2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಕೀರ್ತಿ ತಂದಿದ್ದಾರೆ.
ಕಲಾ ವಿಭಾಗದಲ್ಲಿ ಕಾಲೇಜಿಗೆ ಶೇ 89.47ರಷ್ಟು ಫಲಿತಾಂಶ ದೊರೆತಿದ್ದು, ವಿಜ್ಞಾನ ವಿಭಾಗಕ್ಕೆ 97.56ರಷ್ಟು ಫಲಿತಾಂಶ ಬಂದಿದೆ. ಕಲಾ, ವಿಜ್ಞಾನ ಸೇರಿ ಒಟ್ಟು 60 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಮಮತಾ ಸಂಜುಕುಮಾರ ಶೇ 91.50 (549), ರಂಗಮ್ಮ ಬಸವರಾಜ ಶೇ 83.50 (501), ಭಾಗ್ಯವಂತಿ ವಿಶ್ವನಾಥ ಶೇ 79 (474) ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಾಧವ ಪ್ರಣವ ದಿನೇಶ 90.33 (542), ನಂದಿನಿ ಮಲ್ಲಿಕಾರ್ಜುನ 86.50 (519) ಸಿಂಧೆ ಪ್ರಣಾಲಿ ಜಯರಾಮ ಶೇ 85 (510) ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಇದನ್ನೂ ಓದಿ : ಬೀದರ್ | 371(ಜೆ) ಜಾರಿಯಾದರೂ ಕಲ್ಯಾಣ ಕರ್ನಾಟಕ ʼಚಹರೆʼ ಬದಲಾಗಲಿಲ್ಲ
ವಿದ್ಯಾರ್ಥಿಗಳ ಸಾಧನೆಗೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ವಿಜಯಕುಮಾರ ಒಳಕಿಂಡಿ, ಆಶಾ, ದತ್ತಾತ್ರಿ ಮಡಿವಾಳ, ಸಂಗೀತಾ, ಸುನೀತಾ ಲೀ ಸುರೇಶ ಚವ್ಹಾಣ, ಸೈಯದ್ ಆದಿಲ್ ಖಾದ್ರಿ, ಲಲಿತಾ ಬಿರಾದಾರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.





