ಬೀದರ್ ನಗರದ ಕೆಎಲ್ಇ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಬಿ. ಕಲವಾಡಿಕರ್, ನಿರ್ದೇಶಕಿ ಕ್ರಾಂತಿ ಕಲವಾಡಿಕರ್, ಪ್ರಾಚಾರ್ಯ ಸಂಜಯ ಅತ್ರೆ ಸೇರಿದಂತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ರಿಯಾ ಮೋಸೆಸ್ ಶೇ.94.16, ಪ್ರಜ್ವಲ್ 92.83, ಶಾರೋನ್ ಶೇ.88.83, ನಿಕಿತಾ ಎನ್. ಶೇ.84.5, ಓಂಕಾರ ಆರ್. ಶೇ.83, ಭಕ್ತಿ ಆರ್. ಶೇ.83 ಅವರು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ : ಬೀದರ್ | ನಾಗರಿಕ ವಿಮಾನಯಾನ ಸೇವೆ ಮುಂದುವರಿಸಲು ಸಚಿವ ಈಶ್ವರ ಖಂಡ್ರೆ ಮನವಿ





