ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಂದ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ನರೇಗಾ ನೌಕರರು ಇಳಕಲ್ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಸುವಂತೆ ಮನವಿ ಸಲ್ಲಿಸಿದರು.
ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಪ್ರಮುಖ ಬೇಡಿಕೆಗಳಾದ 1) ಕಾರ್ಮಿಕರ ವಿರೋಧಿ ನಾಲ್ಕು ಲೇಬಲ್ ಕೋಡ್ ಗಳ ಜಾರಿ ಹಿಂಪಡೆಯಬೇಕು 2) ಕರಡು ಅಧಿಸೂಚನೆಯಲ್ಲಿ ₹31000 ಕನಿಷ್ಠ ವೇತನ ನಿಗದಿಪಡಿಸಿ ಅಂತಿಮಗೊಳಿಸಬೇಕು 3) ಪಿಂಚಣಿ ಜಾರಿಗೊಳಿಸುವುದು 4) ಸೇವಾ ಹಿರಿತನದ ಮೇಲೆ ವೇತನ ಹೆಚ್ಚಳ 5) ಪಂಚಾಯಿತಿಗೆ ಒಂದು ಎಸ್ ಡಿ ಎ ಹಾಗೂ ಎರಡನೇ ಡಿ ಇ ಒ ನೇಮಕಾತಿ ಮಾಡಿಕೊಳ್ಳಬೇಕು 6) ಆರೋಗ್ಯ ವಿಮೆ ಜಾರಿ ಮಾಡಬೇಕು ಸೇರಿ ಇನ್ನೂ ಹಲವು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಅಶೋಕ ಮಲಗಿಹಾಳ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಗೌಡರ, ಮಂಜುನಾಥ ತುಪ್ಪದ, ಸಂಗಪ್ಪ ಅಗಸಿ ಮುಂದಿನ, ಅಯ್ಯಪ್ಪ ಭಂಡಾರಿ ಅಮರೇಶ ರಾಮತಾಳ, ಯಲ್ಲಗುರೇಶ, ತಾಲೂಕ ಗ್ರಾಮ ಪಂಚಾಯಿತಿ ನೌಕರರ ಸಂಘದ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್ ಗಳು, ಸ್ವಚ್ಛತಾಗಾರರು ಹೋರಾಟದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬಾಗಲಕೋಟೆ | ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