ಭಟ್ಕಳ | ರಾಜ್ಯ ಸರ್ಕಾರದಿಂದ ‘ಭಟ್ಕಳ ನಗರಸಭೆ’ ಅಂತಿಮ ಅಧಿಸೂಚನೆ: 22.67 ಚ.ಕಿ.ಮೀ ಪ್ರದೇಶ ನಗರಸಭೆ ವ್ಯಾಪ್ತಿಗೆ

Date:

ಭಟ್ಕಳ: ರಾಜ್ಯ ಸರ್ಕಾರವು ಭಟ್ಕಳವನ್ನು ಅಧಿಕೃತವಾಗಿ ಪುರುಸಭೆಯಿಂದ ‘ನಗರಸಭೆ’ ದರ್ಜೆಗೆ ಮೇಲ್ದರ್ಜೆಗೇರಿಸಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. ಹೊಸ ನಗರಸಭೆ ವ್ಯಾಪ್ತಿಯಲ್ಲಿ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಗ್ರಾಮ ಪಂಚಾಯಿತಿ ಸೇರಿ ಒಟ್ಟು 22.67 ಚದರ ಕಿಲೋಮೀಟರ್ ಪ್ರದೇಶ ನಿಗದಿಯಾಗಿದೆ.

- Advertisement -

ನಗರಸಭೆ ರಚನೆ ಪ್ರಕ್ರಿಯೆಯಲ್ಲಿ, “ಮುಸ್ಲಿಂ ಬಾಹುಳ್ಯ ಪ್ರದೇಶಗಳನ್ನು ಮಾತ್ರ ಸೇರಿಸಲಾಗಿದೆ” ಎಂಬ ಆಪಾದನೆಗಳನ್ನು ಮಾಡುತ್ತಿದ್ದ ಬಿಜೆಪಿ ಸ್ಥಳೀಯ ಮುಖಂಡರು, ಆಗಸ್ಟ್ 25ರಂದು ಪ್ರಕಟವಾದ ಕರಡು ಅಧಿಸೂಚನೆಗೆ ಯಾವುದೇ ಅಧಿಕೃತ ಆಕ್ಷೇಪಣೆ ಸಲ್ಲಿಸದೇ ಇರುವುದೇ ಇದೀಗ ಬಹಿರಂಗವಾಗಿದೆ. ಒಂದು ತಿಂಗಳ ಕಾಲ ಅವಕಾಶ ನೀಡಿದ್ದರೂ ಯಾವುದೇ ಆಕ್ಷೇಪಣೆ ದಾಖಲಾಗದ ಕಾರಣ, ಕರಡು ಅಧಿಸೂಚನೆಯಲ್ಲಿದ್ದದ್ದೇ ಗಡಿಯನ್ನು ಅಂತಿಮಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

2015ರಿಂದಲೇ ಭಟ್ಕಳವನ್ನು ನಗರಸಭೆ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. 2025ರ ಜನವರಿ 12ರಂದು ನಗರಾಭಿವೃದ್ಧಿ ಸಚಿವರಿಗೆ ಬರೆದ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು, “2011ರ ಜನಗಣತಿ ಪ್ರಕಾರ ಭಟ್ಕಳದಲ್ಲಿ 32 ಸಾವಿರ, ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಸಾವಿರ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 19 ಸಾವಿರ ಜನಸಂಖ್ಯೆ ಇತ್ತು. ಈಗ ಈ ಮೂರು ಪ್ರದೇಶಗಳು ಸೇರಿ 75 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಆಗಲಿದ್ದು, ಭಟ್ಕಳದಲ್ಲಿ ನಗರಸಭೆ ರಚನೆ ಅಗತ್ಯ” ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.

ಭಟ್ಕಳ ನಗರಸಭೆ ರಚನೆಗೆ ನಮ್ಮ ಕಡೆಯಿಂದ ಯಾವುದೇ ವಿರೋಧ ಇಲ್ಲ, ಭಟ್ಕಳ ಪುರಸಭೆ ಗಡಿಗೆ ಹೊಂದಿಕೊಂಡಿರುವ ಶಿರಾಲಿ, ಯಲ್ಪಡಿಕವೂರು, ಮಾವಿನಕುರ್ವಾ, ಮುಟ್ಟಳ್ಳಿ, ಮುಂಡಳ್ಳಿ ಪ್ರದೇಶಗಳನ್ನೂ ಭಟ್ಟಕಳಕ್ಕೆ ಸೇರಿಸಿ ನಗರಸಭೆಯನ್ನಾಗಿಸಿ ಎಂದು ಬಿಜೆಪಿ ಮುಖಂಡರು ಆಗಾಗ ಹೇಳುತ್ತಿದ್ದರು. ಆದರೆ, ಕರಡು ಅಧಿಸೂಚನೆಯ ಸಂದರ್ಭದಲ್ಲಿ ಈ ವಿಷಯವಾಗಿ ಸ್ಥಳೀಯ ಬಿಜೆಪಿ ಮುಖಂಡರು ಯಾವುದೇ ರೀತಿಯ ಅಧಿಕೃತ ಆಕ್ಷೇಪಣೆ ಸಲ್ಲಿಸದಿರುವುದು ಗಮನಾರ್ಹವಾಗಿದೆ.

ಈ ಸುದ್ದಿ ಓದಿದ್ದೀರಾ? ಮುಂಡಗೋಡ | ʼನಮ್ಮದೇ ಜಮೀನಿಗೆ ಕಾಲಿಟ್ಟರೆ ಕಳ್ಳತನದ ಕೇಸ್ ಹಾಕ್ತಾರೆʼ: ದಲಿತ ಮಹಿಳೆಯರ ಆರೋಪ

ನಗರಸಭೆಯ ಗಡಿ ವಿವರ: ಅಂತಿಮ ಅಧಿಸೂಚನೆಯ ಪ್ರಕಾರ, ಗಡಿ ಜಾಲಿ ಗ್ರಾಮದ ಸರ್ವೆ ನಂ. 251ರ ವಾಯುವ್ಯ ತುದಿಯಿಂದ ಆರಂಭವಾಗಿ,ವೆಂಕಾಪುರಹೊಳೆ ಭಾಗ → ಸೂಸಗಡಿ ಗ್ರಾಮ → ಪಟ್ಟದ ಹೊಳೆ → ಪುರವರ್ಗ–ಸೊಸಗಡಿ ಗಡಿಯ ಸಂಗಮ → ಸರಾಬಿಹೂಳೆ ಹೊಳೆಯ ಬಲದಂಡ → ಭಟ್ಕಳ–ಗೊರಟೆ ಸಂಪರ್ಕ ರಸ್ತೆ → ಪುರವರ್ಗ ಗ್ರಾಮದ ಭಾಗ → ಮುಂಡಳ್ಳಿಗಿಂದ ಬರುವ ರಸ್ತೆ → ಚೌಥನಿ ಗ್ರಾಮದ ಗಡಿ → ಸರಾಬಿ ಹೊಳೆಯ ಎಡದಂಡ → ಮತ್ತೆ ಸೂಸಗಡಿ ಗ್ರಾಮದ ಭಾಗ → ಅಂತಿಮವಾಗಿ ಜಾಲಿ ಗ್ರಾಮದ ಗಡಿಯನ್ನು ಸೇರಿಕೊಳ್ಳುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...