ಬಳ್ಳಾರಿ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಶೈಲಜಾ ಸಮರ ದಂಪತಿ ಪುತ್ರ ವಿಕ್ಕಿ (3) ಮೃತ ಬಾಲಕ. ಮಂಗಳವಾರ ಬೆಳಗ್ಗೆ ಬಾಪುಜಿ ನಗರದಲ್ಲಿ ಕಸ ಸಂಗ್ರಹಿಸಲು ವಾಹನ ಬಂದಿತ್ತು. ಈ ವೇಳೆ, ರಸ್ತೆ ಬದಿ ಆಟ ಆಡುತ್ತಿದ್ದ ವಿಕ್ಕಿ ತಲೆ ಮೇಲೆ ವಾಹನ ಹರಿದಿದೆ. ಕೂಡಲೇ ಗಾಯಳು ಮಗುವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆ ಮುಟ್ಟುವುದರಲ್ಲೇ ಮಗು ಕೊನೆ ಉಸಿರೆಳೆದಿದೆ.
ಮಗುವಿನ ಮೇಲೆ ವಾಹನ ಹರಿಯುತ್ತಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಬಳಿಕ ಪೋಷಕರು, ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಲಕನ ನಿರ್ಲಕ್ಷ್ಯದಿಂದಲೇ ದುರ್ಘಟನೆ ಜರುಗಿದೆ ಎಂದು ದೂರಿದರು.
ವಿಷಯ ತಿಳಿದು ಶಾಸಕ ನಾರಾ ಭರತರೆಡ್ಡಿ, ಪಾಲಿಕೆ ಆಯುಕ್ತ ಖಲೀಲ್ ಸಾಬ್, ಮೇಯರ್ ಮುಲ್ಲಂಗಿ ನಂದೀಶ ವಿಮ್ಸ್‌ಗೆ ಆಸ್ಪತ್ರೆಗೆ ಭೇಟಿ ನೀಡಿದರು. ಶಾಸಕ ಭರತರೆಡ್ಡಿ ಅವರು ವೈಯಕ್ತಿಕವಾಗಿ 50 ಸಾವಿರ ನೆರವು ನೀಡಿದರು.
ಇದನ್ನೂ ಓದಿ : ಕೇಂದ್ರ ಸೇವೆಗೆ ಅರ್ಹತಾ ಪಟ್ಟಿಯಲ್ಲಿ ಪ್ರಣಬ್ ಮೊಹಂತಿ
ಈ ಸಂಬಂಧ ಬಳ್ಳಾರಿ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.