ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಿಸಲದಿನ್ನಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಅವರು ಬಸ್ ವ್ಯವಸ್ತಾಪಕಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿ, “ಕೂಡಲಸಂಗಮದಿಂದ ಮ್ಯಾಗೇರಿ ಹೋಗುವ ಮಾರ್ಗ ಮಧ್ಯದಲ್ಲಿ ಬಿಸಲದಿನ್ನಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರಿಗೆ, ವೃದ್ಧರಿಗೆ, ಅಂಗವಿಕಲರಿಗೆ. ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಬಸ್ ನಿಲ್ದಾಣವಿಲ್ಲದೆ ಬಸ್ ಬರುವವರೆಗೆ ಮಳೆ, ಬಿಸಿಲುಗಳಿಂದ ರಕ್ಷಣೆ ಪಡೆಯಲು ನಿಂತುಕೊಳ್ಳಲು, ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದೇ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಮನವಿ ಮಾಡಿದರೂ ಕೂಡ ಯಾವ ಬೆಳವಣಿಗೆಯೂ ಆಗಿಲ್ಲ. ಅದೇ ರೀತಿ ಗ್ರಾಮದ ರಸ್ತೆಗಳು ಕೂಡ ಹದಗೆಟ್ಟು ಬಹಳ ವರ್ಷ ಆಗಿದೆ ರಸ್ತೆ ಅಭಿವೃದ್ಧಿ ಮಾಡಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವಾರು ಬಾರಿ ಗ್ರಾಮಸ್ಥರು ಹೇಳಿ ಮನವಿ ಕೊಟ್ಟರು ಕೂಡ ಯಾವ ಸ್ಪಂದನೆಯನ್ನೂ ಮಾಡಿಲ್ಲ” ಎಂದು ಆರೋಪಿಸಿದರು.
“ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಹುನಗುಂದ ತಾಲೂಕು ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಬಿಸಲದಿನ್ನಿ ಗ್ರಾಮದ ಜನತೆಗೆ ಅವಶ್ಯ ಇರುವ ಬಸ್ ನಿಲ್ದಾಣ ಮತ್ತು ಉತ್ತಮ ರಸ್ತೆಗಳನ್ನು ಒದಗಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜೋಳಿಗೆ ಹಾಕಿ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಣೆ ಮಾಡಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಾಗುತ್ತದೆ” ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಹಲವು ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ
“ಬಿಸಲದಿನ್ನಿ ಮೂಲ ಸೌಕರ್ಯಗಳಲ್ಲೊಂದಾದ ನೀರು ಪೂರೈಕೆ ಮನೆ ಮನೆಗೆ ನೀರು ಸರಬರಾಜು ಮಾಡುವ ಜಲ ಜೀವನಮಷೀನ್ (ಜೆಜೆಎಂ) ಯೋಜನೆಯ ಕಾಮಗಾರಿ ಪೂರ್ಣಗೊಳಿಸದೇ ನೆನೆಗುದಿಗೆ ಬಿದ್ದಿದ್ದು, ಆ ಕಾಮಗಾರಿಯನ್ನು ಕೂಡ ಪೂರ್ಣಗೊಳಿಸಿ ಮನೆ ಮನೆಗೆ ನೀರು ಪೂರೈಕೆ ಮಾಡಬೇಕು. ಇಲ್ಲದೆ ಹೋದಲ್ಲಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಉಗ್ರ ಪ್ರತಿಭಟನೆಗಳನ್ನು ನಡೆಸಲಾಗುವುದು” ಎಂದು ಗುಡಿಗಿದರು.
ಈ ವೇಳೆ ಗಣೇಶ ನಾಯಕ, ಸಂಜಯಗೌಡ ಗೌಡರ, ಸೋಹೈಲ್ ಸುತಾರ, ಶಾಂತಾ ಬಾವಿಕಟ್ಟಿ, ಮಂಜುಳಾ ಅಂಗಡಿ, ನಾಗೇಶ ಗಣಾಚಾರಿ, ಶ್ರೀಶೈಲ ಹುದ್ದಾರ, ಕಾಶೀಮ ಮುಲ್ಲಾ, ಸಂತೋಷ ಪರಂಗಿ, ಪ್ರವೀಣ ಹೊಲ್ದೂರಮ, ರೇಖಾ ಭಜಂತ್ರಿ, ಕಸ್ತೂರಿಬಾಯಿ ಮೆಹರವಾಡೆ, ಸುಮಿತ್ರಾ, ಶಿರೂರು, ರೂಪಾ ಮಾಸಾ, ಅನುಸೂಯ ಐಲಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.