ಶಿವಮೊಗ್ಗ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸರಣಿಸಾವಾಗುತ್ತಿದ್ದು ಜನರಿಗೆ ಆತಂಕ ಎದುರಾಗಿದೆ.
ಈ ಮಧ್ಯೆ ಶಿವಮೊಗ್ಗದಲ್ಲಿ ಹೃದಯಾಘಾತಕ್ಕೆ 34 ವರ್ಷದ ಯುವಕ ಬಲಿಯಾಗಿದ್ದಾನೆ.ಭದ್ರಾವತಿ ತಾಲ್ಲೂಕಿನ ಮತ್ತಿಘಟ್ಟ ಗ್ರಾಮದ ದಿನೇಶ್ ಸಾವನ್ನಪ್ಪಿದ ಯುವಕ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಿನೇಶ್ ಗೆ ನಿನ್ನೆ ರಾತ್ರಿbಎದೆ ನೋವು ಕಾಣಿಸಿಕೊಂಡಿದ್ದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಾಗಲೇ ದಿನೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತ ದಿನೇಶ್ ಮದುವೆಯಾಗಿದ್ದು, 3-4 ವರ್ಷದ ಪುಟ್ಟ ಮಕ್ಕಳಿದ್ದಾರೆ.