ಹಿರೇಬಾಗೇವಾಡಿ ಗ್ರಾಮಸ್ಥರಿಗೆ ಮಲ್ಲಯ್ಯನ ಗುಡ್ಡದಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯ ಸಿದ್ಧನಬಾವಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, “ಈ ವರ್ಷ ಉತ್ತಮ ಮಳೆಯಾದ ಕಾರಣ ಕೆರೆ ಕಟ್ಟೆಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ₹19 ಕೋಟಿ ವೆಚ್ಚದಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲಾಗಿದೆ. ಹಿರೇಬಾಗೇವಾಡಿ ಹಾಗೂ ಸುತ್ತಮತ್ತಲಿನ ಗ್ರಾಮಗಳ ಬಹುದಿನಗಳ ಬೇಡಿಕೆಯಾಗಿದ್ದ ಸಿದ್ಧನಬಾವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ” ಎಂದರು.
“ಕೆರೆಗಳು ತುಂಬಿರುವುದರಿಂದ ಬೋರ್‌ವೆಲ್‌ಗಳ ಅಂತರ್ಜಲ ವೃದ್ಧಿಯಾಗಲಿದೆ. ಜನರಿಗೆ, ಜಾನುವಾರುಗಳಿಗೆ, ಸುತ್ತಮುತ್ತಲಿನ ರೈತರಿಗೆ ಸಹಾಯವಾಗಲಿದೆ. ಈ ಮೊದಲು ಕೆರೆ ತುಂಬಿಸುವ ಭರವಸೆ ನೀಡಿದ್ದೆ, ಇದೀಗ ನುಡಿದಂತೆ ಕೆರೆ ತುಂಬಿಸುವ ಕಾರ್ಯ ಮುಗಿದಿದೆ. ಹಿರೇಬಾಗೇವಾಡಿ ಗ್ರಾಮದ 80 ಎಕರೆ ಜಮೀನು ವಿಶ್ವವಿದ್ಯಾಲಯಕ್ಕೆ ಹೋಗಿದೆ. ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಹತ್ತಿರ ಮಾತನಾಡಿ, ಮಲ್ಲಯ್ಯನ ಗುಡ್ಡದಲ್ಲಿ ಗ್ರಾಮಸ್ಥರಿಗಾಗಿ 10 ಎಕರೆ ಭೂಮಿ ವಾಪಸ್ ಕೊಡಿಸಲಾಗುವುದು. ಜತೆಗೆ ಆ ಜಮೀನಿನಲ್ಲಿ ಮಲ್ಲಯ್ಯನ ದೇವಸ್ಥಾನ ನಿರ್ಮಿಸಲಾಗುವುದು” ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಉಸಿರಾಡುವ ಗಾಳಿಯನ್ನು ಖರೀದಿಸುವ ಕಾಲ ದೂರವಿಲ್ಲ : ನ್ಯಾ.ಸುನಿಲ್ ಹೊಸಮನಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪಾಟೀಲ, ಉಪಾಧ್ಯಕ್ಷೆ ಪುಷ್ಪ ನಾಯ್ಕರ್, ಸುರೇಶ ಇಟಗಿ, ಗೌಸಮೊದೀನ್ ಜಾಲಿಕೊಪ್ಪ, ಅನಿಲ್ ಪಾಟೀಲ, ಶ್ರೀಕಾಂತ ಮಾಧು ಭರಮಣ್ಣವರ, ಅಡಿವೇಶ ಇಟಗಿ, ಪಡಿಗೌಡ ಪಾಟೀಲ, ಶಿವು ಹಳೇಮನಿ, ಪ್ರಕಾಶ ಜಪ್ತಿ, ಖತಾಲ್ ಗೋವೆ, ಮಹಾಂತೇಶ ಹಂಚಿನಮನಿ, ನಿಂಗಪ್ಪ ತಳವಾರ, ಆನಂದ ಪಾಟೀಲ, ಅಡಿವೆಪ್ಪ ತೋಟಗಿ, ಆನಂದ ಪಾಟೀಲ, ರಘು ಪಾಟೀಲ, ಉಳವಪ್ಪ ಅಜ್ಜ, ಗಂಗಯ್ಯ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.