ಬೀದರ್‌ | ಸ್ಲೀಪರ್‌ ಕೋಚ್ ಬಸ್‌ನಲ್ಲಿ ಚಾಲಕ ನೇಣಿಗೆ ಶರಣು

Date:

Advertisements

ಬೀದರ್‌ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಡಿಪೋ-1ರಲ್ಲಿ ನಿಲ್ಲಿಸಿದ್ದ ಸ್ಲೀಪರ್‌ ಕೋಚ್ ಬಸ್‌ನಲ್ಲಿ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ‌ದ್ದಾನೆ.

ಬೀದರ್ ತಾಲ್ಲೂಕಿನ ಆಣದೂರ ಗ್ರಾಮದ ರಾಜಕುಮಾರ (59) ಮೃತ ಚಾಲಕ. ‘ಬೀದರ್ ಟು ಬಳ್ಳಾರಿ ಸ್ಲೀಪರ್ ಕೋಚ್ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಡಿಪೋ-1ರಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ ಬುಧವಾರ ರಾತ್ರಿ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾನೆ.

“ಐದು ತಿಂಗಳಲ್ಲಿ ಅವರು ಕೆಲಸದಿಂದ ನಿವೃತ್ತರಾಗುವವರಿದ್ದರು. ಅವರ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನಷ್ಟೇ ಆತ್ಮಹತ್ಯೆಗೆ ಕಾರಣ ಗೊತ್ತಾಗಬೇಕಿದೆ” ಎಂದು ಬೀದರ್‌ನ ನೂತನ ನಗರ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಜಂಟಿ ಹೋರಾಟ ಸಮಿತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ರಾಜಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು” ಎಂದು ಆಗ್ರಹಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಮಹಾಮಳೆ | ಸೆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

ಬೀದರ್‌ ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ...

ಬೀದರ್‌ | ವ್ಯಾಪಕ ಮಳೆ : ಜಿಲ್ಲಾದ್ಯಂತ 27 ಸೇತುವೆ ಮುಳುಗಡೆ ;‌ 157 ಮನೆಗಳಿಗೆ ಹಾನಿ

ʼಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲಾದ್ಯಂತ...

ಬೀದರ್‌ | ʼರೈತರʼ ನೋವ ನೋಯದವರೆತ್ತ ಬಲ್ಲರೊ?

ʼನಾಲ್ಕು ಎಕರೆ ಜಮೀನು ಲಾವಣಿ ಪಡೆದು ಸೋಯಾಬಿನ್‌ ಬೆಳೆದಿದ್ದೇನೆ. ಇನ್ನೇನು ವಾರದಲ್ಲಿ...

ಬೀದರ್‌ | ಸಮೀಕ್ಷೆಗಿರುವ ನ್ಯೂನತೆ ಸರಿಪಡಿಸಲು ಸರ್ಕಾರಿ ನೌಕರರ ಸಂಘ ಆಗ್ರಹ

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ...

Download Eedina App Android / iOS

X