ಬೆಳಗಾವಿ | ಬಸವೇಶ್ವರ ಜಯಂತಿ ಮೆರವಣಿಗೆ: ಮೇ 26 ರಂದು ಬೆಳಗಾವಿಯಲ್ಲಿ ಸಂಚಾರ ಬದಲಾವಣೆ

Date:

ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಮೇ 26ರಂದು ಬೆಳಗಾವಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ.

- Advertisement -

ಮೆರವಣಿಗೆ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಹಾಗೂ ಕಾಲೇಜ್ ರಸ್ತೆ ಮೂಲಕ ಲಿಂಗರಾಜ್ ಕಾಲೇಜ್ ಮೈದಾನದವರೆಗೆ ಸಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಮೇ 26ರಂದು ಸಾಯಂಕಾಲ 4 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಕೆಲವು ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರವನ್ನು ತಿರುಗಿಸಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಖಾನಾಪೂರ ಕಡೆಗೆ ಸಾಗುವ ವಾಹನಗಳನ್ನು ಸಂಗೊಳ್ಳಿ ರಾಯಣ್ಣ ವೃತ್ತ, ಎಸ್‌.ಪಿ. ಆಫೀಸ್ ರಸ್ತೆ, ಕೃಷ್ಣದೇವರಾಯ ವೃತ್ತ, ವೈ-ಜಂಕ್ಷನ್‌, ಸದಾಶಿವ ನಗರ, ವಿಶ್ವೇಶ್ವರಯ್ಯ ನಗರ, ಗಾಂಧಿ ಸರ್ಕಲ್, ಶೌರ್ಯ ಚೌಕ, ಕೇಂದ್ರಿಯ ವಿದ್ಯಾಲಯ ನಂ.2 ಹಾಗೂ ಗ್ಲೋಬ್ ಥಿಯೇಟ‌ರ್ ಸರ್ಕಲ್ ಮಾರ್ಗವಾಗಿ ಖಾನಾಪೂರ ರಸ್ತೆಗೆ ದಾರಿ ಮರುನಿರ್ದೇಶಿಸಲಾಗಿದೆ.

ಇನ್ನೊಂದೆಡೆ, ಖಾನಾಪೂರ ಹಾಗೂ ಗೋಗಟೆ ಸರ್ಕಲ್‌ ಭಾಗದಿಂದ ನಗರ ಪ್ರವೇಶಿಸುವ ವಾಹನಗಳು ಗ್ಲೋಬ್ ಥಿಯೇಟ‌ರ್ ಸರ್ಕಲ್‌ನಲ್ಲಿ ತಿರುಗಿ, ಗವಳಿ ಗಲ್ಲಿ ಕ್ರಾಸ್, ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ, ಗಾಂಧಿ ಸರ್ಕಲ್‌, ಗಣೇಶ ಮಂದಿರ, ಹಿಂಡಲಗಾ ರಸ್ತೆ, ಹನುಮಾನ ನಗರ ಡಬಲ್ ರೋಡ್ ಮೂಲಕ ಬಾಕ್ಸಾಯಿಟ್ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸಬೇಕು.

ಮೆರವಣಿಗೆ ಮಾರ್ಗದಲ್ಲಿರುವ ಎರಡು ಕ್ಯಾರೇಜ್ ವೇ ರಸ್ತೆಗಳಲ್ಲೊಂದು ಭಾಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇರುವ ರಸ್ತೆಗಳನ್ನು ಸಂಪೂರ್ಣವಾಗಿ ಮೆರವಣಿಗೆಗೆ ಮೀಸಲಿಡಲಾಗುತ್ತದೆ.

ಮೇ 26ರಂದು ಸಾಯಂಕಾಲ 4 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಜೊತೆಗೆ, ರಾಣಿ ಚನ್ನಮ್ಮ ವೃತ್ತದಿಂದ ಕಾಲೇಜ್ ರಸ್ತೆವರೆಗೆ ಎಲ್ಲ ವಿಧದ ವಾಹನಗಳ ನಿಲುಗಡೆಯನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಾರ್ವಜನಿಕರು ಈ ಸಂಚಾರ ಬದಲಾವಣೆಗಳಿಗೆ ಸಹಕರಿಸಿ, ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಕುಡಿದ ಮತ್ತಿನಲ್ಲಿದ್ದ ಪತಿಯಿಂದ ಪತ್ನಿಯ ಕೊಲೆ

ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದ...

ಬೆಳಗಾವಿ | ಜಾತ್ರೆಯ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಶೇಲ್ಲೆವ್ವಾ ದೇವಸ್ಥಾನದ ಜಾತ್ರೆಯಲ್ಲಿ...

ಬೆಳಗಾವಿ | ಮಾಹಿತಿ ನೀಡದ ಗ್ರಾಮ ಪಂಚಾಯಿತಿ ಅಧಿಕಾರಿ ಎಂ.ಡಿ. ಬಡಿಗೇರಗೆ ₹30 ಸಾವಿರ ದಂಡ

ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿಯನ್ನು ನೀಡದ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ...

ಬೆಳಗಾವಿ | ಅ.26ರಂದು ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಜತೆ ಕಬ್ಬು ಬೆಳೆಗಾರರ ಸಭೆ

ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್‌ನಿಂದ ಆರಂಭವಾಗಿದ್ದ ಕಬ್ಬು ಬೆಳೆಗಾರರ ಪಾದಯಾತ್ರೆ ಧಾರವಾಡ...