ಬೀದರ್‌ | ಮಠಗಳಿಗೆ ಸಮಾಜದ ಹಿತವೇ ಮುಖ್ಯವಾಗಲಿ : ಪ್ರಭುದೇವ ಸ್ವಾಮೀಜಿ

Date:

Advertisements

ಮಠ ಮಾನ್ಯಗಳಿಗೆ ಭಕ್ತರ ಉದ್ಧಾರ ಹಾಗೂ ಸಮಾಜದ ಹಿತವೇ ಮುಖ್ಯವಾಗಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.

ಬೀದರ್ ನಗರದ ಬಸವಗಿರಿಯಲ್ಲಿ ಭಾನುವಾರ‌ ಲಿಂಗಾಯತ ಮಹಾಮಠದ ವತಿಯಿಂದ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ʼಮಠಗಳು ಯಾರದ್ದಾದರೂ ಅಧೀನದಲ್ಲಿರಬೇಕಾದರೆ ಅದು ಭಕ್ತರ ಅಧೀನದಲ್ಲಿರಬೇಕು. ಯಾವ ಕಾರಣಕ್ಕೂ ಯಾರ ಹಂಗಿಗೂ ಒಳಗಾಗಬಾರದುʼ ಎಂದು ಹೇಳಿದರು.

ʼಅಕ್ಕ ಅನ್ನಪೂರ್ಣತಾಯಿ ಅವರು ಭಕ್ತರ ಬಾಳು ಬೆಳಗಿಸಲು ಅವಿರತ ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಬಸವ ಮಾರ್ಗದಲ್ಲೇ ಮುನ್ನಡೆಯುತ್ತಿರುವೆ. ಪ್ರಸ್ತುತ ಪ್ರತಿಯೊಬ್ಬರೂ ತಮ್ಮ ಬದುಕಿನ ರೀತಿ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಹಾಗೆ ಮಾಡಿದ್ದಲ್ಲಿ ಮುಂದಿನ ಜೀವನ ಸುಖಮಯವಾಗುತ್ತದೆʼ ಎಂದರು.

Advertisements

ಬಸವಕಲ್ಯಾಣದ ಬಸವ ತತ್ವ ಪ್ರಚಾರಕ ಬಸವದೇವರು ಅವರು ಬಸವಣ್ಣನವರ ವಚನಗಳಲ್ಲಿ ಆತ್ಮವಿಮರ್ಶೆ ಕುರಿತು ಉಪನ್ಯಾಸ ನೀಡಿ, ʼಬೇರೆಯವರ ತಪ್ಪುಗಳನ್ನು ಹುಡುಕದೆ, ಮೊದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆತ್ಮಸಾಕ್ಷಿ ಒಪ್ಪುವಂತೆ ಬದುಕು ಸಾಗಿಸಬೇಕುʼ ಎಂದು ತಿಳಿಸಿದರು.

ಯುರೋಪ ದೇಶದಲ್ಲಿ ಬಸವತತ್ವ ಪ್ರಚಾರ ಕೈಗೊಂಡ ಯೋಗ ಗುರು ಕವಿತಾ ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ʼವೈಜ್ಞಾನಿಕವಾಗಿರುವ ಬಸವತತ್ವ ಇಂದು ಜಗತ್ತಿಗೆ ಅವಶ್ಯಕವಾಗಿದೆ. ವಿದೇಶಿಗರೂ ಬಸವ ತತ್ವವನ್ನು ಅಪ್ಪಿಕೊಳ್ಳುತ್ತಿದ್ದು, ಇದನ್ನು ವಿಶ್ವದಾದ್ಯಂತ ಪಸರಿಸುವ ಕೆಲಸ ಆಗಬೇಕಾಗಿದೆʼ ಎಂದು ಹೇಳಿದರು.

ʼಜರ್ಮನಿಯ ಶಹನಾಯ್ ಅವರು ಫೆ.26 ರಂದು ಲಿಂಗಾಯತ ಮಹಾಮಠದಲ್ಲಿ ನಡೆಯಲಿರುವ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಲಿಂಗಾಯತ ಧರ್ಮ ಸ್ವೀಕರಿಸಲಿದ್ದು, ಬಸವ ತತ್ವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಒಲವಿಗೆ ಇದು ನಿದರ್ಶನವಾಗಿದೆʼ ಎಂದು ತಿಳಿಸಿದರು.

ಜರ್ಮನಿಯ ಶಹನಾಯ್ ಕಾರ್ಯಕ್ರಮ ಉದ್ಘಾಟಿಸಿದರು. ಖಾದಿ ಮತ್ತು ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಮಹಾಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ, ಪ್ರಮುಖರಾದ ಅಶೋಕ ಎಲಿ, ಪ್ರಕಾಶ ಮಠಪತಿ, ಅಣವೀರ ಕೊಡಂಬಲ್, ಸಿ.ಎಸ್.ಗಣಾಚಾರಿ, ಆರ್.ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | 15 ತಿಂಗಳಾದರೂ ಪದವೀಧರ ಶಿಕ್ಷಕರಿಗಿಲ್ಲ ನಾಲ್ಕು ತಿಂಗಳ ಪಗಾರ!

ಚೆನ್ನಮ್ಮ ಮಹಾದೇವ ಪಾಟೀಲ ನವಲಸಪುರ ಬಸವ ಪೂಜೆ ನೆರವೇರಿಸಿದರು. ಶಾಮಲಾ ಎಲಿ ವಚನ ಪಠಣ ಮಾಡಿದರು.
ಪ್ರಿಯಾ ಬರಗಲೆ ಸ್ವಾಗತಿಸಿದರು. ಬಸವ ರಾಜಕುಮಾರ ಚಿಕ್ಕಲಿಂಗೆ ನಿರೂಪಿಸಿದರು. ರೇವಣಸಿದ್ದ ಗಣಾಚಾರಿ ವಂದಿಸಿದರು. ಮಹಾನಂದಾ ಮಾರುತಿ ಪಾಟೀಲ ಭಕ್ತಿ ದಾಸೋಹಗೈದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X