ಚಿಂತಾಮಣಿ : ಎಲ್ಲಾ ವಾಲ್ಮೀಕಿ ಸಮುದಾಯದವರು ರಾಜಕೀಯವನ್ನು ಮೆರೆತು ಒಟ್ಟುಗೂಡಿ ಎಲ್ಲರೂ ವಾಲ್ಮೀಕಿ ಜಯಂತಿಯನ್ನು ಆಚರಿಸೋಣ ಎಂದು ವಾಲ್ಮೀಕಿ ಮುಖಂಡರಾದ ವೆಂಕಟೇಶ್,ಶಂಕರ್, ಮಾಡಿಕೆರೆ ಮಣಿಕಂಠ,ಆನಂದ್, ರವರು ಹೇಳಿದರು.
ಇದೇ ಅಕ್ಟೋಬರ್ 07 ರಂದು ಚಿಂತಾಮಣಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಕರ್ನಾಟಕ ಸರ್ಕಾರವು ವಾಲ್ಮೀಕಿ ಜಯಂತಿಯನ್ನು ನಾಡಹಬ್ಬವಾಗಿ ಆಚರಿಸುತ್ತಿರುವುದರಿಂದ ಅವರೊಂದಿಗೆ ನಮ್ಮ ಎಲ್ಲಾ ಕುಲಬಾಂಧವರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಬಿಕ್ಕಟ್ಟು ಬಾರದ ಹಾಗೆ ಒಗ್ಗಟ್ಟಿನಿಂದ ಪಕ್ಷದಾರಿತವಲ್ಲದೆ ಈ ಮಹಾಪುರುಷನ ಜಯಂತಿಯ ಆಚರಿಸಬೇಕಾಗಿರುವುದರಿಂದ ಎಲ್ಲಾ ಕುಲಬಾಂಧವರು ಜೊತೆಗೆ ಚಿಂತಾಮಣಿ ತಾಲೂಕಿನ ಎಲ್ಲಾ ಸಮಸ್ತ ನಾಗರಿಕರು,ಸರ್ವ ಪಕ್ಷಗಳ ಮುಖಂಡರು,ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅನುಗ್ರಹ ಪಡೆದು ಬಹಳ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಲು ಸಹಕರಿಸಬೇಕೆಂದು ಕೋರಿದರು.
ಇದನ್ನು ಓದಿದ್ದೀರಾ..? ಕಾಂಗ್ರೆಸ್ ಕಛೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ
ಅಕ್ಟೋಬರ್ 7ರಂದು ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ಮೆರವಣಿಗೆ ಕಾರ್ಯಕ್ರಮ ಮಧ್ಯಾಹ್ನ 1:00ಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.