ಕೆಲಸದ ಅವಧಿ ಕಡಿಮೆಗೊಳಿಸುವುದು ಸೇರಿದಂತೆ ಕಾರ್ಮಿಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಬಾಗಲಕೋಟೆ ಜಿಲ್ಲಾ ಘಟಕ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಕಾರ್ಮಿಕರ ಪ್ರಮುಖ ಬೇಡಿಕೆಗಳಾದ ಕೆಲಸದ ಅವಧಿಯ ಹೆಚ್ಚಳ ಬೇಡ, ಗುತ್ತಿಗೆ ಪದ್ದತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನ 36000ಕ್ಕೆ ಹೆಚ್ಚಳ ಮಾಡಬೇಕು ಸೇರಿದಂತೆ ಹಲವು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತದ ಭವನದವೆರೆಗೆ ಮೆರವಣಿಗೆ ಮಾಡಿ ಬಳಿಕ ಬಹಿರಂಗ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಎಐಯುಟಿಯುಸಿ ಜಿಲ್ಲಾ ಸಂಘಟನಾಕ ಸಿದ್ದಲಿಂಗ ಬಾಗೇವಾಡಿ ಮಾತನಾಡುತ್ತಾ, “ಇಲ್ಲಿಯವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ದೇಶದ ಶ್ರೀಮಂತರ ಸೇವೆ ಮಾಡುತ್ತಾ ಬಂದಿವೆ. ಅದರಿಂದ ದೇಶದಲ್ಲಿ ಬಡತನ, ಬೆಲೆ ಏರಿಕೆ, ನಿರುದ್ಯೋಗ, ಹಸಿವು ಉಲ್ಬಣಗೂಳ್ಳುತ್ತಿವೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಎಲ್ಲಾ ಕ್ಷೇತ್ರದ ಕಾರ್ಮಿಕರು ಒಗ್ಗಟ್ಟಾಗಿ ಬಲಿಷ್ಠ ಹೋರಾಟ ಕಟ್ಟುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತು ಹಾಕಿ, ಕಾರ್ಮಿಕರ ಪರ ಸಮಾಜವಾದ ವ್ಯವಸ್ಥೆ ಜಾರಿಗೂಳಿಸಿವುದೇ ನಮ್ಮ ಮುಂದೆ ಇರುವ ಏಕೈಕ ಮಾರ್ಗ” ಎಂದು ಕರೆನಿಡಿದರು.
ಸೌಜನ್ಯ ಪರ ನಿಂತಿದ್ದಕ್ಕಾಗಿ ಈದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ಮಾಡಲಾಗಿದೆ. ಪರ್ಯಾಯವಾಗಿ
eedina tv ಚಾನೆಲ್ ಕಾರ್ಯನಿರ್ವಹಿಸುತ್ತಿದೆ. ಸಬ್‌ಸ್ಕ್ರೈಬ್ ಮಾಡಿ👇🏽
https://www.youtube.com/@EedinaTv
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಬಹು ಹಳ್ಳಿ ಕುಡಿಯುವ ನೀರು ಸರಬರಾಜು ನೌಕರರು, ಸಂಘಟನೆಗಳ ಮುಖಂಡರಗಳಾದ ಸುರೇಖಾ ಕಾಳೆ, ಮಂಜುಳಾ ನಾಯಕ, ಭಾರತಿ ಚವ್ಹಾಣ, ರಮೇಶ ಬಂಡಿವಡ್ಡರ ಮೈತ್ರಾ ಹಿರೇಮಠ, ಕಾಶಿಬಾಯಿ ಯಾವಗಲ್ ನಾರಾಯಣ ಇಂಗಳೆ, ನೀಲಕಂಠಯ್ಯ ದಾನಮ್ಮ ಕುಂಬಾರ, ಗೀತಾ ನೂರಾರು ಕಾರ್ಮಿಕರು ಈ ಪ್ರತಿಭಟನಾ ಮೇರವಣಿಗಯಲ್ಲಿ ಭಾಗವಹಿಸಿದ್ದರು.