ಎನ್ಎಸ್ಎಸ್ ಶಿಬಿರವು ಸೇವಾ ಮನೋಭಾವ ಬೆಳೆಸುತ್ತದೆ. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಧೈರ್ಯ, ತಾಳ್ಮೆ ಹಾಗೂ ಸನ್ನಡತೆ ಮೈಗೂಡಿಸಿಕೊಳ್ಳಬೇಕುʼ ಎಂದು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಹೇಳಿದರು.
ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮುಖ್ಯವಾಗಿದೆ. ʼದ್ವೇಷ ಮಾಡುವವರು ರಾಜ್ಯ ಕಟ್ಟಬಹುದು, ಮನಸ್ಸನ್ನಲ್ಲʼ ಎಂಬ ಕವಿ ಜಂಬಣ್ಣ ಅಮರಚಿಂತ ಅವರ ಗಜಲ್ ನುಡಿಯಂತೆ ಮೌಲ್ಯಾಧಾರಿತ ಬದುಕಿನ ಅಗತ್ಯತೆ ಕುರಿತ ವಿವರಿಸಿದರು.
ಅಮರೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ರೇವಣಯ್ಯ ಮಠ ಮಾತನಾಡಿ, ʼಇಂದಿನ ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣವೇ ನಮ್ಮ ಬದುಕಿನ ಶಕ್ತಿ ಆಗಿದ್ದು, ವಿದ್ಯಾರ್ಥಿ ಜೀವನವನ್ನು ಸಾರ್ಥಕವಾಗಿ ರೂಪಿಸಿಕೊಳ್ಳಬೇಕುʼ ಎಂದು ಹೇಳಿದರು.
ಗ್ರಾಮೀಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಾಜಕುಮಾರ ಮಾಳಗೆ ಮಾತನಾಡಿ, ʼಗಡಿಭಾಗದ ಮಕ್ಕಳಿಗೆ ಅವಕಾಶಗಳ ಕೊರತೆ ಇದೆ. ಅವರಿಗೆ ಸೂಕ್ತ ವೇದಿಕೆ ದೊರೆತಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಸಾಮರ್ಥ್ಯವಿದೆʼ ಎಂದು ಅಭಿಪ್ರಾಯಪಟ್ಟರು.

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಉತ್ತಮ ದಂಡೆ, ಶಿಬಿರದ ವರದಿ ವಾಚನ ಮಾಡಿದ ಅವರು, ಶಿಬಿರಾರ್ಥಿಗಳಿಗೆ ದೇಶ, ನೆಲ ಮತ್ತು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕುʼ ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು, ಕವಿ ಜಂಬಣ್ಣ ಅಮರಚಿಂತ ಅವರ ಗಜಲ್ ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ʼದ್ವೇಷ ಮಾಡುವವರು ರಾಜ್ಯ ಕಟ್ಟಬಹುದು, ಮನಸ್ಸನ್ನಲ್ಲʼ ಎಂಬ ಕವಿವಾಣಿಯನ್ನು ಸ್ಮರಿಸಿ ಮೌಲ್ಯಾಧಾರಿತ ಬದುಕಿನ ಅಗತ್ಯತೆ ಕುರಿತು ವಿವರಿಸಿದರು.
ಇದನ್ನೂ ಓದಿ : ಮಹಿಳಾ ಮೀಸಲಾತಿ | ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ನೀಡುವುದರಲ್ಲಿ ತಪ್ಪೇನಿದೆ?
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ನಿಕಿತಾ ಪ್ರಾರ್ಥನೆ ಗೀತೆ ಹಾಡಿದರು. ಪ್ರಿಯಾ ಸದಾಫುಲೆ ಸ್ವಾಗತಿಸಿದರು. ಕಪಿಲ್ ಡೋಣಗಾಂವೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ಉತ್ತಮ ಜಾಧವ ನಿರೂಪಿಸಿದರು. ಆರತಿ ನೌಬಾದೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




