ಬೀದರ್‌ | ವರ್ಷಕ್ಕೆ 8 ತಿಂಗಳು ಬೋಧನೆಗೆ ಅವಕಾಶ ಕಲ್ಪಿಸಲು ಪದವಿ ಕಾಲೇಜು ಉಪನ್ಯಾಸಕರ ಆಗ್ರಹ

Date:

Advertisements

ಬಸವಕಲ್ಯಾಣ ತಾಲ್ಲೂಕಿನ ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರತಿ ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಪಠ್ಯ ಬೋಧನೆಗೆ ಅವಕಾಶ ನೀಡತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಬಸವಕಲ್ಯಾಣ ತಾಲೂಕು ಖಾಸಗಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ದೂರಿದ್ದಾರೆ.

ಈ ಸಂಬಂಧ ಸಂಘದ ಪದಾಧಿಕಾರಿಗಳು ಗುರುವಾರ ಬೀದರ್‌ ವಿಶ್ವವಿದ್ಯಾಲಯ ಕುಲಪತಿ ಬಿ.ಎಸ್.ಬಿರಾದರ್‌, ಮೌಲ್ಯಮಾಪನ ಕುಲಸಚಿವ ಪರಮೇಶ್ವರ ನಾಯಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ʼಬಸವಕಲ್ಯಾಣ ತಾಲ್ಲೂಕಿನ ಖಾಸಗಿ ಪದವಿ ಕಾಲೇಜುಗಳಲ್ಲಿ ಸುಮಾರು 150 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ಕಾಲೇಜಿನ ಪ್ರತಿ ಸೆಮಿಸ್ಟರ್‌ಗೆ ನಾಲ್ಕು ತಿಂಗಳು ಬೋಧನೆ ಮಾಡಬೇಕು. ಆದರೆ, ಪ್ರತಿ ಸೆಮಿಸ್ಟರ್‌ಗೆ ಎರಡು ತಿಂಗಳು ಮಾತ್ರ ಉಪನ್ಯಾಸಕರನ್ನು ನೇಮಿಸಿಕೊಂಡು ಬೋಧಿಸುತ್ತಿದ್ದು, ಇದರಿಂದ ಉಪನ್ಯಾಸಕರು ಉಳಿದ ಎರಡು ತಿಂಗಳು ಕೆಲಸ ಇಲ್ಲದೆ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆʼ ಎಂದು ಹೇಳಿದರು.

ʼಪ್ರತಿ ವರ್ಷ ಒಂದು ಸೆಮಿಸ್ಟರ್‌ಗೆ ನಾಲ್ಕು ತಿಂಗಳು ಬೋಧನೆಗೆ ಅವಕಾಶ ನೀಡಬೇಕು. ಆದರೆ, ಇಲ್ಲಿನ ಕಾಲೇಜುಗಳಲ್ಲಿ ಎರಡು ತಿಂಗಳಲ್ಲೇ ಒಂದು ಸೆಮಿಸ್ಟರ್‌ ಪಠ್ಯ ಬೋಧನೆಗೆ ನೇಮಿಸಿಕೊಂಡು ಉಳಿದ ಎರಡು ತಿಂಗಳು ಕೆಲಸದಿಂದ ತೆಗೆಯುತ್ತಿದ್ದಾರೆ. ಇದರಿಂದ ವೃತ್ತಿಯನ್ನೇ ನಂಬಿದ ಉಪನ್ಯಾಸಕರು ಆರ್ಥಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಎರಡು ತಿಂಗಳಲ್ಲಿ ಪಠ್ಯಕ್ರಮ ಪೂರ್ಣಗೊಳ್ಳದ ಹಿನ್ನೆಲೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆʼ ಎಂದು ಹೇಳಿದರು.

ಉಪನ್ಯಾಸಕರಿಗೆ ವರ್ಷಕ್ಕೆ ಎಂಟು ತಿಂಗಳು ಬೋಧನೆಗೆ ನೇಮಿಸಿಕೊಳ್ಳಬೇಕು. ಪ್ರತಿ ಸೆಮಿಸ್ಟರ್‌ ನಾಲ್ಕು ತಿಂಗಳಂತೆ ವರ್ಷಕ್ಕೆ ಎಂಟು ತಿಂಗಳು ಬೋಧನಾ ಅವಧಿ ವಿಸ್ತರಿಸಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಖಾಸಗಿ ಪದವಿ ಕಾಲೇಜುಗಳಿಗೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ : ಬೀದರ್‌ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್

ಈ ಸಂದರ್ಭದಲ್ಲಿ ಸಂಘದ ಪ್ರಫುಲ್‌ ಕುಮಾರ್‌, ಉಪಾಧ್ಯಕ್ಷ ಮಹೇಶ ಎಸ್.‌, ಕಾರ್ಯದರ್ಶಿ ಆಕಾಶ ಖಂಡಾಳೆ, ಜಂಟಿ ಕಾರ್ಯದರ್ಶಿ ಡಾ.ಜಿಯಾವುದ್ದಿನ್‌, ಸದಸ್ಯ ಅನೀಲಕುಮಾರ್‌ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X