ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು; ಸಚಿವ ಈಶ್ವರ ಖಂಡ್ರೆ ರಾಜೀನಾಮೆ ನೀಡಲಿ : ಖೂಬಾ

Date:

Advertisements

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹ್ಯೂಗಂ ವಲಯದಲ್ಲಿ ಐದು ಹುಲಿಗಳ ಸಾವಾಗಿದ್ದು, ಈ ಕುರಿತು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತಿದ್ದು, ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಅರಣ್ಯ ಇಲಾಖೆ ವನ್ಯ ಜೀವಿಗಳ ರಕ್ಷಣೆಯಲ್ಲಿ ವಿಫಲವಾಗಿದೆ, ಸಚಿವ ಈಶ್ವರ ಖಂಡ್ರೆ ಇದರ ಜವಬ್ದಾರಿ ಹೊತ್ತು, ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.

ಈ ವಿಷಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಉತ್ತರಿಸಲಾಗದೆ, ಪತ್ರಕರ್ತರಿಗೆ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ ಎಂದು ಗುರಾಯಿಸಿ, ತನ್ನ ರಾಕ್ಷಸ ಪ್ರವರ್ತಿ ಮುಂದುವರೆಸಿದ್ದಾರೆ. ಇದನ್ನು ನಿಲ್ಲಿಸಬೇಕು ಮತ್ತು ಹುಲಿಗಳ ಸಾವಿನಲ್ಲಿ ಆದ ನಿಷ್ಕಾಳಜಿ ಕುರಿತು ದೇಶದ ಜನತೆಯಲ್ಲಿ ಈಶ್ವರ ಖಂಡ್ರೆ ಕ್ಷಮೆಯಾಚಿಸಬೇಕೆಂದು ಖೂಬಾ ಶನಿವಾರ ಪ್ರಕಟಣೆ ಮುಖಾಂತರ ಆಗ್ರಹಿಸಿದ್ದಾರೆ.

ʼಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರದ ಎರಡನೇ ರಾಜ್ಯ ಎಂಬ ಖ್ಯಾತಿ ಪಡೆದಿರುವ ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ. ಆದರೆ ಮಂತ್ರಿಯಾಗಲಿ, ಸರ್ಕಾರವಾಗಲಿ ಇದರ ಹೊಣೆ ಹೊತ್ತಿಲ್ಲ, ಕೇವಲ ತನಿಖೆ ನಡೆಯುತ್ತಿದೆ ಎನ್ನುವ ಬೇಜವಬ್ದಾರಿ ಹೇಳಿಕೆ ನೀಡಿ ತನ್ನ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಖಂಡ್ರೆ ಅಹಂಕಾರ, ಭಂಡತನ ಮತ್ತು ಭ್ರಷ್ಟಾಚಾರದಲ್ಲಿ ಎತ್ತಿದ ಕೈ, ಇನ್ನು ಅವರ ಹಾದಿಯಲ್ಲೆ ಅವರ ಇಲಾಖೆಯೂ ಸಾಗುತ್ತಿದೆ ಎಂಬುದು ಈ ಘಟನೆಯಿಂದ ತಿಳಿದುಬರುತ್ತಿದೆ, ಇದು ದುರದೃಷ್ಟಕರʼ ಎಂದು ಎಂದರು.

Advertisements

ʼಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ, ಬಿಜೆಪಿ, ಆರ್‌ಎಸ್‌ಎಸ್ ನಾಯಕರು ನೆನಪಿಗೆ ಬರುತ್ತಾರೆ, ಯಾವುದೋ ಒಂದು ವೇದಿಕೆ ಬಳಸಿಕೊಂಡು, ಅಲ್ಲಿ ಸಂವಿಧಾನದ ನೆನಪು ಮಾಡಿ, ಬಿಜೆಪಿಗರಿಗೆ, ಆರ್‌ಎಸ್‌ಎಸ್‌ನವರಿಗೆ ಬೈದು ನಾನೊಬ್ಬ ಸಮಾಜವಾದಿ, ಜಾತ್ಯತೀತವಾದಿ ಎಂದು ತೋರಿಸಿಕೊಳ್ಳುವ ಕೆಲಸ ಸಿದ್ದರಾಮಯ್ಯನವರು ಮಾಡುತ್ತಾರೆʼ ಎಂದು ಹೇಳಿದರು.

ಈಶ್ವರ ಖಂಡ್ರೆ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ

ʼಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ನಿಜವಾಗಿಯೂ ಸಂವಿಧಾನದ ಕಗ್ಗೊಲೆಯಾಗಿತ್ತು, ಆ
ಸಂದರ್ಭದಲ್ಲಿ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದರು, ಅಂದು ವಿರೋಧಿಸಿದ್ದರು, ಈಗೇಕೆ ನೆನಪು ಮಾಡುತ್ತಿಲ್ಲ, ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ನಿಂದ ಅವಮಾನವಾಗಿತ್ತು ಅದರ ಬಗ್ಗೆ ಸಿದ್ದರಾಮಯ್ಯ ಮಾತನಾಡಲ್ಲʼ ಎಂದರು.

ಇದನ್ನೂ ಓದಿ : ಜೂನ್‌ 30ರಂದು ಬೀದರ್‌ನಲ್ಲಿ ʼಸದ್ಭಾವನಾ ನಡಿಗೆʼ

ʼಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂದು ಸಂವಿಧಾನ ವಿರೋಧಿ ನಡೆ ಅನುಸರಿಸಿಲ್ಲ, ಸಬಕಾ ಸಾಥ್ ಸಬಕಾ ವಿಕಾಸ ದಾರಿಯಲ್ಲಿ ಎಲ್ಲರ ಅಭಿವೃದ್ದಿ ಮಾಡಲಾಗುತ್ತಿದೆ, ಕಾಂಗ್ರೆಸ್ ಪಕ್ಷದಂತೆ ನಮ್ಮ ಪಕ್ಷ ಇಲ್ಲ, ಸಿದ್ದಾಂತ, ರಾಷ್ಟ್ರಭಕ್ತಿ ಹೊಂದಿರುವ ಪಕ್ಷ ನಮ್ಮದಾಗಿದೆʼ ಎಂದು ಖೂಬಾ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X