ಮೇಲೆ ಇಂದು ತನಿಖೆ ನಡೆಯುತ್ತಿದೆ. ಈ ತನಿಖೆಯನ್ನುಮೊದಲು ಆಳಂದ ಡಿವೈಎಸ್ಪಿ ಅವರಿಗೆ ವಹಿಸಿದರು. ಆದರೆ ಅವರಿಗೆ ಯಾವುದೇ ಸಹಕಾರ ನೀಡದ ಕಾರಣ ಕಾಲಹರಣವಾಯಿತು. ನಂತರ ಈ ತನಿಖೆ ಕಲಬುರ್ಗಿ ಹೆಚ್ಚುವರಿ ಎಸ್ಪಿ ಅವರಿಗೆ ನೀಡಿದರು. ಆವರಿಗೂ ಯಾವುದೇ ಸಹಕಾರ ಸಿಗದ ಕಾರಣ ನಾವು ಈ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ನಾನು ಗೃಹ ಸಚಿವರಾದ ಪರಮೇಶ್ವರ್ ಅವರಿಗೆ ಪತ್ರ ಬರೆದು ಈ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಮನವಿ ಮಾಡಿದ್ದೆ. ಅವರು ಸಿಐಡಿ ತನಿಖೆಗೆ ವಹಿಸಿದರು. ನಾನು ಸುಮಾರು 10 ಬಾರಿ ಸಿಐಡಿಗೆ ತನಿಖೆ ಬಗ್ಗೆ ವಿಚಾರಿಸಿದೆ. ಆದರೆ ಅವರು ನಮಗೆ ಚುನಾವಣಾ ಆಯೋಗದಿಂದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನಾವು ಈ ಪ್ರಕರಣದಲ್ಲಿ ಅಸಹಾಯಕರು ಎಂದು ತಿಳಿಸಿದರು. ಈಗ ಆಂತರಿಕ ತನಿಖೆಗಾಗಿ ಸೈಬರ್ ಅಪರಾಧ ವಿಭಾಗಕ್ಕೆ ನೀಡಲು ಚಿಂತನೆ ನಡೆಸುತ್ತಿದ್ದಾರೆ” ಎಂದರು.

“ನನ್ನ ಕ್ಷೇತ್ರದಲ್ಲಿ 6018 ಮತಗಳನ್ನು ತೆಗೆಯಲು ಮನವಿ ಬಂದಿದ್ದು ಈ ಮನವಿ ಸಲ್ಲಿಸಿರುವವರಿಗೂ ಈ ಬಗ್ಗೆ ಮಾಹಿತಿ ಇಲ್ಲ, ಯಾರ ಹೆಸರು ತೆಗೆಯಬೇಕಾಗಿದೆಯೋ ಅವರಿಗೂ ಇದರ ಬಗ್ಗೆ ಅರಿವಿಲ್ಲ. ಇಂತಹ ಗೋಲ್ಮಾಲ್ ಮೂಲಕ ನನ್ನನ್ನು ಸೋಲಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಈ ಸಂಚು ರೂಪಿಸಿದೆ” ಎಂದು ದೂರಿದರು.

“ಚುನಾವಣಾ ಆಯೋಗ ಈಗ ನಾವು ಈ ಮತದಾರರ ಹೆಸರನ್ನು ಡಿಲೀಟ್ ಮಾಡಿಲ್ಲ ಎಂದು ಸಮಜಾಯಷಿ ನೀಡುತ್ತಿದೆ. ನಿಜ ಡಿಲೀಟ್ ಮಾಡಿಲ್ಲ. ಆದರೆ ನಾವು ಎಚ್ಚರವಹಿಸದೇ ಇದ್ದಿದ್ದರೆ ನೀವು ಡಿಲೀಟ್ ಮಾಡುತ್ತಿದ್ದಿರಿ. ಆಗ ನಾನು ಚುನಾವಣೆಯಲ್ಲಿ ಸೋಲಬೇಕಾಗಿತ್ತು. ಒಂದು ವೇಳೆ ಈ ಮತಗಳು ಡಿಲೀಟ್ ಆಗಿದ್ದರೆ ನಾನು ಸುಮಾರು ಒಂದೂವರೆ ಸಾವಿರ ಮತಗಳಿಂದ ಸೋಲುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಈ ರೀತಿ ಹೈಜಾಕ್ ಮಾಡುವ ಕೆಲಸವನ್ನು ಚುನಾವಣಾ ಆಯೋಗವೇ ಮಾಡುತ್ತಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿದ್ದು, ಈ ವಿಚಾರವಾಗಿ ಹಡ್ರೋಜನ್ ಬಾಂಬ್ ಹಾಕಲಿದ್ದಾರೆ” ಎಂದರು.

“ಈ ಮತಗಳ್ಳತನ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಸಿಐಡಿ ಕೇಳಿರುವ ಎಲ್ಲಾ ಮಾಹಿತಿಯನ್ನು ಆಯೋಗ ಒದಗಿಸಬೇಕು. ನಿನ್ನೆ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಪ್ರಿನ್ಸಿಪಲ್ ಸೆಕ್ರೇಟರಿ ಅವರಿಗೆ ಪತ್ರ ಬರೆದು, ನಾವು ಎಲ್ಲಾ ಅಗತ್ಯ ದಾಖಲೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಅವರು ಸಂಪೂರ್ಣ ದಾಖಲೆ ನೀಡಿದ್ದರೆ ಸಿಐಡಿ ಅವರು 18 ಬಾರಿ ಪತ್ರ ಯಾಕೆ ಬರೆಯಬೇಕಾಗಿತ್ತು. ಈ ಪತ್ರಗಳಿಗೆ ಆಯೋಗವು ಯಾವುದೇ ಸ್ಪಂದನೆ ನೀಡಿಲ್ಲ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X