ಬೀದರ್‌ | ಬಹುಜನ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ

Date:

Advertisements

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕೆಂಬ ಮಹತ್ವದ ಉದ್ದೇಶದಿಂದ ಬಹುಜನ ಜನಸಂಪರ್ಕ ಕಾರ್ಯಾಲಯ ತೆರೆದಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ್‌ ಅರಳಿ ಹೇಳಿದರು.

ಔರಾದ್ ಪಟ್ಟಣದಲ್ಲಿ ಶುಕ್ರವಾರ ಬಹುಜನ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ʼಸಮಾಜದಲ್ಲಿ ಬಡವರು, ದಲಿತರು, ಕಾರ್ಮಿಕರು, ಶೋಷಿತರು ಅನೇಕ ಸಮಸ್ಯೆಗಳು ಅನುಭವಿಸುತ್ತ ನಿತ್ಯ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಅಂತಹ ಜನರನ್ನು ಗುರುತಿಸಿ ನ್ಯಾಯ ಸಿಗುವಂತೆ ಮಾಡಬೇಕಿದೆ. ಇಂದಿನ ಯುವಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಬಹುಜನ ಜನಸಂಪರ್ಕ ಕೇಂದ್ರದ ಪದಾಧಿಕಾರಿಗಳು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಪಕ್ಷಾತೀತವಾಗಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ದೀರ್ಘಕಾಲ ಉಳಿಯುತ್ತದೆʼ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ದಸ್ತಗಿರ ಮುಲ್ಲಾ ವಿಜಯಪುರ ಅವರು ಮಾತನಾಡಿ, ʼ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಬರೆದ ಶ್ರೇಷ್ಠ ಸಂವಿಧಾನ ತಿರುಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಇದರ ಬಗ್ಗೆ ಎಚ್ಚೆತ್ತುಕೊಂಡು ಸಂವಿಧಾನ ಜಾಗೃತಿ ನಡೆಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರಿ ಅಪಾಯ ಎದುರಿಸಬೇಕಾಗುತ್ತದೆʼ ಎಂದರು.

Advertisements
WhatsApp Image 2025 10 05 at 8.00.16 AM
ಬಹುಜನ ಜನಸಂಪರ್ಕ ಕಾರ್ಯಾಲಯದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ʼಸ್ವಾಭಿಮಾನ ಹೋರಾಟದಿಂದ ಮಾತ್ರ ಸಾಮಾಜಿಕ ಸಮಸ್ಯೆಗಳು ಬದಲಿಸಲು ಸಾಧ್ಯವಿದೆ. ಕೆಲವರು ಸಂವಿಧಾನ ತಿರುಚುವ ಹುನ್ನಾರ ನಡೆಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ, ಆದರೆ ಅದು ಎಂದಿಗೂ ಅಸಾಧ್ಯವಾದದ್ದು. ಅಲ್ಪಸಂಖ್ಯಾತರ, ದಲಿತರ ಮೇಲೆ ನಿರಂತರ ದೌರ್ಜನ್ಯ, ಮಹಾತ್ಮರನ್ನು ಅನುಮಾನಿಸುವಂತಹ ಸಂವಿಧಾನ ವಿರೋಧಿ ಕೃತ್ಯಗಳ ವಿರುದ್ಧ ನಾವೆಲ್ಲರೂ ಧ್ವನಿಯೆತ್ತುವ ಮುಖಾಂತರ ಅವರನ್ನು ತಕ್ಕ ಪಾಠ ಕಲಿಸಬೇಕಾಗಿದೆʼ ಎಂದು ಕರೆ ನೀಡಿದರು.

ಚಿಂತಕ ಸೈಯದ್‌ ಮುಜೀಬ್‌ ಮಾತನಾಡಿ, ʼಕೆಲವರಿಗೆ ಈ ದೇಶದ ಸಂವಿಧಾನ ಮಗ್ಗಲು ಮುಳ್ಳಾಗಿದೆ. ಅದಕ್ಕಾಗಿಯೇ ಪದೇ ಪದೇ ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಾರೆ. ಮನುಷ್ಯ, ಮನುಷ್ಯರ ನಡುವೆ ಕಂದಕವೇರ್ಪಡಿಸುವ ಕೆಲಸವನ್ನು ನಿರಂತರ ನಡೆಯುತ್ತಿದೆ. ಇದರ ವಿರುದ್ಧ ಶೋಷಿತರು ಒಂದಾಗಿ ನಿಂತು ಸಂವಿಧಾನದ ಉಳಿವಿಗಾಗಿ ಚಳವಳಿ ರೂಪಿಸಬೇಕಿದೆʼ ಎಂದರು.

