ಬೀದರ್‌ | ವಿವಿಧೆಡೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

Date:

ಬೀದರ್‌ ಜಿಲ್ಲೆಯ ವಿವಿಧೆಡೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಿಸಲಾಯಿತು.

- Advertisement -

ಔರಾದ್‌ ತಾಲೂಕಿನ ನಾಗೂರ(ಎಂ) ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂತಪುರ ಪೊಲೀಸ್ ಠಾಣೆಯ ಅಕ್ಕಪಡೆ ಸಹಯೋಗದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನ ಮತ್ತು ಅಕ್ಕಪಡೆಯಿಂದ ಮಹಿಳಾ ಸುರಕ್ಷತೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಶಾಲೆಯ ಮುಖ್ಯಗುರು ಶ್ರೀದೇವಿ ಹೂಗಾರ ಮಾತನಾಡಿ, ʼಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಅಕ್ಷರದ ಅವ್ವ ಎಂದೇ ಖ್ಯಾತಿ ಪಡೆದ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳಾ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಫುಲೆ ದಂಪತಿ ಸೇವೆ ಅನನ್ಯವಾಗಿದೆʼ ಎಂದರು.

ಸಂತಪುರ ಪೊಲೀಸ್ ಠಾಣೆ ಅಕ್ಕಪಡೆಯ ಮೀನಾಕ್ಷಿ ನಾಗೂರಕರ್ ಮಾತನಾಡಿ, ʼಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಅಕ್ಕಪಡೆ ನಿಮ್ಮ ಸೇವೆಗಾಗಿ ಸದಾ ಸಿದ್ದವಿದೆ. ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಉಚಿತ ಸಹಾಯವಾಣಿ 112 ಮತ್ತು ಮಕ್ಕಳ ಸಹಾಯವಾಣ 1098ಗೆ ಕರೆ ಮಾಡಿದರೇ ಅಕ್ಕಪಡೆ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬರಲಿದೆ ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್, ಬಾಲ್ಯವಿವಾಹ, ಪೋಕ್ಸೊ ಕಾಯ್ದೆ, ಮಹಿಳಾ ಸುರಕ್ಷತೆ, ಬಗ್ಗೆ ಮಾಹಿತಿ ನೀಡಿದರು.

ಅಕ್ಕಪಡೆಯಿಂದ ಜೋಜನಾ, ನಾಗುರ(ಎನ್) ಸೇರಿದಂತೆ ಇನ್ನಿತರ ಶಾಲೆಗಲಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.
ಸಂತಪುರ ದೀಪಾಲಯ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಸಿಸ್ಟರ್ ಲಿನೇಟ್, ನಾಗೇಶ ಪಟ್ನೆ, ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಗೌಡಾ, ಅನಿತಾ ಜೂಕಾಲೆ, ಸುರೇಖಾ, ಜ್ಯೋತಿ ಹಾಗೂ ವಿದ್ಯಾರ್ಥಿಗಳಿದ್ದರು.

ಔರಾದ್‌ : ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಫುಲೆ ಜಯಂತಿ ಆಚರಣೆ

ಔರಾದ್‌ ಪಟ್ಟಣದ ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

ಪಿಎಸ್‌ಐ ವಸೀಮ್ ಪಟೇಲ್‌‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಪರಿಶ್ರಮ ಅಗಾಧವಾಗಿದೆ. ಫುಲೆ ದಂಪತಿಯ ಸಾಮಾಜಿಕ ಪರಿವರ್ತನೆ ಇಂದಿನ ಸಮಾಜಕ್ಕೆ ಆದರ್ಶʼ ಎಂದರು.

WhatsApp Image 2026 01 03 at 2.51.22 PM

ಸಾಮಾಜಿಕ ಚಿಂತಕ ರಾಹುಲ್‌ ಖಂದಾರೆ ಮಾತನಾಡಿ, ʼದಲಿತರು, ಶೂದ್ರರು ಹಾಗೂ ಮಹಿಳೆಯರಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಾವಿತ್ರಿಬಾಯಿ ಫುಲೆ ಅವರು ಅನೇಕ ಅವಮಾನಗಳು ಎದುರಿಸಿ ಶಾಲೆಗಳನ್ನು ತೆರೆದರು. ಆದರೆ, ಇಂದಿನ ಶಿಕ್ಷಣ ಬಂಡವಾಳಶಾಹಿಗಳ ಕಪಿಮುಷ್ಠಿಯಿಂದಾಗಿ ದುಬಾರಿಯಾಗುತ್ತಿದೆʼ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ಶಿಂಧೆ, ಸುಭಾಷ್ ಲಾಧಾ, ಸಿದ್ಧಾರ್ಥ್ ಬೋಸ್ಲೆ, ಪ್ರವೀಣ್ ಕಾರಂಜೆ, ದಿನೇಶ ಶಿಂಧೆ, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ, ರಾಮ ಗುಡ್ಬೋಲೆ, ಅನಿಲ ಬುಜಂಗೆ, ಭೀಮರಾವ ಮುಂಗನಾಳ, ಬಸವರಾಜ ಕಾಂಬ್ಳೆ, ನಾಗನಾಥ ವಾಕೊಡೆ, ಪಂಡರಿ ಕಸ್ತೂರೆ ಸೇರಿ ಅನೇಕರಿದ್ದರು.

