ಪತ್ನಿ ಮೇಲೆ ಸಂಶಯ ಪಟ್ಟು ಪತಿ ಕುಡುಗೋಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ಕಮಲನಗರ ತಾಲೂಕಿನಲ್ಲಿ ನಡೆದಿದೆ.
ಕಮಲನಗರ ತಾಲೂಕಿನ ಬೆಳಕುಣಿ(ಭೋ) ಗ್ರಾಮದ ನಿರ್ಮಲಾ ಅಂಕುಶ ಶೆಟಕಾರ (32) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಅಂಕುಶ ಸಿದ್ರಾಮಪ್ಪ ಶೆಟಕಾರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಕೆಲ ವರ್ಷಗಳ ಕಾಲ ಅನೋನ್ಯವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಇಬ್ಬರ ಮಧ್ಯೆ ಜಗಳವಾಗಿ ಪರಸ್ಪರ ಬೇರೆಯಾಗಿದ್ದರು ಎನ್ನಲಾಗಿದೆ.
ನಾಲ್ಕು ದಿನಗಳ ಹಿಂದೆ ವಕೀಲರ ಮುಖಾಂತರ ಪತಿ, ಪತ್ನಿಗೆ ಡೈವೋರ್ಸ್ ನೋಟಿಸ್ ಕಳಿಸಿದ್ದಾನೆ. ಇದನ್ನು ನೋಡಿ ಭಯಗೊಂಡ ಪತ್ನಿ ಪುನಃ ಗಂಡನೊಂದಿಗೆ ಇರಬೇಕೆಂದು ಬಯಸಿ (ಮೇ 13) ರಂದು ಗಂಡನ ಮನೆಗೆ ಬಂದಿದ್ದಳು. ಇದರಿಂದ ಕೋಪಗೊಂಡ ಪತಿ (ಮೇ 14) ಬುಧವಾರ ಕುಡುಗೋಲಿನಿಂದ ಹೊಡೆದು ಪತಿಯನ್ನು ಕೊಲೆ ಮಾಡಿದ್ದಾನೆ.
ಈ ಕುರಿತು ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಮರೆಪ್ಪ ಶಿವಬಲ್, ಪಿಎಸ್‍ಐ ಚಂದ್ರಶೇಖರ ನಿರ್ಣೆ ಭೇಟಿ ನೀಡಿ ಪರಿಶೀಲಿಸಿದರು.