ಬೆಳಗಾವಿ-ಮನುಗೂರು ನಡುವೆ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಬೆಳಗಾವಿ ಮತ್ತು ಮನುಗೂರು ನಿಲ್ದಾಣಗಳ ನಡುವೆ ವಿಶೇಷ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07336 ಮನುಗೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 17, 2024 ರಿಂದ ಮಾರ್ಚ್ 31, 2025 ರವರೆಗೆ 95 ಟ್ರಿಕ್ಗಳನ್ನು ಚಲಿಸಲಿದೆ. ಈ ರೈಲು (07336) ಪ್ರತಿ ಸೋಮವಾರ, ಗುರುವಾರ, ಭಾನುವಾರ ಮತ್ತು ಬುಧವಾರ ಮನುಗೂರು ನಿಲ್ದಾಣದಿಂದ ಮಧ್ಯಾಹ್ನ 3:40 ಕ್ಕೆ ಹೊರಟು, ಮರುದಿನ ಸಂಜೆ 4:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸಾವು
ಈ ರೈಲು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲ, ದರೋಜಿ, ಬಳ್ಳಾರಿ, ಗುಂತಕಲ್, ಆದೋನಿ, ಕೋಸ್ಸಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ಚಿತ್ತಾಪುರ, ಮಳಖೇಡ ರೋಡ್, ಸೇಡಂ, ತಾಂಡೂರು, ವಿಕಾರಾಬಾದ್, ಲಿಂಗಂಪಲ್ಲಿ, ಬೇಗಂಪೇಟ್, ಸಿಕಂದರಾಬಾದ್, ಭೋಂಗೀರ್, ಜನಾಂವ್, ಕಾಜಿಪೇಟ್, ವಾರಂಗಲ್, ಕೇಸಮುದ್ರಂ, ಮಹಬೂಬಾಬಾದ್, ದೊರಣಕಲ್, ಗಾಂಧಿಪುರಂ ಹಾಲ್ಟ್, ಮತ್ತು ಭದ್ರಾಚಲಂ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ ಎಂದು ತಿಳಿದುಬಂದಿದೆ.