ಬೆಂಗಳೂರು ನಗರದ ಪ್ರಭಾತ್ ಕಲಾ ಸಂಭ್ರಮ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಶ್ರೀರಂಗಪಟ್ಟಣ ರೋಟರಿ ಕ್ಲಬ್ 202425ನೇ ಸಾಲಿನ ಬೆಸ್ಟ್ ನ್ಯೂ ಕ್ಲಬ್ ಪ್ರಶಸ್ತಿಗೆ ಭಾಜನವಾಗಿದೆ.
ನಿಕಟ ಪೂರ್ವ ಜಿಲ್ಲಾ ಪಾಲಕ ಮಹದೇವ ಪ್ರಸಾದ್ ಹಾಗೂ ಜಿಲ್ಲಾ ಪಾಲಕ ಪ್ರೊ. ಎಲಿಜಬೆತ್ ಚೆರಿಯನ್ ಪ್ರಶಸ್ತಿಯನ್ನು ನಿಕಟಪೂರ್ವ ಅಧ್ಯಕ್ಷ ಮಂಜುರಾಂ ಪುಟ್ಟೇಗೌಡ ಹಾಗೂ ಅಧ್ಯಕ್ಷ ಡಾ. ರಾಘವೇಂದ್ರ, ಉಪಾಧ್ಯಕ್ಷೆ ಕಾವೇರಮ್ಮ, ಕಾರ್ಯದರ್ಶಿ ಎನ್ ನಾಗೇಂದ್ರ, ನಿರ್ದೇಶಕ ಸುರೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀರಂಗಪಟ್ಟಣ ರೋಟರಿ ಕ್ಲಬ್‌ಗೆ ಪ್ರಶಸ್ತಿ ಬಂದಿರುವುದಕ್ಕೆ ಕ್ಲಬ್‌ನ ಎಲ್ಲ ನಿರ್ದೇಶಕರು ಹಾಗೂ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಸರ್ಕಾರಗಳು ರೈತರ ಕಾಲು ಹಿಡಿಯುವ ಪರಿಸ್ಥಿತಿ ಬರಲಿದೆ: ಶಾಸಕ ಕೊತ್ತೂರು ಮಂಜುನಾಥ್
2024-25ನೇ ಸಾಲಿನ ಅಧ್ಯಕ್ಷ ಮಂಜುರಾಂ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, “ಪ್ರಶಸ್ತಿ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇನ್ನೂ ಉತ್ತಮವಾದಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದು ಹೇಳಿದರು.