ಬೀದರ್‌ | ನಿರಂತರ ಅಧ್ಯಯನದಿಂದ ಶಿಕ್ಷಕ ವೃತ್ತಿ ಯಶಸ್ವಿ : ಕಿರಣ ಗಾಜನೂರು

Date:

ಓದು, ಬೋಧನೆ ಮತ್ತು ಸಂಶೋಧನೆಯಲ್ಲಿ ನಿರಂತರತೆ ಇದ್ದರೆ ಯಶಸ್ವಿ ಶಿಕ್ಷಕನಾಗಲು ಸಾಧ್ಯ. ಪರಿಣಾಮಕಾರಿ ಶಿಕ್ಷಕನಾಗಲು ವೈಯಕ್ತಿಕ ಬದುಕಿಗಿರುವಷ್ಟೇ ಕಾಳಜಿ ವೃತ್ತಿ ಬದುಕಿಗಿದ್ದರೆ ಸಾಧ್ಯ ಎಂದು ಸಿಯುಕೆ ಪ್ರಾಧ್ಯಾಪಕ ಹಾಗೂ ಕರ್ನಾಟಕ ಪಠ್ಯಕ್ರಮ ರಚನಾ ಸಮಿತಿ ಸದಸ್ಯ ಡಾ.ಕಿರಣ ಗಾಜನೂರು ಹೇಳಿದರು.

- Advertisement -

ಬಸವಕಲ್ಯಾಣದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼಸ್ವಾತಂತ್ರ್ಯ ಮೂಲಭೂತ ಹಕ್ಕು ಮಗುವಿಗೆ ನಡಾವಳಿಕೆಯಲ್ಲಿ, ತರಗತಿಯಲ್ಲಿ, ವಿದ್ಯಾರ್ಥಿಗಳ ಜೊತೆಗಿನ ಸಂವಾದಗಳಲ್ಲಿ ಸ್ವಾತಂತ್ರ್ಯ ಅನುಭವಿಸಬೇಕಾದ ಅಗತ್ಯವಿದೆ. ಅಧ್ಯಾಪಕನಾದವನು ಸೌಮ್ಯ ನಿರಂಕುಶವಾದಿ ಆಗುವುದು ಸ್ವಾತಂತ್ರ್ಯಕ್ಕೆ ಅಪಾಯಕಾರಿʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ʼಕಲಿಕೆಯು ಯಾವುದೇ ವಿದ್ಯಮಾನವನ್ನು ಅರ್ಥೈಸುವ ಕಲೆಯಾಗಿದೆ. ದೇಶವನ್ನು ಬದಲಾಯಿಸುವುದಕ್ಕೆ ಸಾಧ್ಯವಾಗಲು ಶಿಕ್ಷಕರಿಂದ ಸಾಧ್ಯ. ನಮ್ಮ ಅಧ್ಯಾಪಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಹೊಸ ರೀತಿಯಲ್ಲಿ ಮಾತನಾಡಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ತಾಂತ್ರಿಕತೆ ಎಷ್ಟೇ ಮುಂದುವರೆದರೂ ನಾವು ಪಡೆದ ತಾಂತ್ರಿಕತೆಯ ಸದ್ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬ ಅರಿವು ಮೂಡಿಸಲು ಶಿಕ್ಷಕರ ಅಗತ್ಯವಿದೆ. ಎಐ ಹಾಗೂ ಆಧುನಿಕ ತಂತ್ರಜ್ಞಾನವನ್ನು ಎದುರಿಸುವ ಸವಾಲು ಎಂಥದ್ದು ಎಂಬುದನ್ನು ವಿವೇಚಿಸಬೇಕಾದ ಅಗತ್ಯ ಇಂದಿನ ಅಧ್ಯಾಪಕರ ಮೇಲಿದೆʼ ಎಂದು ತಿಳಿಸಿದರು.

