ಬೀದರ್‌ | ಗ್ರಾಮದ ಸಮಸ್ಯೆ ಹೇಳಿದ್ರೆ ಬೆದರಿಕೆ ಹಾಕಿದ ಸಿಂಧನಕೇರಾ ಪಿಡಿಒ; ಕ್ರಮಕ್ಕೆ ಆಗ್ರಹ

Date:

ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಸ್ವಚ್ಛತೆ ಕುರಿತು ಧ್ವನಿ ಎತ್ತಿದರೆ ಕರೆ ಮಾಡಿ ಬೆದರಿ ಹಾಕಿರುವ ಗ್ರಾಮ ಪಂಚಾಯತ್ ಪಿಡಿಒ ಸುಗಂಧಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

- Advertisement -

ಈ ಸಂಬಂಧ ಮಂಗಳವಾರ ಹುಮನಾಬಾದ್ ತಹಸೀಲ್ದಾರ್‌ ಅಂಜುಮ್‌ ತಬಸುಮ್‌ ಹಾಗೂ ತಾಲ್ಲೂಕು ಪಂಚಾಯತ್‌ ಇಒ ದೀಪಿಕಾ ನಾಯ್ಕರ್‌ ಅವರಿಗೆ ಸಲ್ಲಿಸಿದ ಮನವಿ ಪತ್ರ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಿಂಧನಕೇರಾ ಗ್ರಾಮದ ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳ್ಳಿ ಅವರು, ʼಗ್ರಾಮದ ಬಸವೇಶ್ವರ ವೃತ್ತದಲ್ಲಿ ನೀರು ನಿಲ್ಲುತ್ತಿದೆ, ದಯವಿಟ್ಟು ಸರಿಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹಾಕಿದರು. ಅದಕ್ಕೆ ಪಿಡಿಒ ಸುಗಂಧಾ ಅವರು ಕರೆ ಮಾಡಿ, ʼನಮ್ಮನ್ನು ಪ್ರಶ್ನೆ ಮಾಡೋದಕ್ಕೆ, ನೀನೇನು ಗ್ರಾಮದ ನೇತಾ ಏನು, ಬಸವೇಶ್ವರ ವೃತ್ತದ ಬಳಿ ನೀರು ನಿಂತರೆ ನಿಮಗ್ಯಾಕೆ ಸಮಸ್ಯೆ? ಬಸವೇಶ್ವರ ಚೌಕ್‌ ನಿಮಗೇನು ಸಂಬಂಧ, ನಿಮ್ಮ ಏರಿಯಾ ನೀವು ನೋಡಿಕೊಳ್ಳಿ, ಅಂಬೇಡ್ಕರ್ ಮೂರ್ತಿ ಬಗ್ಗೆ ಮೊದಲು ವಿಚಾರಿಸಿʼ ಎಂದಿದ್ದಾರೆ ಎಂದು ಆರೋಪಿಸಿದರು.

ʼನಾನು ಸುಮ್ಮನ್ನೆ ಕುಂತ್ರೆ ಜಾಸ್ತಿ ಮಾಡ್ತಾ ಇದ್ದೀರಾ, ನೀವು ಎಲ್ಲದಕ್ಕೂ ರೆಡಿ ಇದ್ದರೆ ಬನ್ನಿ. ಏನು ಮಾಡಬೇಕು ಅದನ್ನು ಮಾಡಿ ತೋರಿಸ್ತೀನಿ. ಬ್ಲ್ಯಾಕ್‌ ಮಾಡೋಕೆ ದೂರು ಕೊಡ್ತೀರಾʼ ಎಂದು ಪಿಡಿಒ ಅವರು ಬೆದರಿಕೆ ಹಾಕಿದ್ದಾರೆ. ಯುವರಾಜ್ ಐಹೊಳ್ಳಿ ಅವರಿಗೆ ಏನಾದರೂ ತೊಂದರೆಯಾದರೆ ಪಿಡಿಒ ಸುಗಂಧಾ ಅವರೇ ಹೊಣೆಯಾಗುತ್ತಾರೆ. ಪಿಡಿಒ ವಿರುದ್ಧ ವಾರದೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಾಲ್ಲೂಕು ಪಂಚಾಯತ್ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಸಿದರು.

ಇದನ್ನೂ ಓದಿ : ಬೀದರ್‌ | ಗುಣಾತ್ಮಕ ಶಿಕ್ಷಣ, ಮಾನವ ಸಂಪನ್ಮೂಲ ಬಲಿಷ್ಠಕ್ಕೆ ಯೋಜನೆ ರೂಪಿಸಿ : ನಾಗನಾಥ ಚಿಟಮೆ

ಸಾಮಾಜಿಕ ಕಾರ್ಯಕರ್ತರಾದ ಯುವರಾಜ್ ಐಹೊಳ್ಳಿ, ಆಶ್ರಯ ದೀಪ ಟ್ರಸ್ಟ್ ಉಪಾಧ್ಯಕ್ಷ ಅರವಿಂದ್ ಜೋಗಿರೆ, ಗುರು ಪಾಟೀಲ್ ಸಿಂಧನಕೇರಾ, ಭೀಮ್ ಆರ್ಮಿ ತಾಲೂಕು ಉಪಾಧ್ಯಕ್ಷ ಶೇಖ್ ಫಿರ್ದೋಸ್, ಎಂ.ಡಿ.ಬಾಬಾ ಪಟೇಲ್, ಮಲ್ಲೇಶ್ ಮಿತ್ರ, ಶೇಖ್ ಅಮಾನ್ ಸುಲ್ತಾನಿ, ಮೈನೋದ್ದಿನ್ ನಂದಗಾಂವವಾಲೆ, ಅಮರ್ ಸಿಂಧನಕೇರಾ, ಸಂದೀಪ್ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ ದಕ್ಷಿಣ | ಜಿಪಂ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ: ಜನಪ್ರತಿನಿಧಿಗಳಿಗೆ ಎಚ್ಚರಿಕೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ...

ಉಡುಪಿ | ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ಹಿರಿಯ ವಕೀಲರು...

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...