ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಅಕ್ಟೋಬರ್ 13ರಂದು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುವುದು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿದ್ದೇಶ್ವರ ಶ್ರೀ ಪ್ರಧಾನ ವೇದಿಕೆ, ಸಾಹಿತಿ ಎಂ ಎಸ್ ಸಿಂಧೂರ ಮಹಾದ್ವಾರ, ಮಹಾದೇವಪ್ಪ ಚಿಮ್ಮಡ ಮಂಟಪ ಮಹಾದ್ವಾರ, ಪ್ರಹ್ಲಾದ ಗುರುವ (ಗ್ಯಾರೆಂಟಿಪ್ಪ) ಮಳಿಗೆ, ಪಾರ್ವತಿ ಪಾಲಬಾವಿ ಮಠ ದಾಸೋಹ ದ್ವಾರಗಳನ್ನು ನಿರ್ಮಿಸಲಾಗುವುದು. ಭಾವತೀರ್ಥ ಸ್ಮರಣ ಸಂಚಿಕೆ ಬಿಡುಗಡೆ ಜತೆಗೆ ಸ್ವರ್ಣ ರಥೋತ್ಸವ ನಡೆಯುತ್ತದೆ” ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಸಂತೋಷ್ ತಳಕೇರಿ ಮಾತನಾಡಿ, “ಬಸವ ಭವನದಲ್ಲಿ ಧ್ವಜಾರೋಹಣ, ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಸಮ್ಮೇಳನ ಅಧ್ಯಕ್ಷ ಸಹಜಾನಂದ ಶ್ರೀಗಳ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಚಾಲನೆ ನೀಡುತ್ತಾರೆ. ಬೆಳಿಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದೆ. ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವಶ್ರೀ ಸಾನಿಧ್ಯ ವಹಿಸುವರು. ರುದ್ರ ವಧೂತ ಮಠದ ಸಹಜಾನಂದ ಅವದೂತರು ಸಮ್ಮೇಳನ ಅಧ್ಯಕ್ಷತೆ, ಶಾಸಕ ಜಗದೀಶ ಗುಡಗುಂಟೆ ಅಧ್ಯಕ್ಷತೆ, ಕಸಾಪ ಜಿಲ್ಲಾಧ್ಯಕ್ಷ ಆಶಯನುಡಿ, ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವವರು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಂತರ್ ಜಿಲ್ಲಾ ಕುರಿಗಳ್ಳರ ಸೆರೆ; ರಾಂಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆಗೆ ಮೆಚ್ಚುಗೆ
“ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಕೃತಿಗಳ ಬಿಡುಗಡೆ ಮಾಡುವರು. ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಚಿತ್ರಕಲಾ ಪ್ರದರ್ಶನ ಉದ್ವಾಟಿಸುವರು. ಡಾ. ವಿಜಯಲಕ್ಷ್ಮಿ ತುಂಗಳ ಮಳೆಗೆ ಉದ್ಘಾಟಿಸುವರು. ಸಮ್ಮೇಳನದ ಕಾರ್ಯಾಧ್ಯಕ್ಷ ಜಿ ಎಸ್ ನ್ಯಾಮಗೌಡ, ಉಮೇಶ್ ಮಹಾಬಲ ಶೆಟ್ಟಿ ಉಪಸ್ಥಿತಿ ವಹಿಸುವರು” ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಸಲ್ಲಿಕೆರೆ, ಜಿ ಎಸ್ ನ್ಯಾಮಗೌಡ, ಉಮೇಶ್ ಮಹಾಬಳ ಶೆಟ್ಟಿ, ಡಾ. ಎಚ್ ಜಿ ದಡ್ಡಿ, ಪ್ರೊ. ಬಸವರಾಜ ಕಡ್ಡಿ, ವಿನೋದ್ ಲೋನಿ, ಎನ್ಬಿ ಮಾಲಗಾರ, ರಾಜೇಶ್ವರಿ ಹಿರೇಮಠ, ಚಂದ್ರಕಲಾ ಜನಗೌಡ ಸೇರಿದಂತೆ ಇತರರು ಇದ್ದರು.