ಬೀದರ್‌ : ಮಹಿಳೆಯರ ಪಾಲಿನ ವಿದ್ಯಾ ದೇವತೆ ಸಾವಿತ್ರಿಬಾಯಿ ಫುಲೆ : ಉಷಾಬಾಯಿ ಬನ್ಸುಡೆ

ಬೀದರ ನಗರದ ಖಾಸಗಿ ಹೋಟೆಲನಲ್ಲಿ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ವತಿಯಿಂದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಅವರ 195 ನೇ ಜಯಂತಿ ಆಚರಣೆ ನಡೆಯಿತು.

WhatsApp Image 2026 01 04 at 7.40.17 AM

ಮಾಜಿ ಜಿ.ಪಂ ಉಪಾಧ್ಯಕ್ಷೆ ಉಷಾಬಾಯಿ ಬನ್ಸುಡೆ ಅವರು ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿ, ʼಭಾರತದ ಶೋಷಿತರು, ಹಿಂದುಳಿದವರು ಮತ್ತು ದಲಿತ ಮಹಿಳೆಯರ ಪಾಲಿನ ವಿದ್ಯಾ ದೇವತೆ ಸಾವಿತ್ರಿಬಾಯಿ ಫುಲೆ ಆಗಿದ್ದಾರೆ. ಇಂದು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವ ಪ್ರತಿ ಹೆಣ್ಣುಮಕ್ಕಳು ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸಬೇಕು. ಅವರ ಶಿಕ್ಷಣದ ಕ್ರಾಂತಿ ಮುನ್ನಡೆಸಬೇಕಾಗಿದೆʼ ಎಂದು ತಿಳಿಸಿದರು.

ಇದನ್ನೂ ಓದಿ : ಬೀದರ್‌ | ಮುಗಿಯದ ಸಮುದಾಯ ಮಹಿಳಾ ಶೌಚಾಲಯ ಕಾಮಗಾರಿ : ತೆರೆಯದ ಬಾಗಿಲು!

ಮನೆ-ಮನೆಗೆ ಅಂಬೇಡ್ಕರ್ ಅಭಿಯಾನದ ಮಹಿಳಾ ಸಮಿತಿ ಮುಖ್ಯಸ್ಥರಾದ ನಂದಮ್ಮಾ ಕುಂದೆ, ಸೊನ್ನಮ್ಮಾ ಕಸ್ತೂರೆ, ಶೆಶಿಕಲಾ ಕಾಂಬಳೆ, ಅಭಿಯಾನದ ಜಿಲ್ಲಾ ಯುವ ಅಧ್ಯಕ್ಷ ಪ್ರಕಾಶ ರಾವಣ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...

ಬೀದರ್‌ | ಬೈಕ್ ಅಪಘಾತ: ಇಬ್ಬರು ಯುವಕರು ಸಾವು

ನೆರೆಯ ತೆಲಂಗಾಣದ ಸಂಗಾರೆಡ್ಡಿ ಸಮೀಪ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ...

ಬೀದರ್‌ | 9 ವರ್ಷಗಳ ಹಿಂದೆ ಬೀದರ್‌ಗೆ ಆಗಮಿಸಿದ್ದ ನಟ ನಾನಾ ಪಾಟೇಕರ್

ಹೃದಯಾಘಾತದಿಂದ ನಿಧನರಾದ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್‌ಗೆ ಬೀದರ್...

ಬೀದರ್‌ | ನ.28, 29ರಂದು ಅನುಭವ ಮಂಟಪ ಉತ್ಸವ : ತುಮಕೂರು ಸಿದ್ಧಗಂಗೆ ಶ್ರೀಗಳಿಗೆ ಆಹ್ವಾನ

ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರದ ಅನುಭವ ಮಂಟಪ ಪರಿಸರದಲ್ಲಿ ನವೆಂಬರ್ 28...