ಆಶ್ರಯ ಯೋಜನೆಯಡಿ 500 ಮನೆಗಳ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟದ ಪುರಸಭೆ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನೆಲೆ ಪುರಸಭೆ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ ಉದ್ವಟನೆ, 500 ಆಶ್ರಯ ಫಲಾನುಭವಿಗಳಿಗೆ ಮನೆ ಕಟ್ಟಡದ ಕಾರ್ಯಾದೇಶ ಪತ್ರ, ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ವಿತರಣೆ ಹಾಗೂ ಹೊನ್ನಾಪುರ ಸ್ಮರಣೆ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ 3.5 ಲಕ್ಷ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ಫಲಾನುಭವಿಗಳಿಗೆ 2.70 ಲಕ್ಷ ರೂಳನ್ನು ಫಲನುಭವಿಗಳ ಖಾತೆಗೆ ನಾಲ್ಕು ಹಂತದಲ್ಲಿ ಜಮೆ ಮಾಡಲಾಗುವುದು. ಇದಕ್ಕಾಗಿ ಜನಪ್ರತಿನಿಧಿಗಳು ಸೇರಿದಂತೆ ಯಾವುದೇ ಸಿಬ್ಬಂದಿ ಗೆ ಹಣ ಕೊಡುವ ಅವಶ್ಯಕತೆ ಇರುವುದಿಲ್ಲ. 2018ರಿಂದ 2023 ರ ಅವಧಿಯಲ್ಲಿ ಹುನಗುಂದ ಪಟ್ಟಣದ ಅಭಿವೃದ್ಧಿ ಮರೀಚಿಕೆಯಾಗಿತ್ತು. ಅಮೃತ-2 ಯೋಜನೆಡಿಯಲ್ಲಿ 60 ಕೋಟಿ ಮಂಜೂರಾಗಿದೆ. ಈ ಅನುದಾನ ಬಳಸಿ ನಾನಾ ಕಾಮಗಾರಿ ಕೈಗೊಳ್ಳಲಾಗುವುದು” ಎಂದರು.

ಪುರಸಭೆ ಮಾಜಿ ಅಧ್ಯಕ್ಷರ ಜತೆಗೆ ನಾನಾ ಕ್ಷೇರ್ತಾಗಳಲ್ಲಿ ಸಾಧನೆ ಮಾಡಿದ 50 ಜನರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಬಾಗಲಕೋಟೆ | ಭಾರೀ ಮಳೆಯಿಂದ ಈರುಳ್ಳಿ ಬೆಳೆನಾಶ; ಪರಿಹಾರಕ್ಕೆ ಕಿಸಾನ್ ಸಂಘ ಆಗ್ರಹ
ಕಾರ್ಯಕ್ರಮದಲ್ಲಿ ಅಮರೇಶ್ವೇರ ದೇವರು, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬಾದಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಡುವಿನಮನಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಮುರಳಿಧರ ದೇಶಪಾಂಡೆ, ಪುರಸಭೆ ಸದಸ್ಯರಾದ ಮೈನುಸಾಬ ಧನ್ನೂರ, ಚಂದ್ರಪ್ಪ ತಳವಾರ, ಬಸವರಾಜ ಗೊನ್ನಾಗಾರ, ಮಹಮ್ಮದ್ ಹುಸೇನ್ ದೊಟಿಹಾಳ, ಪರ್ವೀಜ್ ಖಾಜಿ, ಶರಣಮ್ಮ ಮುಕ್ಕಣ್ಣವರ, ಶಾಂತಮ್ಮ ಮೇಲಿನಮನಿ,ಶಾಂತಪ್ಪ ಹೊಸಮನಿ, ನಾಗರತ್ನ ತಾಳಿಕೋಟಿ, ಶರಣಪ್ಪ ಬೆಲ್ಲದ, ಗಿರಿಜಮ್ಮ ಮಠ, ಕಮಲವ್ವ ಸಂದಿಮನಿ, ಮುಖಾಂಡಾರದ ಸಂಗಣ್ಣ ಗಂಜಿಹಾಳ, ಮಹಾಂತೇಶ ಅವಾರಿ, ಶಿವಾನಂದ ಕಂಠಿ, ಮುತ್ತಣ್ಣ ಕಲಗೋಡಿ, ಬಸವರಾಜ ಗದ್ದಿ, ವಿಶ್ವನಾಥ ಬ್ಯಾಳಿ, ಜಬ್ಬಾರ ಕಲಬುರಗಿ, ಮೆಹಬೂಬ ಸರಕಾವಸ, ಜೈನೂಸಾಬ ಹಗೆದಾಳ, ಸಿದ್ದಪ್ಪ ಹೊಸೂರು, ಮಹಾಂತೇಶ ನಾಡಗೌಡ ಇದ್ದರು.