ʼಪ್ರಶ್ನಿಸುವ, ವೈಜ್ಞಾನಿಕ ಮನೋಭಾವ ಬೆಳೆಸುವ, ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸುವ ಉದ್ದೇಶ ಶಿಕ್ಷಣದ್ದಾಗಿದೆ. ಸ್ವಾತಂತ್ರ್ಯ ಅನುಭವಿಸುವ ವಾತಾವರಣ ತರಗತಿಯಿಂದಲೇ ಸಾಧ್ಯವಾಗಬೇಕು. ಪ್ರಜಾಸತ್ತಾತ್ಮಕ ವಿವೇಚನೆ, ಚಿಂತನೆಗಳು ಸೃಷ್ಟಿಸುವ ಕೆಲಸ ಅಧ್ಯಾಪಕರಿಂದ ಸಾಧ್ಯವಾಗಬೇಕು. ಅಧ್ಯಾಪಕ ಭ್ರಷ್ಟನಾದರೆ ಇಡೀ ಸಮಾಜ ಜಡಗಟ್ಟುತ್ತದೆ. ನಿರಂತರ ಚಲನಶೀಲವಾಗಿಡುವ ಕೆಲಸ ಶಿಕ್ಷಣದ್ದಾಗಿದೆʼ ಎಂದು ಹೇಳಿದರು.

WhatsApp Image 2025 09 08 at 6.09.24 PM

ʼಭಾರತದಲ್ಲಿ ಆಧ್ಯಾತ್ಮಿಕತೆ ಶಿಕ್ಷಣದ ಮೂಲಭೂತ ತಳಹದಿಯಾಗಿದೆ. ವರ್ತಮಾನಕ್ಕೆ ಮತ್ತು ಭವಿಷ್ಯತ್ತಿಗೆ ಅರಿವನ್ನು ಸೃಷ್ಟಿಸುವ ಕೆಲಸ ಶಿಕ್ಷಕನದು. ಅರಿವಿನ ಕ್ರಾಂತಿ ಮಾಡಬೇಕಾದ ವಿದ್ಯಾ ಸಂಸ್ಥೆಗಳು ನೌಕರಿ ಸೃಷ್ಟಿಸುತ್ತಿವೆ. ಅದಕ್ಕಾಗಿ ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ತೊಡಗಿವೆ. ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ಅರಿವು ಮೂಡಿಸುವ ಬಹುದೊಡ್ಡ ಜವಾಬ್ದಾರಿ ಅಧ್ಯಾಪಕರದ್ದಾಗಿದೆʼ ಎಂದು ವಿಶ್ಲೇಷಿದರು.

ಕಲಬುರ್ಗಿಯ ವಿಭಾಗೀಯ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ʼವ್ಯಕ್ತಿ, ಸಮಾಜ ಮತ್ತು ಸಮುದಾಯಗಳನ್ನು ಕಟ್ಟುವ ಕೆಲಸ ಶಿಕ್ಷಣದಿಂದ ಮಾತ್ರ ಸಾಧ್ಯ. ಗುರು ಮುಟ್ಟಿ ಗುರುವಾಗು , ಜ್ಯೋತಿ ಮುಟ್ಟಿ ಜ್ಯೋತಿಯಾಗು ಎಂಬ ಹೊಸ ಭಾಷೆ ನೀಡಿದ್ದು ಕಲ್ಯಾಣದ ಶರಣರ ಚಳುವಳಿ. ಪ್ರಸ್ತುತ ಭಾರತೀಯ ಸಮಾಜ ವೈಯಕ್ತಿಕ ಅಸ್ಮಿತೆಯ ಹುಡುಕಾಟದಲ್ಲಿ ಕಳೆದುಹೋಗುತ್ತಿರುವುದು ಈ ಕಾಲದ ದುರಂತʼ ಎಂದರು.

