ಬೀದರ್‌ | ಸ್ವಾಭಿಮಾನಿ ಗೆಳೆಯರ ಬಳಗದಿಂದ ವಸತಿ ವಂಚಿತರಿಗೆ ಹೊದಿಕೆ ವಿತರಣೆ

Date:

ಬೀದರ್‌ ನಗರದ ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ಅಲೆಮಾರಿ, ನಿರ್ಗತಿಕರಿಗೆ ಹಾಗೂ ಬಡವರಿಗೆ ಬೆಚ್ಚನೆಯ ಹೊದಿಕೆ ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. 

- Advertisement -

ಬೀದರ್‌ ನಗರದ ನೌಬಾದ್‌ನ ಚೌಳಿ ಕಮಾನ್‌ ಸಮೀಪದಲ್ಲಿ ಗುಡಿಸಲಿನಲ್ಲಿ ವಾಸಿಸುವ ಸುಮಾರು 85ಕ್ಕೂ ಅಧಿಕ ಅಲೆಮಾರಿ ಕುಟುಂಬಗಳಿಗೆ ಹಾಗೂ ಪಾಪನಾಶ ದೇವಸ್ಥಾನ, ಕೆಇಬಿ ಬಳಿಯ ಹನುಮಾನ್ ಮಂದಿರ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಇರುವ ನಿರ್ಗತಿಕರಿಗೆ ಗೆಳೆಯರ ಬಳಗದ ಸದಸ್ಯರು ರಗ್ಗು ವಿತರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದ್ರಶೇಖರ ಪಡಶೆಟ್ಟಿ ಮಾತನಾಡಿ, ʼಜಿಲ್ಲೆಯಲ್ಲಿ ಕೆಲ ದಿನಗಳಿಂದ ವಿಪರೀತ ಚಳಿಗೆ ಜನರು ಕಂಗಾಲಾಗಿದ್ದಾರೆ. ಹೊತ್ತು ಮುಳುಗುವುದರೊಳಗಾಗಿ ಚಳಿ ಶುರುವಾದರೆ ಬೆಳಿಗ್ಗೆ 10 ಗಂಟೆಯಾದರೂ ಸಹ ಚಳಿಗೆ ಹೆದರಿ ಜನ ಮನೆಯಿಂದ ಹೊರಬರದಂತಹ ಪರಿಸ್ಥಿತಿ ಇದೆ. ಸ್ವಂತ ಸೂರು ಇಲ್ಲದೆ ಜೋಪಡಿಗಳಲ್ಲಿ ವಾಸಿಸುವ ಪುಟ್ಟ ಮಕ್ಕಳು, ವೃದ್ಧರು ಕೊರೆಯುವ ಚಳಿಯಲ್ಲಿ ಒದ್ದಾಡುತ್ತಿದ್ದಾರೆ. ಅವರ ಕಷ್ಟಕ್ಕೆ ನಮ್ಮ ತಂಡದ ಹೃದಯ ಮಿಡಿದಿದೆ. ಪ್ರತಿ ವರ್ಷವೂ ನಮ್ಮ ತಂಡದಿಂದ ಜಿಲ್ಲೆಯ ನಾನಾ ಕಡೆ ನಿರ್ಗತಿಕರಿಗೆ, ಬಡವರಿಗೆ ಹೊದಿಕೆ ವಿತರಿಸುವ ಕಾರ್ಯ ಮಾಡುತ್ತಿದ್ದೇವೆʼ ಎಂದರು.

WhatsApp Image 2025 11 20 at 10.33.58 PM

ಉದ್ಯಮಿ ಮಡಿವಾಳಪ್ಪ ಗಂಗಶೆಟ್ಟಿ ಅವರು ಮಾತನಾಡಿ, ʼಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಳಿ ವಸತಿ ರಹಿತರಿಗೆ ಸಂಕಷ್ಟಕ್ಕೆ ದೂಡಿದೆ. ಸ್ವಾಭಿಮಾನಿ ಗೆಳೆಯರ ಬಳಗದವರ ಸಾಮಾಜಿಕ ಕಳಕಳಿಗೆ ಮೆಚ್ಚಿ ರಗ್ಗು ದೇಣಿಗೆ ನೀಡುವ ಸಣ್ಣ ಕಾರ್ಯ ಮಾಡಿದ್ದೇನೆ. ವಸತಿ ವಂಚಿತ ಕುಟುಂಬಗಳಿಗೆ ಸರ್ಕಾರ ಮೂಲಸೌಕರ್ಯ ಒದಗಿಸುವುದು ಅಗತ್ಯವಿದೆʼ ಎಂದರು.

ಇದನ್ನೂ ಓದಿ : ಬೀದರ್‌ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ‌ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ

ಈ ಸಂದರ್ಭದಲ್ಲಿ ಪ್ರಮುಖರಾದ ಸೊಮನಾಥ ಗಂಗಶೆಟ್ಟಿ, ಓಂಪ್ರಕಾಶ್ ರೊಟ್ಟೆ, ಬಾಲಾಜಿ ಕುಂಬಾರ, ಜಗದೀಶ್ವರ ಬಿರಾದಾರ, ಉಮಾಕಾಂತ ವಿಳಾಸಪುರೆ ಹಾಗೂ ಬಳಗದ ಸದಸ್ಯರಾದ ಶ್ರೀಕಾಂತ್ ರೆಡ್ಡಿ, ನಿಲಕಂಠ ಶೆಟಕಾರ, ವಿಶಾಲ ಘಾಳೆ, ಬಸವರಾಜ ಸ್ವಾಮಿ, ರವಿ ಬೆಳಕುಣೆ, ಭಾನುದಾಸ, ಉಮೇಶ್ ಈರಗೊಂಡೆ, ವಿನೋದ ಬಿರಾದಾರ, ದಿಗಂಬರ ಗುಮಟಾ, ವೀಣ್ ಮಾಜಿ, ಸಿದ್ದು ಸ್ವಾಮಿ, ಶಿವು ಸ್ವಾಮಿ, ಶ್ರೀಕಾಂತ ಸ್ವಾಮಿ, ನಾಗರಾಜ್ ಬಂಬುಳಗೆ, ಜೀವನ್, ವಿಲಾಸ್ ಮತ್ತು ತಂಡದ ಸದಸ್ಯರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​ಚಿಂತಾಮಣಿ | ಎನ್‌ಡಿಎ ಅಭ್ಯರ್ಥಿ ಪರ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮತಬೇಟೆ;ವಕೀಲರ ಭೇಟಿ ಮಾಡಿದ ಜೆ.ಕೆ. ಕೃಷ್ಣಾರೆಡ್ಡಿ

ಚಿಂತಾಮಣಿ ನಗರದ ನ್ಯಾಯಾಲಯದಲ್ಲಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ...

ರಾಯಚೂರು | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅ.24ರಿಂದ ಬೃಹತ್ ಪಾದಯಾತ್ರೆ

ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

ಹಾವೇರಿ ವಿವಿಯಲ್ಲಿ ಆಯುಧಪೂಜೆ ಕಡ್ಡಾಯ; ಸಾಹಿತಿಗಳು, ಶಿಕ್ಷಣ ತಜ್ಞರು ಖಂಡನೆ

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಎಲ್ಲ ಅಧ್ಯಯನ ವಿಭಾಗಗಳ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿ...

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...