ವಿನ್ನರ್ ಹಾಗೂ ಸ್ಪರ್ಧಾ ಜಿನಿಯಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ನಗರದ ತಾಯಿ-ಮಗು ವೃತ್ತ ಸಮೀಪದ ನರ್ಚರ್ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ನಾಳೆ (ಜು.26) ಎಚ್.ಎಸ್.ಟಿ.ಆರ್, ಜಿ.ಪಿ.ಎಸ್.ಟಿ.ಆರ್, ಪಿ.ಎಸ್.ಟಿ.ಆರ್, ಕ್ರೈಸ್ ಶಿಕ್ಷಕ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಕಾನ್‍ಸ್ಟೆಬಲ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತು ತಂತ್ರಜ್ಞಾನ ಆಧಾರಿತ ಉಚಿತ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕಾರ್ಯಾಗಾರ ನಡೆಯಲಿದೆ. ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಡಾ.ವಿಜಯಕುಮಾರ ಎಂ.ವಿ. (ಮಗುವಿನ ಮನೋವಿಜ್ಞಾನ ಹಾಗೂ ಇಂಗ್ಲೀಷ್), ಬಸವರಾಜ ಜನಕಟ್ಟಿ (ಬೌದ್ಧಿಕ ಸಾಮಥ್ರ್ಯ ಮತ್ತು ಗಣಿತ), ಸಂಜಯ್ ಪಾಟೀಲ (ಅರ್ಥಶಾಸ್ತ್ರ) ಹಾಗೂ ಶಿಕ್ಷಣಾಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲಿರುವ ಜಿಲ್ಲೆಯ ಅಭ್ಯರ್ಥಿಗಳು ಕಾರ್ಯಾಗಾರದ ಲಾಭ ಪಡೆಯಬೇಕು ಎಂದು ಕೇಂದ್ರದ ನಿರ್ದೇಶಕಿ ಪೂಜಾ ಎಚ್.ಪಾಟೀಲ ಹಾಗೂ ಮಹಾದೇವಿ ಎಂ.ಬುಕ್ಕಾ ಕೋರಿದ್ದಾರೆ.
ಇದನ್ನೂ ಓದಿ : ಬೀದರ್ | ಬ್ರಿಮ್ಸ್‌ನಲ್ಲಿ ʼಮಮತೆಯ ತೊಟ್ಟಿಲುʼ ಉದ್ಘಾಟಿಸಿದ ಡಿಸಿ ಶಿಲ್ಪಾ ಶರ್ಮಾ
ಕಾರ್ಯಾಗಾರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 8970850873 ಅಥವಾ 9902580095 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.





