ಬೇತಮಂಗಲ: ಮಾಲೂರು ತಾಲೂಕಿನಲ್ಲಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವ ಕೃತ್ಯವನ್ನು ಖಂಡಿಸುತ್ತಾ ಶಿಕ್ಷಕರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನೊಂದ ಶಿಕ್ಷಕಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಕೆಜಿಎಫ್ ಘಟಕದ ಅಧ್ಯಕ್ಷ ದೇವೆರಹಳ್ಳಿ ಎಂ ನಾರಾಯಣ ಸ್ವಾಮಿ , ಪ್ರ. ಕಾರ್ಯದರ್ಶಿ ಎಸ್ ಎಂ ತ್ಯಾಗರಾಜು, ಖಜಾಂಚಿ ವಸಂತ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿಯ ವಿದ್ಯಾರ್ಥಿ ಶಾಲೆಗೆ ಗೈರಾಗಿದ್ದರು ಇದನ್ನು ದಂಡಿಸಿದ ಶಿಕ್ಷಕಿಯ ಮೇಲೆ ವಿದ್ಯಾರ್ಥಿ ತಂದೆ ಕರ್ತವ್ಯದಲ್ಲಿದ್ದ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕೊಠಡಿಯಿಂದ ಹೊರಕ್ಕೆ ಎಳೆದು ಹಾಕಿದ್ದು, ಶಿಕ್ಷಕರಿಗೆ ಭದ್ರತೆ ಇಲ್ಲದಂತಾಗಿದೆ.
ಇದನ್ನು ಓದಿದ್ದೀರಾ..?ಸುಮಾರು 1.44 ಕೋಟಿ ರೂ., ಹೈ ಮಾಸ್ಟ್ ದ್ವೀಪ ಕಾಮಗಾರಿಗಳಿಗೆ ಚಾಲನೆ..!
ಈ ಕೂಡಲೇ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ಘಟನೆಯಿಂದ ಇಡೀ ಶಿಕ್ಷಣ ಇಲಾಖೆ ಭೀತಿಗೆ ಒಳಗಾಗಿದ್ದು, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ ಕೆಜಿಎಫ್ ತಾಲೂಕಿನ ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಶಿಕ್ಷಕರಿಗೆ ರಕ್ಷಣೆ ನೀಡುವಂತೆ ಸರ್ಕಾರದ ಮೇಲೆ ಹಾಗೂ ಇಲಾಖೆಯ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಶಿಕ್ಷಕ ಆನಂದ್ ತಿಳಿಸಿದ್ದಾರೆ.