ಭಾಲ್ಕಿ ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ (ಎಂಎಸ್ಎಸ್ಕೆ) ಕಾರ್ಖಾನೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಶಾಂತಿಯುತವಾಗಿ ಮತದಾನ ನೆರವೇರಿತು.
ಕಾರ್ಖಾನೆಗೆ ಶೇ.69ರಷ್ಟು ಮತದಾನವಾಗಿದೆ. ಒಟ್ಟು 4,452 ರೈತ ಮತದಾರರು ಹೊಂದಿದ್ದು ಅದರಲ್ಲಿ 3,106 ರೈತರು ತಮ್ಮ ಹಕ್ಕು ಚಲಾಯಿಸಿದ್ದರು. ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡ ಮತದಾನ ಸಾಯಂಕಾಲ 4 ಗಂಟೆ ವರೆಗೂ ನಡೆಯಿತು.
ಬೆಳಿಗ್ಗೆ 11 ಗಂಟೆ ವರೆಗೂ ನೀರಸವಾಗಿದ್ದ ಮತದಾನ ಮಧ್ಯಾಹ್ನ 12 ಗಂಟೆ ನAತರ ಬಿರುಸು ಪಡೆದು ಕೊಂಡಿತು. ರೈತರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ 5 ಸ್ಥಾನಗಳು ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ 8 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸಾಮಾನ್ಯ ಕ್ಷೇತ್ರ 5, ಸಾಮಾನ್ಯ ಮಹಿಳಾ ಕ್ಷೇತ್ರ 2 ಮತ್ತು ಪರಿಶಿಷ್ಟ ಜಾತಿ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರತಿ ಬಾರಿ ಅವಿರೋಧ ಆಯ್ಕೆ ನಡೆಯುತ್ತಿದ್ದ ಕಾರ್ಖಾನೆಗೆ ಈ ಬಾರಿ ಬಿಜೆಪಿ ಬೆಂಬಲಿತರು ಸ್ಪರ್ಧೆ ಮಾಡಿದ್ದರಿಂದ ಚುನಾವಣಾ ಕಣ ರಂಗೇರಿತು. ಹಾಗಾಗಿ 8 ಸ್ಥಾನಗಳಲ್ಲಿ ಅಮರಕುಮಾರ ಖಂಡ್ರೆ ಪೆನಾಲ್ ಮತ್ತು ಬಿಜೆಪಿ
ಬೆಂಬಲಿತರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತು.
ಇದನ್ನೂ ಓದಿ : ಬೀದರ್ | ರಸ್ತೆ ಗುಂಡಿಗಳಿಗೆ ಹೂವು ಸುರಿಸಿ ವಿನೂತನ ಪ್ರತಿಭಟನೆ ನಡೆಸಿದ ಕೆಆರ್ಎಸ್ ಪಕ್ಷ