ಬೀದರ್‌ | ತಗ್ಗದ ಮಾಂಜ್ರಾ ಪ್ರವಾಹ : ನಿಟ್ಟೂರ(ಬಿ) ಸೇತುವೆ ಮುಳುಗಡೆ; ಸಂಚಾರ ಸ್ಥಗಿತ

Date:

Advertisements

ಜಿಲ್ಲಾದ್ಯಂತ ನಿನ್ನೆಯಿಂದ ಮಳೆ ಬಿಡುವು ಕೊಟ್ಟಿದ್ದರಿಂದ ರೈತಾಪಿ ವರ್ಗ ಒಂದಿಷ್ಟು ನಿಟ್ಟುಸಿರು ಬಿಟ್ಟರೂ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ಮಾಂಜ್ರಾ ನದಿ ಪಾತ್ರದ ಗ್ರಾಮಗಳ ಜನರ ಮೊಗದಲ್ಲಿ ನೆರೆ ಭೀತಿಯ ಛಾಯೆ ಆವರಿಸಿದೆ.

ಮಹಾರಾಷ್ಟ್ರದ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಮಾಂಜ್ರಾ ನದಿ ಈಗಲೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಜಿಲ್ಲೆಯ ಹುಲಸೂರ, ಭಾಲ್ಕಿ, ಕಮಲನಗರ, ಔರಾದ್‌ ಹಾಗೂ ಬೀದರ್‌ ತಾಲ್ಲೂಕಿನ ಹಲವು ಗ್ರಾಮಗಳ ನಡುವೆ ಈಗಲೂ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ.

ಭಾನುವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಲಾಗುತ್ತಿದೆ. ಇದರಿಂದ ಮಾಂಜ್ರಾ ಮತ್ತಷ್ಟು ಭೋರ್ಗರೆಯುತ್ತಿದ್ದು, ಕೆಲವೆಡೆ ಮನೆಗಳಿಗೆ ನುಗ್ಗಿ ನುಗ್ಗಿದರೆ, ಹಲವು ಗ್ರಾಮಗಳಿಗೆ ತೆರಳುವ ರಸ್ತೆ ಸಂಪರ್ಕ ಕಡಿತವಾಗಿದೆ.

ಮಾಂಜ್ರಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಭಾಲ್ಕಿ ತಾಲ್ಲೂಕಿನ ನಿಟ್ಟೂರ್(ಬಿ) ಗ್ರಾಮ ಸಮೀಪದ ಸೇತುವೆ ಮೇಲೆ ಸೋಮವಾರ ಬೆಳಿಗ್ಗೆಯಿಂದ ನೀರು ಬರಲಾರಂಭಿಸಿತು. ಸಂಜೆ ಪೊಲೀಸ್‌ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲಿಂದ ಸಂಚಾರ ಮಾಡದಂತೆ ಮುಳ್ಳು ಕಂಟಿ ಹಚ್ಚಿದ್ದರು. ಮಂಗಳವಾರ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

WhatsApp Image 2025 09 30 at 8.24.12 AM
ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದ ಕೆಲ ಮನೆ ಬಾಗಿಲಿಗೆ ಮಾಂಜ್ರಾ ನದಿ ನೀರು ಹೊಕ್ಕಿರುವುದು

ಬೀದರ್‌ ತಾಲ್ಲೂಕಿನ ಚಿಲ್ಲರ್ಗಿ ಗ್ರಾಮದ ಕೆಲ ಮನೆಗಳಿಗೆ ಪ್ರವಾಹದ ನೀರು ಹೊಕ್ಕಿದ್ದರಿಂದ ದವಸ ಧಾನ್ಯ, ಸಾಮಾಗ್ರಿಗಳು ನೀರುಪಾಲಾಗಿದೆ. ಮಳೆ ನಿಂತರೂ ಪ್ರವಾಹ ತಗ್ಗಿಲ್ಲ, ಪ್ರವಾಹ ಭೀತಿ ಕಾಡುತ್ತಿದೆ ಎಂದು ಹೇಳುತ್ತಿದ್ದಾರೆ.

ಮಾಂಜ್ರಾ ನದಿ ತೀರದ ಗ್ರಾಮಗಳಾದ ಕೌಠಾ(ಬಿ), ಬಾಬಳಿ, ಚಂದಾಪುರ, ಇಸ್ಲಾಂಪುರ, ಬಳತ, ಸಾವಳಿ, ಹುಲಸೂರ ಕೊಂಗಳ, ಲಖನಗಾಂವ, ನಿಟ್ಟೂರ, ನಾಗರಾಳ, ಚಿಮಕೋಡ, ಗಡಿಕುಶನೂರ, ಖಾನಾಪುರ, ಕಂದಗೂಳ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಭೂಮಿ ಸಂಪೂರ್ಣ ನೀರಿನಲ್ಲಿ ಮುಳುಗಿದೆ.

ಇದನ್ನೂ ಓದಿ : ಬೀದರ್‌ | ವೀರಶೈವ ʼಲಿಂಗಾಯತ ಧರ್ಮʼದ ಒಂದು ಉಪಪಂಗಡ : ಬಸವಲಿಂಗ ಪಟ್ಟದ್ದೇವರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X