ʼನಿರಂಕುಶ ಮತಿತ್ವ ಮತ್ತು ಸಮ ಸಮಾಜದ ಪರಿಕಲ್ಪನೆ ವಿಸ್ತರಿಸಿದ್ದು ವಚನಕಾರರು. ಬುದ್ಧನ, ಶರಣರ, ತತ್ವಪದಕಾರರ, ಸೂಫಿಗಳ ತಾತ್ವಿಕ ಚಿಂತನೆಗಳು ಶಿಕ್ಷಣದ ನಾಡಿಮಿಡಿತವಾಗಿಸಿ, ಸಮಾಜಕ್ಕೆ ಸರಿಯಾಗಿ ದಿಗ್ದರ್ಶಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು. ಹೊಸ ಸಮಾಜ, ಜ್ಞಾನ ಪರಂಪರೆಗಳ, ಹೊಸ ಲೋಕವನ್ನು ಸೃಷ್ಟಿಸುವ ಹೊಣೆ ಅಧ್ಯಾಪಕರದ್ದಾಗಿದೆʼ ಎಂದರು.

ವಿಶ್ವಸ್ಥ ಸಮಿತಿ ಸದಸ್ಯ ಸೋಮಶೇಖರಯ್ಯ ವಸ್ತ್ರದ ಮಾತನಾಡಿ, ʼಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ತುಂಬುವ ಶಕ್ತಿ. ಸಹಬಾಳ್ವೆ, ಸಹನೆ, ಸಹಿಷ್ಣುತೆ, ಸೋದರತೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು . ಸಮಾಜದ ಏಳಿಗೆಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಶ್ರಮ ದೊಡ್ಡದುʼ ಎಂದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಮಲ್ಲಯ್ಯ ಸ್ವಾಮಿ ಹಿರೇಮಠ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಭಾವಿ, ಶ್ರೀಕಾಂತ ಬಡದಾಳೆ, ಜಗನ್ನಾಥ ಖೂಬಾ, ಅನಿಲಕುಮಾರ ರಗಟೆ , ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ. ಎಸ್. ಭುರಾಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶಟ್ಟೆ, ಮಲ್ಲಿಕಾರ್ಜುನ ಮಂಠಾಳೆ, ಪ್ರಮುಖರಾದ ಡಾ. ಮಲ್ಲಿಕಾರ್ಜುನ ಲಕಶೆಟ್ಟೆ, ಶರಣಪ್ಪ ದುರ್ಗೆ, ಅಶೋಕ ಸ್ವಾಮಿ ಇದ್ದರು.

ಇದನ್ನೂ ಓದಿ : ಬೀದರ್‌ | ₹25 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣ : ಸಚಿವ ಈಶ್ವರ ಖಂಡ್ರೆ

ಡಾ. ಬಸವರಾಜ ಖಂಡಾಳೆ , ಸಂಗೀತಾ ಮಹಾಗಾವೆ ನಿರೂಪಿಸಿದರು. ಡಾ. ಭೀಮಾಶಂಕರ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರುದ್ರಮಣಿ ಮಠಪತಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೃಷಿ ಮೇಳದಿಂದ ರೈತರ ಬದುಕಿಗೆ ಆತ್ಮಸ್ಥೈರ್ಯ ತುಂಬಲಿ: ಕೋಟ ಶ್ರೀನಿವಾಸ ಪೂಜಾರಿ

ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು...

ಉಡುಪಿ | ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ : ಯಶ್ ಪಾಲ್ ಸುವರ್ಣ

ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಿದಾಗ ಮಾತ್ರ ಸರಕಾರದ...

ಧಾರವಾಡ | ಪಶ್ಚಿಮ ಪದವೀಧರರ ಚುನಾವಣೆ; ಬ್ಯಾಲೆಟ್ ಪೇಪರ್ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್. ಆರ್

"ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಚುನಾವಣಾ ಆಯೋಗದ...

ಕೋಲಾರ | ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ಕ್ರಮ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ ಬ್ಯಾಂಕ್)...