ಬೀದರ್‌ | 7 ವರ್ಷದ ಬಾಲಕಿಯನ್ನು ಮಹಡಿಯಿಂದ ತಳ್ಳಿ ಕೊಂದಳಾ ಮಲತಾಯಿ?

Date:

ಮಲತಾಯಿಯೊಬ್ಬಳು 7 ವರ್ಷದ ಪುಟ್ಟ ಮಗುವಿಗೆ ಕೊಂದಿರುವ ಘಟನೆ ಬೀದರ್‌ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಆದರ್ಶ ಕಾಲೋನಿಯ ನಿವಾಸಿ ಸಿದ್ದಾಂತ ತೂಗಾಂವೆ ಎಂಬುವವರ ಪುತ್ರಿ ಸಾನ್ವಿ (7) ಕೊಲೆಯಾದ ಬಾಲಕಿ. ಘಟನೆ ಸಂಬಂಧ ಗಾಂಧಿ ಗಂಜ ಠಾಣೆಯಲ್ಲಿ ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ತೂಗಾಂವೆ ಅವರು ದೂರು ದಾಖಲಿಸಿದ್ದಾರೆ. ಮಲತಾಯಿ ರಾಧಾ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಕಳೆದ ಆಗಸ್ಟ್‌ 27ರಂದು ಸಾನ್ವಿ ಮೃತಪಟ್ಟಿದ್ದು, ಮನೆಯ 3ನೇ ಮೇಲ್ಮಹಡಿಯಲ್ಲಿ ಆಟವಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು. ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿ ಗಂಜ್ ಠಾಣೆಗೆ ದೂರು ನೀಡಿ ಅಸ್ವಾಭಾವಿಕ ಸಾವು ಎಂದು ತಿಳಿಸಿದರು.

ಮೃತ ಬಾಲಕಿ ಸಾನ್ವಿ ತಾಯಿ ಕಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಬಳಿಕ 2023ರಲ್ಲಿ ಮಹಾರಾಷ್ಟ್ರ ಮೂಲದ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾದರು. ಅವರಿಗೆ ಎರಡು ಅವಳಿ ಮಕ್ಕಳಿವೆ.

ಸಿಸಿ ಕ್ಯಾಮೆರಾದಲ್ಲಿ ಘಟನೆ ದೃಶ್ಯ ಸೆರೆ :

ಘಟನೆ ನಡೆದು ಹಲವು ದಿನಗಳ ಬಳಿಕ ಸೆ.12ರಂದು ಪಕ್ಕದ ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸಾನ್ವಿ ಬಿದ್ದಿರುವುದು ಸೆರೆಯಾಗಿದೆ. ಬಾಲಕಿಗೆ ಮಲತಾಯಿ ರಾಧಾ ಕೆಳಗೆ ತಳ್ಳುವುದು ಸಿಸಿ ಕ್ಯಾಮೆರಾ ವಿಡಿಯೊದಲ್ಲಿ ಸೆರೆಯಾಗಿದೆ. ಮೇಲ್ಬಾವಣಿ ಮೇಲೆ ಕುರ್ಚಿ ಇಟ್ಟು ಅದರ ಮೇಲೆ ಬಕೆಟ್ ಉಲ್ಟಾ ಇಟ್ಟು ಸಾನ್ವಿಗೆ ಕೂಡಿಸಿದ್ದಾಳೆ. ತನ್ನ ಮುಖ ಯಾರಿಗೂ ಕಾಣಿಸದಂತೆ ಕೆಳಗೆ ಕುಳಿತು ಬಾಲಕಿಗೆ ಕೆಳಗೆ ತಳ್ಳಿ ಮನೆಯಲ್ಲಿ ಓಡಿ ಹೋಗಿದ್ದಾಳೆʼ ಎಂದು ಬಾಲಕಿ ಅಜ್ಜಿ ವಿಜಯಶ್ರೀ ದೂರಿನಲ್ಲಿ ಆರೋಪಿಸಿದ್ದಾರೆ.

ʼಸೊಸೆ ರಾಧಾ ಬಾಲಕಿ ಸಾನ್ವಿಗೆ ವಿನಾಕಾರಣ ಬೈಯ್ಯುವುದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಸ ಗುಡಿಸುವುದು, ಪಾತ್ರೆ, ಬಟ್ಟೆ ತೊಳೆಯಲು ಹೇಳಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಳು. ಇದನ್ನು ಗಮನಿಸಿ, ʼಮಕ್ಕಳೊಂದಿಗೆ ವ್ಯವಹಾರ ಮಾಡಬಾರದು. ಆಕೆಯು ನಿನ್ನಿಬ್ಬರ ಮಕ್ಕಳಂತೆ ಇದ್ದಾಳೆ. ನಿನ್ನ ಮಕ್ಕಳಂತೆ ಪ್ರೀತಿ, ವಾತ್ಸಲ್ಯದಿಂದ ನಡೆದುಕೊಳ್ಳಬೇಕು ಎಂದು ತಿಳುವಳಿಕೆ ಹೇಳಿದರೂ, ರಾಧಾ ಪುಟ್ಟ ಬಾಲಕಿ ಸಾನ್ವಿ ಮೇಲೆ ದ್ವೇಷ ಸಾಧಿಸುತ್ತಿದ್ದಳುʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೀದರ್‌ | ಮಧ್ಯಪ್ರದೇಶದಿಂದ ಗಾಂಜಾ ಖರೀದಿ : 43 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಮಹಿಳೆ ಪೊಲೀಸರ ವಶಕ್ಕೆ

ʼಈ ಬಗ್ಗೆ ರಾಧಾಗೆ ಪ್ರಶ್ನಿಸಿದರೆ, ತಾನು ಆ ಸಮಯದಲ್ಲಿ ಮನೆಯ ಕೊಣೆಯಲ್ಲಿ ಮಲಗಿದ್ದೆ, ನನಗೆ ಏನೂ ಗೊತ್ತಿಲ್ಲʼ ಎಂದು ಸುಳ್ಳು ಹೇಳುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಇಬ್ಬರ ಮಕ್ಕಳಿಗೆ ಸಾನ್ವಿ ಮುಳುವಾಗಬಹುದು ಎಂಬ ಉದ್ದೇಶದಿಂದ ಮನೆಯ ಚಾವಣಿ ಮೇಲೆ ಕರೆದೊಯ್ದು ಕೆಳಗೆ ತಳ್ಳಿ ಕೊಲೆ ಮಾಡಿದ್ದು, ಸೊಸೆ ರಾಧಾ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆʼ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಾಲ್ಮೀಕಿ ವಿವಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು: ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ...

ಉಡುಪಿ | ಕೃಷಿ ಮೇಳದಿಂದ ರೈತರ ಬದುಕಿಗೆ ಆತ್ಮಸ್ಥೈರ್ಯ ತುಂಬಲಿ: ಕೋಟ ಶ್ರೀನಿವಾಸ ಪೂಜಾರಿ

ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು...

ಉಡುಪಿ | ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ : ಯಶ್ ಪಾಲ್ ಸುವರ್ಣ

ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಿದಾಗ ಮಾತ್ರ ಸರಕಾರದ...

ಧಾರವಾಡ | ಪಶ್ಚಿಮ ಪದವೀಧರರ ಚುನಾವಣೆ; ಬ್ಯಾಲೆಟ್ ಪೇಪರ್ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್. ಆರ್

"ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಚುನಾವಣಾ ಆಯೋಗದ...