ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ಹಿಂದಿ ದಿವಸ ಕಾರ್ಯಕ್ರಮ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯೆ ಡಾ.ರಂಜನಾ ಪಾಟೀಲ್ ಮಾತನಾಡಿ, ʼಹಿಂದಿ ಭಾಷೆಯು ದೇಶದ ವ್ಯವಹಾರಿಕ ಭಾಷೆಯಾಗಿದೆ. ದೇಶದ ಹೆಚ್ಚು ಜನರು ಹಿಂದಿ ಭಾಷೆ ಬಳಸುತ್ತಾರೆ. ಅನೇಕ ಲೇಖಕರು ಸಾಹಿತ್ಯವನ್ನು ಹಿಂದಿ ಭಾಷೆಯಲ್ಲಿ ಬರೆದಿದ್ದಾರೆ. ನಮ್ಮ ಕನ್ನಡ ಭಾಷೆಯೊಂದಿಗೆ ಬೇರೆ ಭಾಷೆಗಳನ್ನು ಕಲಿಯಬೇಕಿದೆʼ ಎಂದರು.
ಬಿ.ವ್ಹಿ.ಬಿ. ಕಾಲೇಜಿನ ಪ್ರಾಧ್ಯಾಪಕಿ ಡಾ.ದೀಪಾ ರಾಗಾ ಮಾತನಾಡಿ, ʼಹಿಂದಿ ಭಾಷೆಯ ಮಹತ್ವ ಮತ್ತು ಇಂದಿನ ಕಾಲದಲ್ಲಿ ಅದರ ಪ್ರಸ್ತುತತೆ ಕುರಿತು ತಿಳಿಸಿದ ಅವರು, ಹಿಂದಿ ಕೇವಲ ಒಂದು ಭಾಷೆಯಲ್ಲ, ಭಾರತೀಯ ಏಕತೆ ಮತ್ತು ವೈವಿಧ್ಯತೆಯ ಗುರುತು. ಕನ್ನಡ ಭಾಷೆ ಕಲಿಕೆಯ ಜೊತೆಗೆ ಹಿಂದಿ, ಇಂಗ್ಲೀಷ್ ಇತರೆ ಭಾಷೆ ಬಳಸಿದರೂ ತಪ್ಪೇನಿಲ್ಲʼ ಎಂದು ತಿಳಿಸಿದರು.
ವೆಂಕಟ್ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಗಂಗಾಬಿಕೆ ಪಾಟೀಲ್, ಮೀನಾ ಗಾಯಕವಾಡ, ಡಾ.ಪ್ರವೀಣ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ
ಪ್ರಾಧ್ಯಾಪಕರಾದ ಸವಿತಾ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಸೆಲ್ವಾ ನಿರೂಪಿಸಿದರು. ಫೈಜಾ ವಂದಿಸಿದರು.