ಬೀದರ್‌ | ಬೌದ್ಧ ಸಾಹಿತ್ಯಕ್ಕೆ ಎಸ್.ಎಂ.ಜನವಾಡಕರ್‌ ಕೊಡುಗೆ ಅಪಾರ : ರಾಮಚಂದ್ರ ಗಣಾಪುರ

Date:

Advertisements

ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಅವರು ವಿಶೇಷವಾಗಿ ಬೌದ್ಧ ಸಾಹಿತ್ಯ ಪರಂಪರೆಗೆ ಅವರ ಕೊಡುಗೆ ನೀಡಿದ್ದಾರೆ. ಕ್ಷೇತ್ರಕಾರ್ಯ ಮುಖಾಂತರ ತಮ್ಮ ಕೃತಿಗಳಲ್ಲಿ ಬೌದ್ಧ ಪರಂಪರೆಯನ್ನು ಹಿಡಿದಿಟ್ಟಿದ್ದಾರೆ ಎಂದು ಸಾಹಿತಿ ಡಾ.ರಾಮಚಂದ್ರ ಗಣಾಪುರ ಹೇಳಿದರು.

ಬೀದರ್ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ಎಸ್. ಎಂ. ಜನವಾಡಕರ್ ಅವರ ಸಮಗ್ರ ಸಾಹಿತ್ಯ ಕುರಿತು ಭಾನುವಾರ ಆಯೋಜಿಸಿದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ʼಸಾಹಿತಿ ಜನವಾಡಕರ್‌ ಅವರು ಹಿಮಸಾಗರ, ಜಾನಪದ ಸಿರಿ, ಬೆಡಗಿನ ಬೀದರ್’ ಮುಂತಾದ ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಕೃತಿಗಳಲ್ಲಿ ಮಾನವೀಯತೆ, ಬಂಧುತ್ವ ಕಾಣಬಹುದುʼ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡಿರುವ ಎಸ್.ಎಂ.ಜನವಾಡಕರ್ ಅವರು ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ್ದಾರೆʼ ಎಂದು ಹೇಳಿದರು.

ಸಾಹಿತಿ ಸುನೀತಾ ಕೂಡ್ಲಿಕರ್ ಅವರು ಉಪನ್ಯಾಸ ನೀಡಿ, ʼಎಸ್.ಎಂ.ಜನವಾಡಕರ್‌ ಅವರ ಪ್ರಜ್ಞ ತರಂಗ, ಶೀಲ ತರಂಗ, ಕರುಣ ತರಂಗ, ಧಮ್ಮಾಮೃತ ಗೀತೆ, ತಥಾಗತ್ ಗಾದೆಗಳು ಮುಂತಾದ ಕೃತಿಗಳು ವಿಶಿಷ್ಟ ಸ್ಥಾನ ಪಡೆದಿವೆ. ವಿಶೇಷವಾಗಿ ‘ಪ್ರಜ್ಞ ತರಂಗ’ ಕಾವ್ಯದ ಮೂಲಕ ವೈವಿಧ್ಯಮಯ ವಿಚಾರಗಳನ್ನು ಹಿಡಿದಿಟ್ಟಿದ್ದಾರೆ. ಮನುಷ್ಯನ ಜೀವನ ಕುರಿತು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಶೀಲ ತರಂಗ’ ಸಂಕಲನದಲ್ಲಿ ಪ್ರಸ್ತುತ ವಿಚಾರಗಳನ್ನು ಸಮೀಕರಿಸುವ ಪ್ರಯತ್ನ ಮಾಡಿದ್ದಾರೆʼ ಎಂದರು.

ಸಾಹಿತಿ ಡಾ.ಶ್ರೇಯಾ ಮಹಿಂದ್ರಕರ್ ಅವರು ಮಾತನಾಡಿ, ʼಜನವಾಡಕರ್ ಅವರ ಸಾಹಿತ್ಯ ಕೇವಲ ಕಾವ್ಯ ಅಥವಾ ವಿಮರ್ಶೆಗೆ ಸೀಮಿತವಾಗಿಲ್ಲ, ನಾಟಕ, ಕಥೆ ಹಾಗೂ ಕಾದಂಬರಿಗಳಲ್ಲಿ ಅವರು ಬರೆದಿರುವ ಕೃತಿಗಳು ಸಮಾಜದ ನಿಜ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಜನಜೀವನದ ನೋವು-ನಲಿವು, ಹೋರಾಟ ಹಾಗೂ ಆಶಾವಾದಗಳನ್ನು ಅವರ ಕತೆ- ಕಾದಂಬರಿಗಳು ಅತ್ಯಂತ ನೈಜವಾಗಿ ಬಿಂಬಿಸುತ್ತವೆ. ಹಳ್ಳಿಯ ಸಾಂಪ್ರದಾಯಿಕ ಬದುಕಿನಿಂದ ಹಿಡಿದು ಬದಲಾಗುತ್ತಿರುವ ಸಮಾಜದ ಚಿತ್ರಣವನ್ನು ಅವರ ನಾಟಕ, ಕಾದಂಬರಿಗಳು ನೀಡುತ್ತವೆ. ವಿಶೇಷವಾಗಿ ತಳವರ್ಗದ ಬದುಕನ್ನು ಅಕ್ಷರ ರೂಪದಲ್ಲಿ ಹಿಡಿದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆʼ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ
ಅವರು ಮಾತನಾಡಿ, ʼನಾವೆಲ್ಲರೂ ಕನ್ನಡ ನಾಡು-ನುಡಿ, ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಜಿಲ್ಲೆಯು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಎಸ್.ಎಂ.ಜನವಾಡಕರ್ ಅವರ ಕೃತಿಗಳು ಜನಮನದಲ್ಲಿ ಹೊಸ ಚೈತನ್ಯ ಮೂಡಿಸುವಂತಿವೆʼ ಎಂದು ತಿಳಿಸಿದರು.

ಸಾಹಿತಿ ಡಾ.ಮುಕ್ತುಂಬಿ ಅವರು ಉಪನ್ಯಾಸ ನೀಡಿ, ʼವಿವಿಧ ವಚನಕಾರರ ವಚನಗಳ ಹಿನ್ನೆಲೆಯಲ್ಲಿ ಜನವಾಡಕರ್ ಅವರು ಅದ್ಭುತ ಲೇಖನಗಳನ್ನು ರಚಿಸಿದ್ದಾರೆ. ಅವರ ವೈಚಾರಿಕ ಬರಹಗಳು ಸಮಾಜದಲ್ಲಿನ ಮಡಿವಂತಿಕೆ ಮತ್ತು ಮೌಢ್ಯ ತೊಲಗಿಸುವ ಶಕ್ತಿ ಹೊಂದಿವೆʼ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಹಿರಿಯ ಸಾಹಿತಿ ಎಂ.ಎಸ್. ಜನವಾಡಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ನೂತನವಾಗಿ ನಾಮನಿರ್ದೇಶನಗೊಂಡಿರುವ ಟಿ.ಎಮ್.ಮಚ್ಚೆ, ಸುನೀಲ ಭಾವಿಕಟ್ಟಿ ಇತರರಿಗೆ ಗೌರವಿಸಲಾಯಿತು.

ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಇಳಿಮುಖ

ಸುನಿಲ್ ಗಾಯಕವಾಡ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ನಾಗೇಶ್ ಜಾನಕನೂರ್ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಲೇಖಕರು, ಸಾಹಿತ್ಯಾಭಿಮಾನಿಗಳು, ಮಕ್ಕಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X