ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಬೆಳೆದಿರುವ ಎಪ್‌ಎಕ್ಯೂ ಗುಣಮಟ್ಟದ ಹೆಸರು ಮತ್ತು ಉದ್ದಿನ ಕಾಳು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಜಿಲ್ಲೆಯಲ್ಲಿ 30 ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿ ಕ್ವಿಂಟಾಲ್ ಹೆಸರು ₹ 8,768 ಹಾಗೂ ಉದ್ದು ₹ 7,800 ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಹಾಯಕ ನಿರ್ದೇಶಕರು, ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಖರೀದಿ ಕೇಂದ್ರ :
ಬೀದರ :ಬಗದಲ್, ಜನವಾಡ, ಮಾಳೆಗಾಂವ್, ಮುನ್ನಳ್ಳಿ, ಅಣದೂರ, ಕಮಠಾಣಾ ಭಾಲ್ಕಿ: ಲಖನಗಾಂವ್, ಹಲಬರ್ಗಾ (ಸಹಯೋಗ ಸುವಿಧಾ ಉತ್ಪಾದಕರ ಕಂ.ಲಿ.), ಖಟಕಚಿಂಚೋಳಿ, ಕುರುಬಖೇಳಗಿ, ಸಾಯಿಗಾಂವ್, ಭಾತಂಬ್ರಾ ಹುಮನಾಬಾದ:ನಿರ್ಣಾ, ದುಬಲಗುಂಡಿ, ಚಿಟಗುಪ್ಪಾ, ಘಾಟಬೋರಾಳ್, ಹಳ್ಳಿಖೇಡ (ಬಿ), ಬೇಮಳಖೇಡ ಬಸವಕಲ್ಯಾಣ : ಮುಡಬಿ, ಕೋಹಿನೂರ್, ಮಂಠಾಳ, ರಾಜೇಶ್ವರ, ಹುಲಸೂರ್, ಮುಚಳಂಬ ಔರಾದ (ಬಾ) : ಔರಾದ (ಬಾ), ಚಿಂತಾಕಿ, ಸಂತಪೂರ, ಠಾಣಾಕುಶನೂರ, ಮುಧೋಳ (ಬಿ) ಹಾಗೂ ಕಮಲನಗರ
ರಾಜ್ಯ ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೊಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ಖರೀದಿ ಪ್ರಕ್ರಿಯೆಯಲ್ಲಿ ರೈತರು ಪ್ರತಿ ಎಕರೆಗೆ ಗರಿಷ್ಠ ಹೆಸರು -15 ಮತ್ತು ಉದ್ದು-30 ಕ್ವಿಂಟಲ್‍ನಂತೆ ಎಪ್‌ಎಕ್ಯೂ ಗುಣಮಟ್ಟದ ಹೆಸರು ಮತ್ತು ಉದ್ದಿನ ಕಾಳು ಮಾರಾಟ ಮಾಡಬಹುದಾಗಿದೆ.
ಖರೀದಿ ಕೇಂದ್ರಗಳು ಲಾಗ್‍ಇನ್ ಕ್ರೆಡೆನ್ಸಿಯಲ್ಸ್‍ಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ನೋಂದಣಿ ಮಾಡಿಕೊಳ್ಳಲು ಇಚ್ಚಿಸುವ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ನೋಂದಣೀ ಮಾಡಿಸಿಕೊಂಡು ಹೆಸರು, ಉದ್ದಿನ ಕಾಳು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ಸದರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮುಖ್ಯಮಂತ್ರಿ, ಕೃಷಿ ಸಚಿವರು ಖುದ್ದಾಗಿ ಅತಿವೃಷ್ಟಿ ಹಾನಿ ಪರಿಶೀಲಿಸಲಿ : ಶಾಸಕ ಶರಣು ಸಲಗರ
2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ 38,000MT ಹೆಸರು ಕಾಳು, 60,810MT ಉದ್ದು, 15,650 MT ಸೂರ್ಯಕಾಂತಿ, 61,148 MT ಕಡಲೆಬೀಜ ಮತ್ತು 1,15,000 ಸೋಯಾಬಿನ್ ಬೆಳೆಯನ್ನು ಖರೀದಿಸಲು ಕೇಂದ್ರ ಸರ್ಕಾರದ ಕೃಷಿ ಇಲಾಖೆ ಅನುಮತಿ ನೀಡಿದೆ.