ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಸಮುದಾಯದ ಬದುಕು: ಉಮರ್‌ ಯು.ಹೆಚ್

Date:

Advertisements

ಯಾವುದೇ ಜನ ಸಮುದಾಯದ ಮಾತೃ ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಆ ಸಮುದಾಯದ ಪರಿಪೂರ್ಣ ಬದುಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್‌ ಯು.ಹೆಚ್.‌ ಅಭಿಪ್ರಾಯ ಪಟ್ಟರು.

ಅವರು ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕಲ್ಲಡ್ಕ ಮುರಬೈಲ್‌ ಯೂನಿಯನ್‌ನ ಸಹಯೋಗದೊಂದಿಗೆ ಕಲ್ಲಡ್ಕ ಮ್ಯೂಸಿಯಂನಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಾತೃ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ನಡೆದಾಗ ಮಾತ್ರ ಆ ಸಮುದಾಯ ಜೀವಂತವಾಗಿರಲು ಸಾಧ್ಯ ಎಂದು ಉಮರ್‌ ಯು. ಹೆಚ್.‌ ತಿಳಿಸಿದರು.

1002535720

ಉಪನ್ಯಾಸಕ ಅಬ್ದುಲ್‌ ರಝಾಕ್‌ ಅನಂತಾಡಿ ಬ್ಯಾರಿ ಭಾಷಾ ದಿನಾಚರಣೆಯ ಭಿತ್ರಿಪತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಬಂಟ್ವಾಳ ಬ್ಯಾರಿ ಫೌಂಡೇಶನ್‌ ಅಧ್ಯಕ್ಷ ಪಿ.ಎ. ರಹೀಮ್‌, ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್‌ ಅಧ್ಯಕ್ಷ ಮುಹಮ್ಮದ್‌ ಹನೀಫ್‌ ಗೋಳ್ತಮಜಲು, ಬಂಟ್ವಾಳ ತಾಲೂಕು ಜಮೀಯತುಲ್‌ ಫಲಾಹ್‌ ಅಧ್ಯಕ್ಷ ಅಬ್ಬಾಸ್‌ ಅಲಿ ಬಿ.ಎಂ., ಕಲ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಹಾಜಿ ಕೋಡಿ, ದ.ಕ. ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್‌ ಅಲಿ, ದಂತ ವೈದ್ಯೆ, ಬರಹಗಾರ್ತಿ ಡಾ. ಜುವೇರಿಯಾ ಮುಫೀದಾ, ಯುನೈಟೆಡ್‌ ಎಂಪವರ್ಮೆಂಟ್‌ ಅಸೋಸಿಯೇಶನ್ʼನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್‌ ಅಹ್ಮದ್‌, ಕಲ್ಲಡ್ಕ ಮುರಬೈಲ್‌ ಯೂನಿಯನ್‌ನ ಅಧ್ಯಕ್ಷ ಹಬೀಬ್‌ ಡೈಲಿ ಫ್ರೆಶ್‌, ಕಲ್ಲಡ್ಕ ಮ್ಯೂಸಿಯಂನ ಮುಹಮ್ಮದ್‌ ಯಾಸೀರ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಅಬ್ದುಲ್‌ ಲತೀಫ್‌ ನೇರಳಕಟ್ಟೆ, ಝಕರಿಯಾ ಕಲ್ಲಡ್ಕ, ಪಿ. ಮುಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮುಹಮ್ಮದ್‌ ಶರೀಫ್‌ ನಿರ್ಮುಂಜೆ, ಅಶ್ರಫ್‌ ಅಪೊಲೊ ಬ್ಯಾರಿ ಗೀತೆಗಳನ್ನು ಹಾಡಿದರು. ಅಕಾಡೆಮಿಯ ಸದಸ್ಯ ಅಬೂಬಕರ್‌ ಅನಿಲಕಟ್ಟೆ ಸ್ವಾಗತಿಸಿ, ಸದಸ್ಯೆ ಸಾರಾ ಅಲಿ ಪರ್ಲಡ್ಕ ಧನ್ಯವಾದವಿತ್ತರು. ಸದಸ್ಯ ಯು.ಹೆಚ್.‌ ಖಾಲಿದ್‌ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಬಿ.ಎಸ್.‌ ಮುಹಮ್ಮದ್‌, ಹಮೀದ್‌ ಹಸನ್‌ ಮಾಡೂರು, ಹಾಜಿ ಯು.ಕೆ. ಹಮೀದ್‌ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರುಪಾಯಿ ಕಳೆದುಕೊಂಡ ಮಹಿಳೆ ; ಪ್ರಕರಣ ದಾಖಲು

ಶಿವಮೊಗ್ಗ ನಗರದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್‌ ಟೈಮ್‌...

ರಾಷ್ಟ್ರ ರಾಜಕಾರಣದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಸ್ಥಾನ

ಹಾಸನ ಲೋಕಸಭಾ ಕ್ಷೇತ್ರದ ಯುವ ಸಂಸದ ಶ್ರೇಯಸ್ ಎಂ. ಪಟೇಲ್ ಅವರು...

Download Eedina App Android / iOS

X