ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ಬಲವಂತದಿಂದ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ದುಷ್ಕೃತ್ಯ ಎಸಗಿದ ಮೂವರು ಆರೋಪಿಗಳ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕ ನವೀನ್ ಮತ್ತು ಆತನಿಗೆ ಈ ಕೃತ್ಯಕ್ಕೆ ಸಾಥ್ ನೀಡಿದ ರೇಣುಕಾ ಹಾಗೂ ವೆಂಕಟರಮಣ ಬಂಧಿತ ಆರೋಪಿಗಳು.
14 ವರ್ಷದ ಅಪ್ರಾಪ್ತೆಯನ್ನು ಆಕೆಯ ನೆರೆಮನೆಯ ರೇಣುಕಾ ಜುಲೈ 17ರ ರಾತ್ರಿ ದೇವಸ್ಥಾನಕ್ಕೆ ಕರೆದೊಯ್ದಿದ್ದಳು. ಮನೆಗೆ ಹಿಂತಿರುಗುವಾಗ ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾಳೆ. ಮದ್ಯದ ಮತ್ತಿನಲ್ಲಿದ್ದ ಬಾಲಕಿಯ ಮೇಲೆ ಆರೋಪಿ ನವೀನ್ ಮರುದಿನ ಮುಂಜಾನೆಯವರೆಗೂ ಹೆದರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.
ಬೆಳಗ್ಗೆ ಬಾಲಕಿಯನ್ನು ಮನೆಯ ಬಳಿ ಬಿಟ್ಟ ನವೀನ್, ಕೃತ್ಯದ ಕುರಿತು ಯಾರಲ್ಲೂ ಬಾಯಿಬಿಡದಂತೆ ಎಚ್ಚರಿಸಿ ಹೋಗಿದ್ದಾನೆ. ಅಪ್ರಾಪ್ತ ಬಾಲಕಿಯ ತಾಯಿ ಮಗಳನ್ನು ಪದೇ ಪದೇ ಪ್ರಶ್ನಿಸಿದ ನಂತರ ಘಟನೆ ಹೊರಬಂದಿದೆ.
ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.