ಹೋರಾಟಗಾರ ರಾಹುಲ್ ಖಂದಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಔರಾದ್ ಮೀಸಲು ಕ್ಷೇತ್ರವಾದರೂ ಇಲ್ಲಿಯ ಬಹುಜನರು ಮೂಲ ಸೌಲಭ್ಯಕ್ಕಾಗಿ ನಿತ್ಯ ಹೋರಾಡಬೇಕಾದ ಪರಿಸ್ಥಿತಿ ಇದೆ. ಜನರಲ್ಲಿ ಸಂವಿಧಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಬಹುಜನ ಜನಸಂಪರ್ಕ ಕಚೇರಿ ಮಾಡಲಿದೆʼ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಔರಾದ್ ತಹಸೀಲ್ದಾರ್‌ ಕಚೇರಿ ಎದುರಗಡೆ‌ ಬಹುಜನ ಸಂಪರ್ಕ ಕಾರ್ಯಾಲಯವನ್ನು ಹಿರಿಯ ಮುಖಂಡ ವಿಜಯಕುಮಾರ್‌ ಕೌಡಾಳ, ನ್ಯಾಯವಾದಿ ಸೂರ್ಯಕಾಂತ ನಿಂಬಾಳಕರ್‌, ಸೋಪನರಾವ್‌ ಡೊಂಗರೆ ಮತ್ತಿತರರು ಚಾಲನೆ ನೀಡಿದರು.

WhatsApp Image 2025 10 05 at 8.00.39 AM
ಔರಾದ್‌ ತಹಸೀಲ್ದಾರ್‌ ಕಚೇರಿ ಎದುರುಗಡೆ ತೆರೆದಿರುವ ಬಹುಜನ ಜನಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಪ್ರಾಂಶುಪಾಲ ಮನ್ಮಥ್‌ ಡೋಳೆ, ಮುಖಂಡ ಶಿವಮೂರ್ತಿ ಸುಬಾನೆ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ, ಬೀದರ್ ನಗರಸಭೆ ಸದಸ್ಯ ಸೂರ್ಯಕಾಂತ ಸಾದುರೆ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬ್ರೀಶ್ ಕುದುರೆ, ರಾಜಕುಮಾರ ಸಿಂಧೆ ಪ್ರಮುಖರಾದ ಫಿರ್ದೋಸ್‌ ಪಟೇಲ್, ಗಣಪತರಾವ ವಾಸುದೇವ, ಸುಭಾಷ ಲಾಧಾ, ಸಚಿನ ಗಿರಿ, ಪ್ರವೀಣ ಕಾರಂಜೆ, ಯಶವಂತ ಕಾಂಬಳೆ, ಸಿದ್ಧಾರ್ಥ ಭೋಸ್ಲೆ, ಸುಂದರ ಮೇತ್ರೆ, ಅನೀಲ ಭುಜಂಗೆ, ಅಖಿಲೇಶ ಸಾಗರ್‌, ಸಂತೋಷ ಸಿಂಧೆ, ಉತ್ತಮ ಗಾಯಕವಾಡ, ಪಂಡರಿ ಕಸ್ತೂರೆ, ಸಿದ್ದಾರ್ಥ ಕಾಂಬಳೆ, ಸುಂದರ ಮೇತ್ರೆ, ಪ್ರಕಾಶ ಅಲ್ಲಾಪುರೆ, ಬಸವರಾಜ ಕಾಂಬಳೆ, ತುಕಾರಾಮ ಹಸನ್ಮುಖಿ, ನವನಾಥ ಮಸೂರೆ, ನಜೀರ್‌ ಮೇಸ್ತ್ರಿ, ದಿನೇಶ ಸಿಂಧೆ ಸೇರಿದಂತೆ ವಿವಿಧ ಸಂಘಟನೆ, ಸಾಮಾಜಿಕ ಚಿಂತಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X