ಬಾಗೇಪಲ್ಲಿ:-ಶಿಕ್ಷಕ ಕೇವಲ ವ್ಯಕ್ತಿಯಲ್ಲ, ಆ ವೃತ್ತಿ ಮಕ್ಕಳ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಅವರು ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ,ಶಾಲಾ ಶಿಕ್ಷಣ ಇಲಾಖೆ ,ಶಿಕ್ಷಣ ದಿನಾಚರಣೆ ಆಚರಣೆಯ ಸಮಿತಿ ಹಾಗೂ ಖಾಸಗಿ ಶಾಲೆಗಳು ಒಕ್ಕೂಟ ಬಾಗೇಪಲ್ಲಿ ತಾಲ್ಲೂಕು 138 ನೇ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿ ನಾಕಾರಾತ್ಮಕ ಭಾವನೆಗಳನ್ನು ತುಂಬದೆ ನಿಮ್ಮಿಂದ ಎಲ್ಲವೂ ಸಾಧ್ಯವೆಂಬ ಸಕಾರಾತ್ಮಕ ಭಾವನೆಗಳನ್ನು ತುಂಬುವ ಕೆಲಸ ಮಾಡಬೇಕು. ಶಿಕ್ಷಕ ವೃತ್ತಿ ಎನ್ನುವುದು ಜಗತ್ತಿನ ಅತ್ಯಂತ ಪವಿತ್ರ ವೃತ್ತಿ ಎಂದು ಕರೆಯಲ್ಪಡುತ್ತದೆ. ಕಾಲಕ್ಕೆ ತಕ್ಕಂತೆ ನಮ್ಮ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಮತ್ತು ಅಷ್ಟೇ ಭದ್ಧತೆಯಿಂದ ಕೆಲಸ ಮಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕ ಎಂದರು.
ನಾನು ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಲು ಶಿಕ್ಷಣಕ್ಕೆ ಹೆಚ್ಚು ಒತ್ತು ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ತಂದು ಪ್ರತಿ ತಾಲ್ಲೂಕಿಗೆ ಒಂದೊಂದು ವಸತಿ ಶಾಲೆ ಪ್ರಾರಂಭಿಸುತ್ತೇನೆ. 2.5 ಕೋಟಿ ವೆಚ್ಚದಲ್ಲಿ ಗುರು ಭವನ ನಿರ್ಮಾಣ ಮಾಡಿ ಮುಂದಿನ ವರ್ಷದಲ್ಲಿ ಶಿಕ್ಷಕರ ದಿನಾಚರಣೆ ಮಾಡಲು ತೀರ್ಮಾನ ಮಾಡಿದ್ದೇನೆ ಆದ್ದರಿಂದ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟ ಮೈದಾನದಲ್ಲಿ ಇಂದು ಗುರು ಭವನಕ್ಕೆ ಭೂಮಿ ಪೂಜೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ವಯೋ ನಿವೃತ್ತ ಹೊಂದಿದ ಶಿಕ್ಷಕರು,ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಶಾಸಕರು ಆತ್ಮೀಯವಾಗಿ ಸನ್ಮಾನಿಸಿದರು,
ಇದಕ್ಕೂ ಮುಂಚೆ ಪಟ್ಟಣದ ಡಿ.ವಿ.ಜಿ ಮುಖ್ಯ ರಸ್ತೆಯಲ್ಲಿ ಸರ್ವಪಲ್ಲಿ ಡಾ.ಎಸ್.ರಾಧಾಕೃಷ್ಣನ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು.
ಇದನ್ನು ಓದಿದ್ದೀರಾ..? ಕೋಲಾರ ಹನುಮಂತನಗರದಲ್ಲಿ 30 ಲಕ್ಷದ ಸಿಸಿ ರಸ್ತೆಗೆ ಗುದ್ದಲಿ ಪೂಜೆ
ಈ ಸಂದರ್ಭದಲ್ಲಿ ಅತಿಕ್ ಪಾಷಾ, ಮನೀಷಾ ಎನ್ ಪತ್ರಿ,ರಮೇಶ್, ಎನ್.ವೆಂಕಟೇಶಪ್ಪ, ವೆಂಕಟರಾಮ್, ಆರ್.ಹನುಮಂತ ರೆಡ್ಡಿ, ಶ್ರೀನಿವಾಸ ರೆಡ್ಡಿ, ಡಿ.ಶಿವಣ್ಣ, ಪಿ.ವಿ.ವೆಂಕಟರವಣ,ಸಿ.ವೆಂಕಟರಾಯಪ್ಪ ,ಡಿ.ಎನ.ರಘುನಾಥ್,ಎ.ಶ್ರೀನಿವಾಸ್, ಸುಜಾತ ನರಸಿಂಹ ನಾಯ್ಡು, ಎ.ನಂಜುಂಡಪ್ಪ, ಮಂಜುನಾಥ್ ರೆಡ್ಡಿ ಲಕ್ಷ್ಮೀನರಸಿಂಹಪ್ಪ,
ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಿ ಹಾಗೂ ಖಾಸಗಿ ಶಾಲೆ ಶಿಕ್ಷಕರು ಹಾಜರಿದ್ದರು.