ಬೆಂಗಳೂರು | ಸೆ.20: ಸ್ಲಂ ನಿವಾಸಿಗಳ ಜೀವನ ಶೈಲಿಯನ್ನು ತಿಳಿಸುವ ‘ಕೇಳ್ರಾ’ ಆಲ್ಬಂ ಹಾಡು ಬಿಡುಗಡೆ

Date:

Advertisements

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಸ್ಲಂ ನಿವಾಸಿಗಳು, ಆ ನಗರಗಳ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವೇನು? ನಗರವನ್ನು ಕಟ್ಟಿದರೂ, ನಗರದ ಕಥಾನಕಗಳಲ್ಲಿ ಕಾಣಿಸದೆ ಉಳಿದಿರುವ ಸ್ಲಂ ಜನರ ಬದುಕು, ಅವರ ಧ್ವನಿಗಳು ಎಲ್ಲಿ? ಈ ಬಗ್ಗೆ ಎಲ್ಲ ವಿವರಗಳುಳ್ಳ ‘ಕೇಳ್ರಾ’ ಆಲ್ಬಂ ಹಾಡು ಸೆ.20ರಂದು ಬಿಡುಗಡೆ ಆಗಲಿದೆ.

ಬೆಂಗಳೂರಿನ ಜ್ಯೋತಿಪುರದಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಆಲ್ಬಂ ಹಾಡು ಬಿಡುಗಡೆ ಆಗಲಿದೆ.

17 ವರ್ಷದ ವಿದ್ಯಾರ್ಥಿ ಕರಾಬ್ ಸೂರ್ಯ ಬೆಂಗಳೂರಿನ ಜ್ಯೋತಿಪುರದ ನಿವಾಸಿ. ರ‌್ಯಾಪ್ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಸೂರ್ಯ, ತಾನಾಗಿಯೇ ಕಲಿತು, ರಚಿಸಿ, ಹಾಡಿ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ‘ಕೇಳ್ರಾ’ ಲ ಈ ಆಲ್ಬಂನ ಮೊದಲ ಪ್ರಸ್ತುತಿಯಾಗಿದೆ‌.

ಅಡವಿ, AKF ಸ್ಟುಡಿಯೋಗಳ ಹೊಸ ಆಲ್ಬಮ್ ‘ಸ್ಲಮ್‌ಲೋರ್ – ಲೂರುಸ್ ಲೋರ್’ ಆಗಿದ್ದು, ನಗರದ ಕಥೆ ಕಥಾನಕಗಳಲ್ಲಿ ಮೇಲ್ವರ್ಗ ಹಾಗೂ ಮೇಲ್ಜಾತಿಗಳ ದೃಷ್ಟಿಕೋನ ಹಾಗೂ ಅನುಭವಗಳು ಪ್ರಾಬಲ್ಯ ಸಾಧಿಸಿ ಪ್ರಚಲಿತೆಯಲ್ಲಿದೆ. ಆದರೆ, ನಗರದ ಕಥೆಗಳು ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತವೇ? ನಗರವನ್ನು ಕಟ್ಟಿದರೂ, ನಗರಕಥಾನಕಗಳಲ್ಲಿ ಕಾಣಿಸದೆ ಉಳಿದಿರುವ ಸ್ಲಂ ಜನರ ಜನರ ಬದುಕು, ಅವರ ಧ್ವನಿಗಳು ಎಲ್ಲಿ? ತಳ ಸಮುದಾಯಗಳನ್ನು ಕಾಲಾನುಕಾಲಗಳಿಂದ ಮೂಲೆಗುಂಪು ಮಾಡಿ, ಅವರ ಅಸ್ತಿತ್ವವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬುದನ್ನು ವಿವರಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

1980ರ ದಶಕದಲ್ಲಿ ದಲಿತ ಜನಪದಗಾರ ಮತ್ತು ನಾಟಕಕಾರ ಕೆ.ಎ. ಗುಣಶೇಖರನ್ “SlumLore” ಎಂಬ ಪದವನ್ನು ಪರಿಚಯಿಸಿದ್ದರು. ಸ್ಲಂಗಳಲ್ಲಿನ ಹಬ್ಬ-ಆಚರಣೆಗಳು, ಹೋರಾಟಗಳು, ಬದುಕಿನ ದನಿಗಳನ್ನು ಮುಖ್ಯವಾಹಿನಿಗೆ ತರಲು ಆರಂಭಿಸಿದ್ದರು.

IMG 20250919 WA0469

ಗುಣಶೇಖರನ್ ರವರ ಈ ಪ್ರಯತ್ನದ ಪ್ರೇರಣೆ ಹೊಂದಿರುವ, SlumLore ಆಲ್ಬಮ್ ಬೆಂಗಳೂರಿನ ಸ್ಲಂಗಳ ಕಥೆಗಳನ್ನು ಹಿಡಿದಿಡುತ್ತದೆ. ಇಲ್ಲೇ ಹುಟ್ಟಿ-ಬೆಳೆದ ಯುವಜನರ ಜೀವನಾನುಭವ ಈ ಆಲ್ಬಮ್ಮಿನ ಆಧಾರ. ತಮ್ಮ ಬದುಕನ್ನು ತಮ್ಮದೇ ಶಬ್ದಗಳಲ್ಲಿ, ತಮ್ಮದೇ ಸಂಗೀತದಲ್ಲಿ ಅವರು ಹೇಳುತ್ತಾರೆ. ಸಂಗೀತವಾಗಿ ರೂಪಾಂತರಗೊಂಡಿರುವ ತಳ ಸಮುದಾಯದ ಕಥೆಗಳನ್ನು  ಮುಖ್ಯವಾಹಿನಿಗೆ ತರುವುಲ್ಲಿ Adavi Arts Collective ಮತ್ತು “AKF Studios” ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಸ್ಲಂನಲ್ಲಿ ಬೆಳೆದಿರುವ ವಿದ್ಯಾರ್ಥಿ ಸೂರ್ಯ ಬೆಂಗಳೂರಿನ ಜ್ಯೋತಿಪುರದ ನಿವಾಸಿಯಾಗಿದ್ದು, ತನ್ನ ಹಾಗೂ ತನ್ನ ಸಮುದಾಯದ ಸಿಹಿ-ಕಹಿ, ಬದುಕು-ಬವಣೆ, ಕನಸುಗಳನ್ನು ತನ್ನ ಸಂಗೀತದ ಮೂಲಕ ಹೊರತರಲು ಆಶಿಸಿದ್ದಾನೆ.

ಈ ಆಲ್ಬಂ ಹಾಡು ಬೆಂಗಳೂರಿನಲ್ಲಿರುವ ಜ್ಯೋತಿಪುರದಲ್ಲಿ ಸೆ.20ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X