ವಾಲ್ಮೀಕಿ ಜಯಂತಿ ಪ್ರಯುಕ್ತ ಪ್ರತಿಭಾ ಪುರಸ್ಕಾರ

Date:

Advertisements

ಬಾಗೇಪಲ್ಲಿ: ಅಕ್ಟೋಬರ್ 12ರಂದು ಮೂರು ಮಹತ್ವದ ಕಾರ್ಯಕ್ರಮಗಳು ಚಾಲನೆ ಆಗುತ್ತಿವೆ ವಾಲ್ಮೀಕಿ ಭವನ ಉದ್ಘಾಟನೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರತಿಭಾ ಪುರಸ್ಕಾರ, ಆಗುತ್ತಿರುವುದು ಸಂತಸದ ವಿಷಯ ಎಂದು ನೂತನ ವಾಲ್ಮೀಕಿ ಕ್ಷೇಮ ಅಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ,ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬೂರಗಮೊಡಗು ನರಸಿಂಹಪ್ಪ ತಿಳಿಸಿದರು.

ಅವರು ಸೋಮವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ವಾಲ್ಮೀಕಿ ನಾಯಕರ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ ಬೇರೆ ಬೇರೆಯಾಗಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಾ ಬಂದಿದ್ದರು. ಈಗ ನೌಕರ ಕ್ಷಮಾಭಿವೃದ್ಧಿ ಸಂಘ ಹಾಗೂ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಒಟ್ಟಿಗೆ ವಾಲ್ಮೀಕಿ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ, ನಮ್ಮ ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿಯವರ ಸಹಕಾರದಿಂದ ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆಗೆ ಸಜ್ಜಾಗಿದ್ದು ನೂತನ ಭವನವನ್ನು ಮಾನ್ಯ ಶಾಸಕರು ಹಾಗೂ ವಾಲ್ಮೀಕಿ ಮಹಾಸಂಸ್ಥಾನದ ಶ್ರೀ ಶ್ರೀ ಪ್ರಸನ್ನನಂದಾ ಸ್ವಾಮಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಯಾಗಲಿದೆ ಹಾಗೆ ಸಮುದಾಯ ಭವನದ ಹಿಂಭಾಗದಲ್ಲಿ ವಾಲ್ಮೀಕಿ ದೇವಾಲಯಕ್ಕೆ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ಸಹ ಅಂದೇ ಮಾಡಲಿದ್ದಾರೆ.

ಈ ಒಂದು ಕಾರ್ಯಕ್ರಮಕ್ಕೆ ಬಾಗೇಪಲ್ಲಿ ತಾಲೂಕಿನ ಸಮಸ್ತ ವಾಲ್ಮೀಕಿ ಸಮುದಾಯದ ಬಂಧುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಹೋಬಳಿ ಮಟ್ಟದಲ್ಲಿ ಅಲ್ಲಿನ ಸಮಿತಿಯ ಸದಸ್ಯರು ಸಮುದಾಯವನ್ನು ಸಂಘಟಿಸಬೇಕು ಎಂದು ಅವರು 12 ರಂದು ನಡೆಯುವ ವಾಲ್ಮೀಕಿ ಜಯಂತಿ ಹಾಗೂ ಸಮುದಾಯವನ್ನು ಉದ್ಘಾಟನೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸುಮಾರು 15 ಸಾವಿರ ಮಂದಿ ಭಾಗವಹಿಸಿದ್ದರು 5000 ಮಹಿಳೆಯರು ಪೂರ್ಣ ಕುಂಭ ಕಳಸದೊಂದಿಗೆ ಭಾಗವಹಿಸುತ್ತಾರೆ ಎಂದ ಅವರು ಈ ಬಾರಿ ವಾಲ್ಮೀಕಿ ಸರ್ಕಾರಿ ನೌಕರರ ಸಂಘ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಆಡಳಿತ ಸಂಯುಕ್ತವಾಗಿ ಇದೆ ತಿಂಗಳು 12 ರಂದು ಅದ್ದೂರಿಯಾಗಿ ಮಾಡಲಾಗುವುದು ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಈ ಒಂದು ಕಾರ್ಯಕ್ರಮದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಈ ಹಿಂದೆ ಹಿರಿಯರು ನಡೆಸಿಕೊಂಡ ಬಂದಂತಹ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮರಿಯಪ್ಪ ಕಾರ್ಯದರ್ಶಿಯಾಗಿ ಗಡ್ಡಂ ನರಸಿಂಹಪ್ಪ ಇಷ್ಟು ದಿನಗಳ ಕಾಲ ಸಮುದಾಯದ ಪರವಾಗಿಬರುತ್ತಿದ್ದೆವು, ಮಂಗಳವಾರ ಅಕ್ಟೋಬರ್ 7 ರಂದು ಸರ್ಕಾರದ ವತಿಯಿಂದ ಸರಳವಾಗಿ ಆಚರಣೆ ಮಾಡಿ ಮಾಡಲಿದ್ದು, ನೂತನವಾಗಿ ಸಮಿತಿ ರಚನೆಯಾಗಿದ್ದು ಈ ಒಂದು ಸಮಿತಿಯಲ್ಲಿ 17 ಗ್ರಾಮ ಪಂಚಾಯ 1,700 ಮಂದಿ ಸದಸ್ಯರಾಗಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಮಿತಿಗಳನ್ನ ರಚನೆ ಮಾಡಿ ಪದಾಧಿಕಾರಿಗಳ ಪಟ್ಟಿ ಘೋಷಣೆ ಮಾಡುವದಾಗಿ ಹೇಳಿದರು.

ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಶಿವಪ್ಪ ಮಾತನಾಡಿ ಸುಮಾರು 17 ವರ್ಷಗಳಿಂದ ನೌಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೆವು ಈ ಬಾರಿ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧ ಸಂಘ
ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘ ಒಟ್ಟಿಗೆ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಖಂಡ ಅಮರಪ್ಪ ಮಾತನಾಡಿ ಪ್ರತಿ ಗ್ರಾಮದಲ್ಲಿ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಸಿದ್ಧತೆ ಮಾಡುತ್ತಿರುವುದಾಗಿ ತಿಳಿಸಿದರು.

ಇದನ್ನು ಓದಿದ್ದೀರಾ..? ವೇಮಗಲ್-ನರಸಾಪುರ ಯೋಜನಾ ಪ್ರಾಧಿಕಾರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಈ ಸಂದರ್ಭದಲ್ಲಿ ಮುಖಂಡರಾದ ಅಮರಪ್ಪ, ಶಿವಪ್ಪ .ಪುರಸಭೆ ಸದಸ್ಯ ಗಡ್ಡಂ ರಮೇಶ್. ಶಿವಪ್ಪ ದೇವರೆಡ್ಡಿಪಲ್ಲಿ. ಗೂಳೂರುಬಾಬು. ಜಿಎನ್ ಕೃಷ್ಣಮೂರ್ತಿ. ಅದಿ ನಾರಾಯಣ. ಲಕ್ಷ್ಮಿ ನರಸಿಂಹಪ್ಪ. ನಾಗರಾಜು. ಶ್ರೀರಾಮ್. ಮಂಜುನಾಥ್. ಅಶ್ವತಪ್ಪ. ಇನ್ನು ಮುಂತಾದವರು ಉಪಸ್ಥಿತರಿದ್ದರು

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X